ದೆಹಲಿ ಕರ್ನಾಟಕ ಭವನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ  
ದೇಶ

'ವಂದೇ ಮಾತರಂ' ವಿವಾದ: ದೆಹಲಿ ಕರ್ನಾಟಕ ಭವನದಲ್ಲಿ ಗೀತೆಯ 5ನೇ ಚರಣಕ್ಕೆ ನಿಲ್ಲಿಸುವಂತೆ ಸೂಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಷ್ಟ್ರಗೀತೆ ನಂತರ ಆರು ಚರಣಗಳ ವಂದೇ ಮಾತರಂ ಗಾಯನ ಆರಂಭವಾಗುತ್ತಿದ್ದಂತೆ, ವೇದಿಕೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸನ್ನೆ ಮೂಲಕ ಗಾಯನವನ್ನು ತಕ್ಷಣವೇ ನಿಲ್ಲಿಸುವಂತೆ ಆಯೋಜಕರಿಗೆ ಸೂಚಿಸಿದರು.

ನವದೆಹಲಿ: ವಂದೇ ಮಾತರಂ ಗೀತೆ ಹಾಡಿನ ಬಗ್ಗೆ ಈ ಹಿಂದೆ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಿವಾದ ಉಂಟಾಗಿತ್ತು. ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಚರಣಗಳ ಗಾಯನಕ್ಕೆ ಸಂಬಂಧಿಸಿದಂತೆ ಕೆಲಕಾಲ ತೀವ್ರ ಗೊಂದಲ ಸೃಷ್ಟಿಯಾಗಿತ್ತು ಎಂದು ತಿಳಿದುಬಂದಿದೆ.

ರಾಷ್ಟ್ರಗೀತೆ ನಂತರ ಆರು ಚರಣಗಳ ವಂದೇ ಮಾತರಂ ಗಾಯನ ಆರಂಭವಾಗುತ್ತಿದ್ದಂತೆ, ವೇದಿಕೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸನ್ನೆ ಮೂಲಕ ಗಾಯನವನ್ನು ತಕ್ಷಣವೇ ನಿಲ್ಲಿಸುವಂತೆ ಆಯೋಜಕರಿಗೆ ಸೂಚಿಸಿದರು.

ಐದನೇ ಚರಣ ತಲುಪುತ್ತಿದ್ದಂತೆ ಸನ್ನೆ ಮೂಲಕ ಸಿದ್ದರಾಮಯ್ಯ ಸೂಚನೆ

ಕರ್ನಾಟಕ ಭವನದ ಸಿಬ್ಬಂದಿ ಹಾಗೂ ಗಾಯಕರು ವಂದೇ ಮಾತರಂ ಹಾಡನ್ನು ಸತತವಾಗಿ ಆರು ಚರಣಗಳವರೆಗೂ ಹಾಡಲು ಪ್ರಾರಂಭಿಸಿದ್ದರು. ಆಗ ಮಾಜಿ ಸಿಎಂ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ಹಿರಿಯ ನಾಯಕರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಗಾಯನವು 5ನೇ ಚರಣಕ್ಕೆ ತಲುಪುತ್ತಿದ್ದಂತೆ ಸಿದ್ದರಾಮಯ್ಯ, ಕೈಸನ್ನೆ ಮಾಡುವ ಮೂಲಕ ಆಯೋಜಕರಿಗೆ ಹಾಡನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದರು. ಸಿಎಂ ಸೂಚನೆ ನೀಡುತ್ತಿದ್ದಂತೆಯೇ ಕರ್ನಾಟಕ ಭವನದ ಸಿಬ್ಬಂದಿ ಗಾಯನವನ್ನು ಅರ್ಧಕ್ಕೇ ಸ್ಥಗಿತಗೊಳಿಸಿದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Google Lens ಬಳಸಿ ರಾಜ್ಯಕ್ಕೆ ಟಾಪರ್! VAO ಪರೀಕ್ಷೆಯಲ್ಲಿ 151 ಮಾರ್ಕ್ಸ್ ಪಡೆದಿದ್ದ ಶಂಕರ ಬನ್ನೂರ ಕಳ್ಳಾಟ ಬಯಲು, ಪೊಲೀಸ್ ವಶಕ್ಕೆ

ಕನ್ನಡ ಬಾವುಟದ ವಿನ್ಯಾಸ ಬದಲು: ಹಳದಿ-ಕೆಂಪು ಕನ್ನಡ ಧ್ವಜಕ್ಕೆ ಮತ್ತೊಂದು ಬಣ್ಣ, ಮಧ್ಯದಲ್ಲಿ ರಾಜ್ಯ ಲಾಂಛನ; ಡಿಕೆಶಿ ಮಹತ್ವದ ಘೋಷಣೆ

71ನೇ ಕನ್ನಡ ರಾಜ್ಯೋತ್ಸವ: ನಾಡದೇವತೆ ಭುವನೇಶ್ವರಿಗೆ ಪುಷ್ಪಾರ್ಚನೆ; ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆ.ಶಿವಕುಮಾರ್

INDIA ಕೂಟದ ಬೃಹತ್ ರ‍್ಯಾಲಿಗೆ ರಾಮಲೀಲಾ ಮೈದಾನ ಸಜ್ಜು: ದೆಹಲಿಗೆ ರಾಜಕೀಯ ನಾಯಕರ, ಬೆಂಬಲಿಗರ ಆಗಮನ

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ