ಕಿರಣ್ ರಿಜಿಜು online desk
ದೇಶ

ಪೆಟ್ರೋಲ್-ಡೀಸೆಲ್ ಬೆಲೆ 3 ರೂ ಏರಿಕೆ: ಜಾಗತಿಕ ಬಿಕ್ಕಟ್ಟು ನಡುವೆಯೂ ಭಾರತದಲ್ಲಿ ಇಂಧನ ದರ ಏರಿಕೆ ಅತ್ಯಂತ ಕಡಿಮೆ; ಕೇಂದ್ರ ಸರ್ಕಾರ ಸಮರ್ಥನೆ

ಹಲವಾರು ದೇಶಗಳಲ್ಲಿ ಇಂಧನ ದರಗಳು ಶೇ.20 ರಿಂದ ಶೇ.100 ವರೆಗೆ ಹೆಚ್ಚಳ ಕಂಡಿದ್ದರೆ, ಭಾರತದಲ್ಲಿ ಪೆಟ್ರೋಲ್‌ ದರ ಸುಮಾರು ಶೇ.3.2 ಮತ್ತು ಡೀಸೆಲ್‌ ಶೇ. 3.4 ಮಾತ್ರ ಏರಿಕೆಯಾಗಿದೆ.

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಹಲವು ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ತೀವ್ರವಾಗಿ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಇಂಧನ ದರ ಏರಿಕೆಯನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಪೆಟ್ರೋಲ್–ಡೀಸೆಲ್ ಬೆಲೆ ತಲಾ ರೂ.3 ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಇಂಧನ ದರ ಏರಿಕೆ ಜಾಗತಿಕ ಹೋಲಿಕೆಯಲ್ಲಿ ಅತ್ಯಲ್ಪವಾಗಿದೆ ಎಂದು ಹೇಳಿದ್ದಾರೆ.

ಹಲವಾರು ದೇಶಗಳಲ್ಲಿ ಇಂಧನ ದರಗಳು ಶೇ.20 ರಿಂದ ಶೇ.100 ವರೆಗೆ ಹೆಚ್ಚಳ ಕಂಡಿದ್ದರೆ, ಭಾರತದಲ್ಲಿ ಪೆಟ್ರೋಲ್‌ ದರ ಸುಮಾರು ಶೇ.3.2 ಮತ್ತು ಡೀಸೆಲ್‌ ಶೇ. 3.4 ಮಾತ್ರ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸರ್ಕಾರದ ಕ್ರಮವನ್ನು “ಜನಹಿತದ ಆರ್ಥಿಕ ನಿರ್ವಹಣೆ” ಎಂದು ಹೇಳಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ $100 ದಾಟಿದ ಸಂದರ್ಭದಲ್ಲೂ, ಸಾರ್ವಜನಿಕ ವಲಯದ ತೈಲ ಕಂಪನಿಗಳು ತಾತ್ಕಾಲಿಕವಾಗಿ ನಷ್ಟವನ್ನು ಹೊತ್ತುಕೊಂಡು ಗ್ರಾಹಕರ ಮೇಲೆ ತಕ್ಷಣದ ಭಾರ ಬೀಳದಂತೆ ನೋಡಿಕೊಂಡಿವೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೂ ಶ್ಲಾಘಿಸಿರುವ ಅವರು, ಆರ್ಥಿಕ ಸ್ಥಿರತೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ಸಮತೋಲನಗೊಳಿಸುವ ನೀತಿಯನ್ನು ಅನುಸರಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಜಾಗತಿಕ ಇಂಧನ ಬೆಲೆ ಏರಿಕೆಯ ಅಂಕಿಅಂಶಗಳನ್ನೂ ರಿಜಿಜು ಅವರು ಹಂಚಿಕೊಂಡಿದ್ದಾರೆ. ಈ ಅಂಕಿಅಂಶಗಳಲ್ಲಿ ಮಲೇಷ್ಯಾದಲ್ಲಿ ಪೆಟ್ರೋಲ್ ದರ ಸುಮಾರು ಶೇ.89.7 ಮತ್ತು ಡೀಸೆಲ್ ಶೇ.112.7 ಏರಿಕೆಯಾಗಿದ್ದರೆ, ಅಮೆರಿಕದಲ್ಲಿ ಪೆಟ್ರೋಲ್ ಶೇ.44 ಹಾಗೂ ಡೀಸೆಲ್ ಶೇ.48.1ರಷ್ಟು ಹೆಚ್ಚಳ ಕಂಡಿದೆ. ಚೀನಾದಲ್ಲಿ ಪೆಟ್ರೋಲ್ ಶೇ.21.7 ಮತ್ತು ಡೀಸೆಲ್ ಶೇ.23.7ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್ ಹಾಗೂ ಡೀಸೆಲ್'ಗೆ ರೂ.3ರಷ್ಟು ದರವನ್ನು ಹೆಚ್ಚಿಸಿದ್ದು, ಇದರಿಂದ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.94.77 ರಿಂದ ರೂ.97.77 ಕ್ಕೆ ಹಾಗೂ ಡೀಸೆಲ್ ರೂ.87.67 ರಿಂದ ರೂ.90.67 ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!