ಸಾಂದರ್ಭಿಕ ಚಿತ್ರ  
ದೇಶ

ನರಬಲಿಗಾಗಿ ತನ್ನ ಏಕೈಕ ಮಗನನ್ನೇ ಕೊಂದ ತಂದೆ; ಬಳಿಕ ಮೃತದೇಹದ ಪಕ್ಕದಲ್ಲೇ ಮಲಗಿದ ಪಾಪಿ!

ಈ ಘಟನೆಯು ಭಾನುವಾರ ರಾತ್ರಿ ಸಾನಂದ್ ತಾಲೂಕಿನ ವಿಂಛಿಯಾ ಗ್ರಾಮದಲ್ಲಿ ನಡೆದಿದೆ. ಆರೋಪಿ ನರೇಶ್ ಪಟೇಲ್(ಕೃಷಿ ಕಾರ್ಮಿಕ) ತನ್ನ ಮನೆಯಲ್ಲಿ ಹೆತ್ತ ಮಗನನ್ನೇ ನರಬಲಿ ಕೊಟ್ಟಿದ್ದಾವೆ.

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗನ ತಲೆಯನ್ನು ಮನೆಯಲ್ಲಿದ್ದ ದೇವತೆಯ ಪೀಠಕ್ಕೆ ಪದೇ ಪದೇ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಮಗುವಿನ ಮೃತದೇಹದ ಪಕ್ಕದಲ್ಲೇ ಮಲಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಘಟನೆಯು ಭಾನುವಾರ ರಾತ್ರಿ ಸಾನಂದ್ ತಾಲೂಕಿನ ವಿಂಛಿಯಾ ಗ್ರಾಮದಲ್ಲಿ ನಡೆದಿದೆ. ಆರೋಪಿ ನರೇಶ್ ಪಟೇಲ್(ಕೃಷಿ ಕಾರ್ಮಿಕ) ತನ್ನ ಮನೆಯಲ್ಲಿ ಹೆತ್ತ ಮಗನನ್ನೇ ನರಬಲಿ ಕೊಟ್ಟಿದ್ದಾವೆ.

ನರೇಶ್ ತನ್ನ ಮಗ ಕರಣ್‌ನೊಂದಿಗೆ ಒಬ್ಬನೇ ಮನೆಯಲ್ಲಿ ವಾಸಿಸುತ್ತಿದ್ದನು. ಆತನ ಪತ್ನಿ ಭಾರ್ತಿಬೆನ್, ಪತಿಯೊಂದಿಗೆ ಜಗಳ ಮಾಡಿಕೊಂಡು ತನ್ನ ತವರು ಮನೆ ಸೇರಿದ್ದರು ಎಂದು ಸಾನಂದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಚೌಹಾಣ್ ತಿಳಿಸಿದ್ದಾರೆ.

ಭಾರ್ತಿಬೆನ್ ನೀಡಿರುವ ದೂರಿನ ಪ್ರಕಾರ, ಕುಟುಂಬದಲ್ಲಿ ಬೇರೆ ಯಾರೂ 'ಭುವಾ' (ಸಮುದಾಯ ಮತ್ತು ದೇವತೆಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಸಾಂಪ್ರದಾಯಿಕ ಆಚರಣೆಗಳನ್ನು ಮಾಡುವ ವ್ಯಕ್ತಿ) ಆಗಬಾರದು ಎಂಬ ಕಾರಣಕ್ಕೆ, ತಾನು ತನ್ನ ಏಕೈಕ ಮಗನನ್ನು ದೇವತೆಯ ಪೀಠದ ಬಳಿ ಬಲಿ ಕೊಟ್ಟಿದ್ದಾಗಿ ಪಟೇಲ್ ಆಕೆಗೆ ಹೇಳಿದ್ದಾನೆ.

"ಈ ವ್ಯಕ್ತಿ ಮನೆಯಲ್ಲಿದ್ದ ದೇವತೆಯ ಸಣ್ಣ ಪೀಠದ ಬಳಿ ತನ್ನ ಮಗನನ್ನು ಕೊಲೆ ಮಾಡಿ, ನಂತರ ಮೃತದೇಹದ ಪಕ್ಕದಲ್ಲಿ ಮಂಚದ ಮೇಲೆ ಮಲಗಿಕೊಂಡಿದ್ದನು. ಆತ ತೀವ್ರ ಮಾನಸಿಕ ಅಸ್ವಸ್ಥನಾಗಿದ್ದಾನೆ. ಪತಿಯೊಂದಿಗೆ ಜಗಳವಾಡಿದ ನಂತರ ಆತನ ಪತ್ನಿ ತನ್ನ ತವರು ಮನೆಗೆ ಹೋಗಿದ್ದಳು" ಎಂದು ಚೌಹಾಣ್ ಹೇಳಿದ್ದಾರೆ.

ಮಗ ಶಾಲೆಗೆ ಹೋಗಬೇಕಿದ್ದರಿಂದ ಭಾರ್ತಿಬೆನ್ ಅವನನ್ನು ತಂದೆಯ ಬಳಿಯೇ ಬಿಟ್ಟು ಹೋಗಿದ್ದರು. ಭಾನುವಾರ ರಾತ್ರಿ, ನೆರೆಹೊರೆಯವರು ಆಕೆಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ.

ರಾತ್ರಿ 9.30ರ ಸುಮಾರಿಗೆ ಆಕೆ ಗ್ರಾಮಕ್ಕೆ ತಲುಪಿದಾಗ, ಕರಣ್ ಮಂಚದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಬಂದಿದೆ.

ಎಫ್‌ಐಆರ್ (FIR) ಪ್ರಕಾರ, ಪಟೇಲ್ ಅವನ ಪಕ್ಕದಲ್ಲೇ ಮಲಗಿದ್ದನು ಮತ್ತು ಅವನ ಬಟ್ಟೆಗಳಿಗೆ ರಕ್ತ ಅಂಟಿಕೊಂಡಿತ್ತು.

ಏನಾಯಿತು ಎಂದು ಭಾರ್ತಿಬೆನ್ ತನ್ನ ಪತಿಯನ್ನು ಕೇಳಿದಾಗ, ತನ್ನ ತಂದೆ ದೇವತೆಯ 'ಭುವಾ' ಆಗಿದ್ದರು ಮತ್ತು ತಾನು ಅವರ ನಂತರ ಆ ಜವಾಬ್ದಾರಿ ವಹಿಸಿಕೊಂಡಿದ್ದೆ ಎಂದು ಆತ ಹೇಳಿದ್ದಾನೆ. ಆದರೆ ತನ್ನ ನಂತರ ಕುಟುಂಬದಲ್ಲಿ ಬೇರೆ ಯಾರೂ ಭುವಾ ಆಗಬಾರದು ಎಂಬ ಉದ್ದೇಶದಿಂದ ಮಗನನ್ನು ಬಲಿ ಕೊಟ್ಟಿದ್ದಾಗಿ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪಟೇಲ್‌ನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಸ್ಟಿಂಗ್ ಆಪರೇಷನ್' ವಿವಾದ: ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕನ ಜೊತೆಗೆ ಸಿಎಂ ಡಿಕೆಶಿ ಸಂಬಂಧ! CDR ಬಿಡುಗಡೆ, ಕೃಪಾ ಆಳ್ವರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ? ಕುಮಾರಸ್ವಾಮಿ

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಪಾರ್ಥೀವ ಶರೀರ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ

'ತಮಿಳುನಾಡಿಗೆ ರಾಷ್ಟ್ರಧ್ವಜಕ್ಕೆ ಸಮಾನವಾಗಿ ಪ್ರತ್ಯೇಕ ಧ್ವಜ ಬೇಕು'; TVK ಸಚಿವರ ಆಗ್ರಹಕ್ಕೆ ಬಿಜೆಪಿ ಕಿಡಿ

ತಾರಕಕ್ಕೇರಿದ ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ