ನವದೆಹಲಿ: ಅನೇಕ ಕಾರಣಗಳಿಂದ ನಮಗೆ ಅಮೆರಿಕ ಮೇಲೆ ನಂಬಿಕೆಯಿಲ್ಲ. ಆದರೆ, ಅಮೆರಿಕನ್ನರು ಇರಾನಿಯನ್ನರನ್ನು ನಿಸ್ಸಂದೇಹವಾಗಿ ನಂಬಬಹುದು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಮಾತನಾಡಿದ ಅರಘ್ಚಿ, ಅಮೆರಿಕನ್ನರು ನಮ್ಮನ್ನು ನಂಬಲು ಎಲ್ಲ ಕಾರಣಗಳು ಇರುವಾಗ, ಅಮೆರಿಕವನ್ನು ನಂಬದಿರಲು ಇರಾನ್‌ಗೆ ಎಲ್ಲ ಕಾರಣಗಳಿವೆ. ಉಭಯ ರಾಷ್ಟ್ರಗಳ ಮಾತುಕತೆ ನಂಬಿಕೆಯ ಕೊರತೆಯಿಂದ ಯಶಸ್ವಿಯಾಗುತ್ತಿಲ್ಲ ಎಂದರು.
ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಘ್ಚಿ, ಇರಾನ್ ವಿರುದ್ಧದ ಯುದ್ಧದಲ್ಲಿ ಗುರಿ ಸಾಧಿಸುವಲ್ಲಿ ಹತಾಶರಾದ ನಂತರ ಅವರು ಮಾತುಕತೆ ನಡೆಸಲು ಮುಂದಾದರು. "ನಮಗೆ ಅಮೆರಿಕನ್ನರಲ್ಲಿ ನಂಬಿಕೆಯಿಲ್ಲ. ಇದೇ ರಾಜತಾಂತ್ರಿಕ ಪ್ರಯತ್ನದ ದಾರಿಯಲ್ಲಿ ಪ್ರಮುಖ ಅಡಚಣೆಯಾಗಿದೆ ಎಂದು ಹೇಳಿದರು.
ಇರಾನ್ ಗೌರವದ ಭಾಷೆಗೆ ಮಾತ್ರ ಉತ್ತರಿಸುತ್ತೆ: ದ್ವೇಷದ ಹೊರತಾಗಿಯೂ, ಇರಾನಿಯನ್ನರು ರಾಜತಾಂತ್ರಿಕತೆಗೆ ಅವಕಾಶ ನೀಡಲು ಬಯಸುತ್ತಿರುವುದರಿಂದ ಅಲುಗಾಡುವ" ಕದನ ವಿರಾಮ ಜಾರಿಯಲ್ಲಿದೆ. ಇರಾನ್‌ಗೆ ಸಂಬಂಧಿಸಿದ ಯಾವುದಕ್ಕೂ ಮಿಲಿಟರಿ ಪರಿಹಾರ ಎಂಬಂತೆ ಕಾಣುತ್ತಿಲ್ಲ. ಅವರು ನಮ್ಮನ್ನು ಪದೇ ಪದೇ ಪರೀಕ್ಷಿಸಿದ್ದಾರೆ. ನಾವು ಯಾವುದೇ ಒತ್ತಡ ಅಥವಾ ಬೆದರಿಕೆಗೆ ಎಂದಿಗೂ ಮಣಿಯುವುದಿಲ್ಲ. ಯಾವುದೇ ನಿರ್ಬಂಧವನ್ನು ವಿರೋಧಿಸುತ್ತೇವೆ. ಇರಾನಿನ ಜನರು ಗೌರವದ ಭಾಷೆಗೆ ಮಾತ್ರ ಉತ್ತರಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು.
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಭಾರತದ ಪಾತ್ರ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಮಾತನಾಡಿದ ಅರಘ್ಚಿ, ನವದೆಹಲಿ ಹೆಚ್ಚಿನ ಪಾತ್ರ" ವಹಿಸಬಹುದು. ಭಾರತದ ಯಾವುದೇ ರಚನಾತ್ಮಕ ಪಾತ್ರವನ್ನು ನಾವು ಸ್ವಾಗತಿಸುತ್ತೇವೆ" ಎಂದು ಅವರು ಹೇಳಿದರು.
ಚೀನಿಯರು ಒಳ್ಳೆಯ ಉದ್ದೇಶ ಹೊಂದಿದ್ದಾರೆ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಪರಿಹರಿಸಲು ಚೀನಾ ಸೇರಿದಂತೆ ಯಾವುದೇ ರೀತಿಯ ಬೆಂಬಲಕ್ಕೆ ನಾವು ಮುಕ್ತರಾಗಿದ್ದೇವೆ. ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ದೇಶವನ್ನು, ವಿಶೇಷವಾಗಿ ಚೀನಾವನ್ನು ನಾವು ಪ್ರಶಂಸಿಸುತ್ತೇವೆ. ನಾವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ನಾವು ಪರಸ್ಪರ ಕಾರ್ಯತಂತ್ರದ ಪಾಲುದಾರರು, ಮತ್ತು ಚೀನಿಯರು ಒಳ್ಳೆಯ ಉದ್ದೇಶ ಹೊಂದಿದ್ದಾರೆಂದು ನಮಗೆ ತಿಳಿದಿದೆ. ಆದ್ದರಿಂದ ರಾಜತಾಂತ್ರಿಕತೆಗೆ ನೆರವಾಗಬಹುದಾದ ಯಾವುದೇ ಕೆಲಸವನ್ನು ಇಸ್ಲಾಮಿಕ್ ಗಣರಾಜ್ಯವು ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
ಇದೇ ಸಭೆ ವೇಳೆ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಜಾಗತಿಕ ಇಂಧನ ಪೂರೈಕೆಗೆ ತೀವ್ರವಾಗಿ ಅಡ್ಡಿಪಡಿಸಬಹುದು ಎಂದು ಎಚ್ಚರಿಸಿದರು.
ಹಾರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿ "ತುಂಬಾ ಜಟಿಲವಾಗಿದೆ" ಎಂದು ಅರಾಗ್ಚಿ ಒಪ್ಪಿಕೊಂಡರು, ಆದರೆ ಇರಾನ್ ಷರತ್ತುಬದ್ಧ ಸಹಕಾರದ ನಿಲುವನ್ನು ಕಾಯ್ದುಕೊಂಡಿದೆ. ನಮ್ಮದು ಕಾಳಜಿಯಷ್ಟೇ, ಯುದ್ಧದಲ್ಲಿರುವ ಆ ದೇಶಗಳ ಹಡಗುಗಳನ್ನು ಹೊರತುಪಡಿಸಿ ಎಲ್ಲರಿಗೂ ಹಾರ್ಮುಜ್ ಮುಕ್ತವಾಗಿದೆ" ಎಂದು ಇರಾನಿನ ಸಚಿವರು ಹೇಳಿದರು.