ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ Online Desk
ದೇಶ

ವರ್ಷಕ್ಕೆ 23 ಸಾವಿರ ಕೋಟಿ ಹೊರೆ: ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ

ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ತಮಗೆ ಸಿಗುತ್ತಿರುವ 125 ಯೂನಿಟ್‌ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪಾಟ್ನಾ (ಬಿಹಾರ): ಚುನಾವಣೆಗೂ ಮುನ್ನ ಎಲ್ಲರಿಗೂ ಉಚಿತ ವಿದ್ಯುತ್ ಎಂದು ಘೋಷಿಸುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಯೋಜನೆ ಜಾರಿ ಮಾಡಿ, ನಂತರ ಅದಕ್ಕೆ ಹಣ ಜೋಡಿಸಲು ತೀವ್ರ ಕಷ್ಟ ಪಡುತ್ತವೆ. ಅದಕ್ಕೆ ಬಿಹಾರದ ಈ ಉದಾಹರಣೆಯೇ ಸಾಕ್ಷಿ. ಹೌದು, ಬಿಹಾರದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ತಮಗೆ ಸಿಗುತ್ತಿರುವ 125 ಯೂನಿಟ್‌ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸಬ್ಸಿಡಿಯನ್ನು ಸರ್ಕಾರಕ್ಕೆ ಮರಳಿ ನೀಡಿದರೆ...

ಪಾಟ್ನಾದಲ್ಲಿ ನಡೆದ ಎರಡು ದಿನಗಳ ಪಾಟಲಿಪುತ್ರ ರಾಷ್ಟ್ರೀಯ ಯುವ ಸಂಸತ್ತು-2.0 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಪ್ರಸ್ತುತ ಬಿಹಾರದಲ್ಲಿ ಆರ್ಥಿಕ ತಾರತಮ್ಯವಿಲ್ಲದೆ ಎಲ್ಲಾ ವರ್ಗಗಳ ಗ್ರಾಹಕರಿಗೂ ಪ್ರತಿ ತಿಂಗಳು 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ತೆರಿಗೆ ಪಾವತಿದಾರರು ತಮಗಾಗಿ ನಿಗದಿಪಡಿಸಿರುವ ಈ ಸಬ್ಸಿಡಿಯನ್ನು ಸರ್ಕಾರಕ್ಕೆ ಮರಳಿ ನೀಡಿದರೆ, ಆ ಹಣವನ್ನು ರಾಜ್ಯದ ಇತರ ಮೂಲಸೌಕರ್ಯ ಮತ್ತು ಯುವಕರ ಅಭಿವೃದ್ಧಿಗೆ ಬಳಸಬಹುದು. ಈ ಮೂಲಕ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕೋರಿದ್ದಾರೆ.

ಕೋಟಿಗಟ್ಟಲೆ ಸಬ್ಸಿಡಿ ಹೊರೆ2025ರ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಅಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಸರ್ಕಾರವು ಯಾವುದೇ ಆರ್ಥಿಕ ತಾರತಮ್ಯವಿಲ್ಲದೆ ರಾಜ್ಯದ ಎಲ್ಲಾ ಗೃಹ ಬಳಕೆದಾರರಿಗೂ ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಸದ್ಯ ಸರ್ಕಾರವು ಈ ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕವಾಗಿ ಬರೋಬ್ಬರಿ ₹23,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಅಂದರೆ ಪ್ರತಿ ಕುಟುಂಬಕ್ಕೆ ಸರಾಸರಿ ವರ್ಷಕ್ಕೆ ₹8,000 ರಿಂದ ₹10,000 ರಷ್ಟು ಸಬ್ಸಿಡಿ ವೆಚ್ಚವಾಗುತ್ತಿದೆ.

ಒಟ್ಟಾರೆಯಾಗಿ, ಕೇಂದ್ರ ಸರ್ಕಾರದ LPG ಸಬ್ಸಿಡಿ ಬಿಟ್ಟುಕೊಡಿ ಅಭಿಯಾನದ ಮಾದರಿಯಲ್ಲೇ, ಈಗ ಬಿಹಾರದಲ್ಲೂ ಉಚಿತ ವಿದ್ಯುತ್ ಸೌಲಭ್ಯವನ್ನು ಬಿಟ್ಟುಕೊಡುವಂತೆ ಶ್ರೀಮಂತ ವರ್ಗಕ್ಕೆ ಮನವಿ ಮಾಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಮೃತದೇಹ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ

ತಾರಕಕ್ಕೇರಿದ ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!