ಭೋಜಶಾಲೆ - ಮಸೀದಿ 
ದೇಶ

ಭೋಜಶಾಲಾ ಸರಸ್ವತಿ ದೇವಸ್ಥಾನಕ್ಕೆ ಸೇರಿದ್ದು; ಮಸೀದಿಗೆ ಪರ್ಯಾಯ ಭೂಮಿ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಮುಸ್ಲಿಮರು ಮತ್ತು ಹಿಂದೂಗಳು ಆ ಸ್ಥಳದಲ್ಲಿ ಬೇರೆ ಬೇರೆ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI)ಯ 2003 ರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಭೋಪಾಲ್: ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಿ ದೇವಸ್ಥಾನಕ್ಕೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರ ಪೀಠವು, ಮುಸ್ಲಿಮರು ಮತ್ತು ಹಿಂದೂಗಳು ಆ ಸ್ಥಳದಲ್ಲಿ ಬೇರೆ ಬೇರೆ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI)ಯ 2003 ರ ಆದೇಶವನ್ನು ರದ್ದುಗೊಳಿಸಿದೆ.

ವಿವಾದಿತ ರಚನೆಯು ಸಂರಕ್ಷಿತ ಸ್ಮಾರಕವಾಗಿದೆ. ಆದರೆ ಅದರ ಧಾರ್ಮಿಕ ಲಕ್ಷಣವು ದೇವಾಲಯದ್ದಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಮಸೀದಿಗೆ ಪರ್ಯಾಯ ಭೂಮಿ ಹಂಚಿಕೆಗಾಗಿ ಮುಸ್ಲಿಂ ಸಮುದಾಯದ ಸದಸ್ಯರು ಅರ್ಜಿ ಸಲ್ಲಿಸಿದರೆ ರಾಜ್ಯ ಸರ್ಕಾರವನ್ನು ಅದನ್ನು ಕಾನೂನಿನ ಪ್ರಕಾರ ಪರಿಶೀಲಿಸಬಹುದು ಎಂದು ಹೈಕೋರ್ಟ್ ಹೇಳಿದೆ.

"ವಿವಾದಿತ ಪ್ರದೇಶದ ಭೋಜಶಾಲಾ ಸಂಕೀರ್ಣ ಮತ್ತು ಕಮಲ್ ಮೌಲಾ ಮಸೀದಿಯ ಧಾರ್ಮಿಕ ಸ್ವರೂಪವು ಸರಸ್ವತಿ ದೇವಿಯ ದೇವಾಲಯವನ್ನು ಹೊಂದಿರುವ ಭೋಜಶಾಲಾ ಎಂದು ಪರಿಗಣಿಸಲಾಗಿದೆ" ಎಂದು ನ್ಯಾಯಾಲಯ ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಐತಿಹಾಸಿಕ ದಾಖಲೆಗಳು, ಪುರಾತತ್ತ್ವ ಶಾಸ್ತ್ರದ ವಸ್ತುಗಳು ಮತ್ತು ASI ಸಂಶೋಧನೆಗಳನ್ನು ಆಧರಿಸಿ, ನ್ಯಾಯಾಲಯವು ಈ ಸ್ಥಳ ಐತಿಹಾಸಿಕವಾಗಿ ಸರಸ್ವತಿ ದೇವಿಗೆ ದೇವಾಲಯಕ್ಕೆ ಸೇರಿದ್ದು, ಸಂಸ್ಕೃತ ಕಲಿಕೆಯ ಕೇಂದ್ರವಾಗಿತ್ತು ಎಂದು ತೀರ್ಮಾನಿಸಿದೆ.

ವಿವಾದ ಸ್ಥಳದಲ್ಲಿ ಹಿಂದೂ ಪೂಜಾ ಹಕ್ಕುಗಳನ್ನು ಪುನಃಸ್ಥಾಪಿಸಲು ಮತ್ತು ಸಂಕೀರ್ಣದೊಳಗೆ ನಮಾಜ್‌ಗೆ ಅವಕಾಶ ನೀಡುವ ASIಯ 2003ರ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು.

ಪುರಾತತ್ವ ಮತ್ತು ಐತಿಹಾಸಿಕ ಪುರಾವೆಗಳು, ASI ವರದಿಗಳು ಹಾಗೂ ಸುಪ್ರೀಂ ಕೋರ್ಟ್‌ನ ಅಯೋಧ್ಯಾ ತೀರ್ಪನ್ನು ಪೂರ್ವನಿದರ್ಶನವಾಗಿ ಪರಿಗಣಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಭಾರತ ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧ: ಯುಎಇಯಲ್ಲಿ ಮೋದಿ

ಇಂಧನ ಬೆಲೆ ಏರಿಕೆ ನಡುವೆ ಯುಎಇಗೆ ಪ್ರಧಾನಿ; ಎಲ್ ಪಿಜಿ, ರಕ್ಷಣಾ ಪಾಲುದಾರಿಕೆಯಲ್ಲಿ ಮಹತ್ವದ ಒಪ್ಪಂದ

West Bengal: ಭಬಾನಿಪುರ ಉಳಿಸಿಕೊಂಡು, ನಂದಿಗ್ರಾಮ ಸ್ಥಾನಕ್ಕೆ ಸುವೇಂದು ಅಧಿಕಾರಿ ರಾಜೀನಾಮೆ!

'ಅಕ್ರಮ ಮತ್ತೆ ನಡೆಯಲು ಅವಕಾಶ ಕೊಡುವುದಿಲ್ಲ'; ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್; Video

Fuel Price Hike: ತರಕಾರಿ, ಧಾನ್ಯಗಳಿಂದ ಹಿಡಿದು ಕ್ಯಾಬ್ ರೈಡ್ ವರೆಗೆ, ಮುಂಬರುವ ದಿನಗಳಲ್ಲಿ ಏನೆಲ್ಲ ದುಬಾರಿ?

SCROLL FOR NEXT