Cm ವಿಜಯ್ - ತ್ರಿಶಾ 
ದೇಶ

ತಮಿಳುನಾಡು CM ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನಟಿ ತ್ರಿಶಾಗೆ ವಿಜಯ್‌ ಬಿಗ್‌ ಗಿಫ್ಟ್‌!

ಸಿಎಂ ದಳಪತಿ ವಿಜಯ್ ಅವರ ಈ ನಡೆ ತಮಿಳು ಚಲನಚಿತ್ರೋದ್ಯಮದ ಗಮನ ಸೆಳೆದಿದೆ.

ಚೆನ್ನೈ: ದಳಪತಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಎರಡು ದಿನಗಳಲ್ಲೇ ತಮಿಳು ಚಲನಚಿತ್ರೋದ್ಯಮದ ಗಮನ ಸೆಳೆಯುವಂತಹ ಮಹತ್ವ ನಿರ್ಧಾರ ತೆಗೆದುಕೊಂಡಿದ್ದಾರೆ.

ನಟಿ ತ್ರಿಶಾ ಮತ್ತು ಸೂರ್ಯ ಅಭಿನಯದ `ಕರುಪ್ಪ್' ಚಿತ್ರದ ನಿರ್ಮಾಪಕರ ಬೆಂಬಲಕ್ಕೆ ಧಾವಿಸಿದ ಸಿಎಂ ವಿಜಯ್ ಅವರು, ಬೆಳಗ್ಗೆ 9 ಗಂಟೆಯ ಫಸ್ಟ್ ಶೋಗೆ ವಿಶೇಷ ಅನುಮತಿ ನೀಡಿದ್ದಾರೆ.

ಆರ್ ಜೆ ಬಾಲಾಜಿ ನಿರ್ದೇಶನದ ಆಕ್ಷನ್ ಸಿನಿಮಾ ಕರುಪ್ಪ್ ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಿಜಯ್ ಅವರ ಈ ನಡೆ ತಮಿಳು ಚಲನಚಿತ್ರೋದ್ಯಮದ ಗಮನ ಸೆಳೆದಿದೆ. ಕರುಪ್ಪ್ ಸಿನಿಮಾಗೆ ಸಿಎಂ ವಿಜಯ್ ಅವರು ದಿನಕ್ಕೆ 5 ಶೋಗಳಿಗೆ ಅನುಮತಿ ನೀಡಿದ್ದಾರೆ. ಜೊತೆಗೆ ಶೋ ಸಮಯದಲ್ಲಿ ಚಿತ್ರಮಂದಿರದ ಮಾಲೀಕರು ಜನದಟ್ಟಣೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ವಿಶೇಷ ಅನುಮತಿ ನೀಡಿದ್ದಕ್ಕೆ ಕರುಪ್ಪ್ ಸಿನಿಮಾ ನಿರ್ಮಾಪಕರು ಸಿಎಂ ವಿಜಯ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬೆಳಗ್ಗೆ 9 ಗಂಟೆಗಿಂತ ಮುಂಚೆ ಥಿಯೇಟರ್‌ಗಳಲ್ಲಿ ಸಿನಿಮಾ ಶೋಗೆ ಅವಕಾಶವಿಲ್ಲ. ಸಿನಿಮಾ ರಿಲೀಸ್ ಆದ ಮೊದಲ ದಿನ ಫಸ್ಟ್ ಶೋ ವೇಳೆ ಅಭಿಮಾನಿಗಳ ಅತಿರೇಕದ ವರ್ತನೆ, ಟ್ರಾಫಿಕ್ ಸಮಸ್ಯೆ, ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಬೆಳಿಗ್ಗೆ 11 ಅಥವಾ 12 ಗಂಟೆಗೆ ಮೊದಲ ಶೋ ಆರಂಭವಾಗುತ್ತದೆ. ಒಂದು ವೇಳೆ ಅದಕ್ಕೂ ಮುಂಚೆ ಶೋ ನಿಗದಿಪಡಿಸಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: B ಖಾತಾದಿಂದ A ಖಾತಾ ಪರಿವರ್ತನೆಗೆ ಗೈಡ್‌ಲೈನ್ಸ್‌ ವ್ಯಾಲ್ಯೂ ಶೇ. 2ಕ್ಕೆ ಇಳಿಕೆ!

Video: ಕೇರಳದಲ್ಲಿ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್‌ ವಾರ್; ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಆಕ್ರೋಶ!

ಮಣಿಪುರ: ಹೊಂಚು ಹಾಕಿ ಉಗ್ರರ ದಾಳಿ; ಕುಕಿ ಚರ್ಚ್‌ನ ಮೂವರು ನಾಯಕರು ಬಲಿ, ನಾಲ್ವರಿಗೆ ಗಾಯ

ಈ 6 ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಿದ ಏರ್ ಇಂಡಿಯಾ; ಕಾರಣ ಏನು ಗೊತ್ತಾ?

ಸ್ಪೀಕರ್ ಯು.ಟಿ. ಖಾದರ್ ಮೇಲೆ ಹಲ್ಲೆಗೆ ಯತ್ನ: 11 ಜನರ ವಿರುದ್ಧ ಪ್ರಕರಣ ದಾಖಲು

SCROLL FOR NEXT