ಅಮಿತ್ ಶಾ ಬೆಂಗಾವಲು ವಾಹನದಲ್ಲಿ ಸಾಗುತ್ತಿರುವುದು  
ದೇಶ

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಕರೆ: ಬೆಂಗಾವಲು ವಾಹನ ಸಂಖ್ಯೆ ಕಡಿತಗೊಳಿಸಿದ ಗೃಹ ಸಚಿವ ಅಮಿತ್ ಶಾ

ಭದ್ರತಾ ನಿಯಮಾವಳಿಗಳನ್ನು ಸಂಪೂರ್ಣವಾಗಿ ಕಾಪಾಡಿಕೊಂಡೇ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗೃಹ ಸಚಿವರ ಬೆಂಗಾವಲು ವಾಹನ ದಳದ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆ ಜವಾಬ್ದಾರಿಯುತ ಇಂಧನ ಬಳಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ “ಏಳು ಮನವಿಗಳ” ನಂತರ ತಮ್ಮ ಬೆಂಗಾವಲು ಪಡೆ ವಾಹನ ಸಂಖ್ಯೆಯನ್ನು ಅರ್ಧಕ್ಕಿಂತ ಕಡಿಮೆ ಮಾಡಿದ್ದಾರೆ.

ಭದ್ರತಾ ನಿಯಮಾವಳಿಗಳನ್ನು ಸಂಪೂರ್ಣವಾಗಿ ಕಾಪಾಡಿಕೊಂಡೇ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗೃಹ ಸಚಿವರ ಬೆಂಗಾವಲು ವಾಹನ ದಳದ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳ ಇತ್ತೀಚಿನ ಭೇಟಿಗಳ ವೇಳೆ ತಮ್ಮ ಬೆಂಗಾವಲು ವಾಹನ ದಳದ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿತಗೊಳಿಸಿದ್ದರೂ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ನಿಯಮಾವಳಿಗಳ ಪ್ರಕಾರ ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮುಂದುವರಿಸಿದ್ದರು.

ಹೈದರಾಬಾದ್‌ನಲ್ಲಿ ಮಾಡಿದ ಭಾಷಣದ ತಕ್ಷಣವೇ ಪ್ರಧಾನಿ ಈ ನಿರ್ಧಾರ ಜಾರಿಗೆ ತಂದಿದ್ದರು. ಆ ಭಾಷಣದಲ್ಲಿ ಅವರು, ಆಮದು ಇಂಧನದ ಅವಲಂಬನೆ ಕಡಿಮೆ ಮಾಡುವ ಮೂಲಕ ಹಾಗೂ ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಆರ್ಥಿಕ ಸ್ಥೈರ್ಯಕ್ಕೆ ಜನರು ಕೊಡುಗೆ ನೀಡಬೇಕು ಎಂದು ಮನವಿ ಮಾಡಿದ್ದರು.

ಪ್ರಧಾನಿಯವರ ಈ ಕರೆಗೆ ಸ್ಪಂದಿಸಿದ ಅಮಿತ್ ಶಾ ಕೂಡ ಭದ್ರತಾ ಕ್ರಮಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ತಮ್ಮ ಭದ್ರತಾ ದಳ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ತೀರ್ಮಾನಿಸಿದರು.

ಸತತ ಅಭಿವೃದ್ಧಿಗೆ ಉತ್ತೇಜನ ನೀಡುವ ಮತ್ತೊಂದು ಕ್ರಮವಾಗಿ, ಸಾಧ್ಯವಾದಲ್ಲಿ ಹೊಸ ವಾಹನ ಖರೀದಿಸದೆ ಈಗಿರುವ ಸಂಪನ್ಮೂಲಗಳಲ್ಲೇ ಎಲೆಕ್ಟ್ರಿಕ್ ವಾಹನಗಳನ್ನು (EV) ಪ್ರಧಾನಿಯವರ ಬೆಂಗಾವಲು ಪಡೆ ದಳದಲ್ಲಿ ಸೇರಿಸಲು ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಿಕಂದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶಭಕ್ತಿ ಎಂಬುದು ಕೇವಲ ಗಡಿಯಲ್ಲಿ ದೇಶ ರಕ್ಷಿಸುವುದಲ್ಲ, ದೈನಂದಿನ ಜೀವನದಲ್ಲೂ ಜವಾಬ್ದಾರಿಯುತ ನಡೆ ತೋರಿಸುವುದಾಗಿದೆ ಎಂದು ಹೇಳಿದರು.

ದೇಶಭಕ್ತಿ ಎಂದರೆ ಗಡಿಯಲ್ಲಿ ಪ್ರಾಣ ತ್ಯಾಗಕ್ಕೆ ಸಿದ್ಧರಾಗಿರುವುದಷ್ಟೇ ಅಲ್ಲ. ಇಂದಿನ ಸಂದರ್ಭದಲ್ಲಿ ಅದು ಜವಾಬ್ದಾರಿಯಿಂದ ಬದುಕುವುದು ಮತ್ತು ದಿನನಿತ್ಯದ ಜೀವನದಲ್ಲಿ ರಾಷ್ಟ್ರದತ್ತ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಜಾಗತಿಕ ಅಸ್ಥಿರತೆ ಮತ್ತು ಇಂಧನ ಬೆಲೆ ಏರಿಕೆಯ ಪರಿಣಾಮಗಳನ್ನು ಉಲ್ಲೇಖಿಸಿದ ಪ್ರಧಾನಿ, ಸಾರ್ವಜನಿಕ ಸಾರಿಗೆ, ಕಾರ್-ಪೂಲಿಂಗ್ ಮತ್ತು ವಿದ್ಯುತ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವಂತೆ ಜನರಿಗೆ ಮನವಿ ಮಾಡಿದರು.

ಅದೇ ರೀತಿ, ಅಡುಗೆ ಎಣ್ಣೆಯ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಅದರ ಬಳಕೆಯನ್ನು ಕಡಿಮೆ ಮಾಡಬೇಕೆಂದು ಅವರು ಜನರಿಗೆ ಕೋರಿದರು. ರೈತರು ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿಯತ್ತ ಸಾಗಬೇಕೆಂದೂ ಪ್ರಧಾನಿ ಸಲಹೆ ನೀಡಿದರು.

ಅಡುಗೆ ಎಣ್ಣೆಯ ವಿಷಯದಲ್ಲಿಯೂ ಇದೇ ಅನ್ವಯಿಸುತ್ತದೆ. ಅದನ್ನು ಆಮದು ಮಾಡಲು ನಾವು ವಿದೇಶಿ ವಿನಿಮಯ ವೆಚ್ಚ ಮಾಡಬೇಕಾಗುತ್ತದೆ. ಪ್ರತಿಯೊಂದು ಕುಟುಂಬವೂ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿದರೆ, ಅದು ದೇಶಭಕ್ತಿಗೆ ದೊಡ್ಡ ಕೊಡುಗೆ ಆಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೆಶೆಲ್ಸ್‌ನಿಂದ ಪ್ರಧಾನಿ ಮೋದಿಗೆ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಗೌರವ: ಹಿಂದೂ ಮಹಾಸಾಗರ ಅವಕಾಶಗಳ ಆಗರ

ರಾಮ ಮಂದಿರ ದೇಣಿಗೆ ದುರುಪಯೋಗ ಕೇಸ್: ಆರೋಪಿಗಳ ಪರ ವಾದಿಸಲು ವಕೀಲರ ಹಿಂದೇಟು; ಬುಲ್ಡೋಜರ್ ಕ್ರಮಕ್ಕೆ ಆಗ್ರಹ!

India vs Ireland 2nd t20: ಭಾರತಕ್ಕೆ ಸೋಲು; 1 ರನ್ ನಿಂದ ಗೆದ್ದ ಐರ್ಲೆಂಡ್ ಗೆ ಸರಣಿ!

ಲೋಹದ ಹಕ್ಕಿಗಳ ಪ್ರತ್ಯೇಕ ಅಪಘಾತ: ಸೌದಿ 14 ಹಾಗೂ ಫ್ರಾನ್ಸ್‌ನಲ್ಲಿ 11 ಸೇರಿ 25 ಮಂದಿ ದುರ್ಮರಣ

ಟೆಸ್ಟ್ ಪಂದ್ಯದ ಮಧ್ಯೆ ಬೆನ್ ಸ್ಟೋಕ್ಸ್ ಹಠಾತ್ ನಿವೃತ್ತಿ ಘೋಷಿಸಿ, ಕ್ರಿಕೆಟ್‌ಗೆ ವಿದಾಯ!