ತಮಿಳುನಾಡಿಗೆ ಪ್ರತ್ಯೇಕ ಧ್ವಜಕ್ಕೆ ಬೇಡಿಕೆ ಇಟ್ಟ ಸಚಿವ 
ದೇಶ

'ತಮಿಳುನಾಡಿಗೆ ರಾಷ್ಟ್ರಧ್ವಜಕ್ಕೆ ಸಮಾನವಾಗಿ ಪ್ರತ್ಯೇಕ ಧ್ವಜ ಬೇಕು'; TVK ಸಚಿವರ ಆಗ್ರಹಕ್ಕೆ ಬಿಜೆಪಿ ಕಿಡಿ

ಕರ್ನಾಟಕ ಮತ್ತು ತಮಿಳುನಾಡು ನಡುವೆ ಭಾಷೆ, ಗಡಿ ವಿಚಾರಗಳಲ್ಲಿ ಸದಾ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇರುತ್ತದೆ. ಈಗ ತಮಿಳುನಾಡಿನ ಸಚಿವರೊಬ್ಬರು ನೀಡಿರುವ ಹೇಳಿಕೆ ಹೊಸ ಸಂಚಲನ ಸೃಷ್ಟಿಸಿದೆ.

ಚೆನ್ನೈ: ತಮಿಳುನಾಡಿಗೆ ತ್ರಿವರ್ಣ ಧ್ವಜದ ಮಾದರಿಯಲ್ಲೇ ಪ್ರತ್ಯೇಕ ರಾಜ್ಯ ಧ್ವಜ ರೂಪಿಸಬೇಕು ಎಂದು ಟಿವಿಕೆ (TVK) ಸಚಿವ ಆದವ್ ಅರ್ಜುನ ಆಗ್ರಹಿಸಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಭಾಷೆ, ಗಡಿ ವಿಚಾರಗಳಲ್ಲಿ ಸದಾ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇರುತ್ತದೆ. ಈಗ ತಮಿಳುನಾಡಿನ ಸಚಿವರೊಬ್ಬರು ನೀಡಿರುವ ಹೇಳಿಕೆ ಹೊಸ ಸಂಚಲನ ಸೃಷ್ಟಿಸಿದೆ.

ತಮಿಳುನಾಡು ಸರ್ಕಾರದ ವತಿಯಿಂದ ಚೆನ್ನೈನ ಮ್ಯೂಸಿಯಂ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ 'ತಮಿಳುನಾಡು ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆದವ್ ಅರ್ಜುನ, 'ತಮಿಳುನಾಡಿಗೆ ತ್ರಿವರ್ಣ ಧ್ವಜದ ಮಾದರಿಯಲ್ಲೇ ಪ್ರತ್ಯೇಕ ರಾಜ್ಯ ಧ್ವಜ ರೂಪಿಸಬೇಕು ಮತ್ತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೇ ಮೊದಲ ಬಾರಿಗೆ ಈ ಧ್ವಜವನ್ನು ಹಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ನವೆಂಬರ್ 1ರಂದು ಆಚರಿಸುವ ತಮಿಳುನಾಡು ದಿನ ಸೇರಿದಂತೆ ರಾಜ್ಯದಾದ್ಯಂತ ಪ್ರತ್ಯೇಕ ಧ್ವಜ ಹಾರಿಸಬೇಕು. ಪ್ರತಿ ವರ್ಷ ನವೆಂಬರ್ 1 ಮತ್ತು ಜುಲೈ 18 ರಂದು ಮುಖ್ಯಮಂತ್ರಿಗಳು ಈ ಧ್ವಜವನ್ನು ಹಾರಿಸಬೇಕು ಹಾಗೂ ರಾಜ್ಯದ ಪ್ರತಿಯೊಂದು ಮನೆಯಲ್ಲೂ ಇದನ್ನು ಪ್ರದರ್ಶಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅವರ ಬೇಡಿಕೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಪ್ರತ್ಯೇಕ ಧ್ವಜದ ಬಗ್ಗೆ ಪರಿಶೀಲನೆ: ಸಚಿವ ರಾಜ್‌ಮೋಹನ್

ಇನ್ನೊಂದೆಡೆ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮಾದರಿಯಲ್ಲಿ ತಮಿಳುನಾಡಿಗೂ ಪ್ರತ್ಯೇಕ ರಾಜ್ಯ ಧ್ವಜ ಪರಿಚಯಿಸುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸಲಿದೆ ಎಂದು ತಮಿಳುನಾಡು ಸಚಿವ ರಾಜ್‌ಮೋಹನ್ ಭಾನುವಾರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್ 1ನ್ನು ಅಧಿಕೃತವಾಗಿ ತಮಿಳುನಾಡು ದಿನವೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

ಬಿಜೆಪಿ ಕಿಡಿ

ಸಚಿವರ ಈ ಹೇಳಿಕೆಗೆ ಬಿಜೆಪಿ ತಮಿಳುನಾಡು ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಮಿಳು ಮತ್ತು ಭಾರತೀಯ ಅಸ್ಮಿತೆಗಳನ್ನು ಪರಸ್ಪರ ವಿರುದ್ಧವಾಗಿ ಬಿಂಬಿಸುವ ಮೂಲಕ ಪ್ರತ್ಯೇಕತಾವಾದಿ ಮನೋಭಾವಕ್ಕೆ ಸಚಿವರು ಉತ್ತೇಜನ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ವಿನೋದ್ ಪಿ. ಸೆಲ್ವಂ ಟೀಕಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, "ನಮ್ಮ ಭಾಷೆಗೆ ನಿಮ್ಮ ಧ್ವಜದ ಅಗತ್ಯವಿರಲಿಲ್ಲ. ನಮ್ಮ ನಾಗರಿಕತೆಗೆ ನಿಮ್ಮ ಪ್ರಮಾಣಪತ್ರ ಬೇಕಿಲ್ಲ. ಭಾರತೀಯ ತ್ರಿವರ್ಣ ಧ್ವಜದ ಕೆಳಗೆ ಇರುವುದರಿಂದ ನಮ್ಮ ತಮಿಳು ಅಸ್ಮಿತೆ ಎಂದಿಗೂ ಕುಂದುವುದಿಲ್ಲ" ಎಂದು ಹೇಳಿದ್ದಾರೆ.

"ಇಂತಹ ಹೇಳಿಕೆಗಳು ತಮಿಳು ಮತ್ತು ಭಾರತೀಯ ಅಸ್ಮಿತೆಗಳನ್ನು ಪರಸ್ಪರ ಸ್ಪರ್ಧಾತ್ಮಕ ನಿಷ್ಠೆಗಳಂತೆ ನೋಡುವ ಪ್ರತ್ಯೇಕತಾವಾದಿ ಮನೋಭಾವವನ್ನು ಬೆಳೆಸುವ ಅಪಾಯವಿದೆ. ಎರಡರ ಬಗ್ಗೆಯೂ ಹೆಮ್ಮೆಪಡಬೇಕಾದ ಸಂದರ್ಭದಲ್ಲಿ ಅನಗತ್ಯವಾಗಿ ವಿಭಜನೆಯನ್ನು ಏಕೆ ಸೃಷ್ಟಿಸಬೇಕು?" ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಧಾರ್ಮಿಕ ಸ್ಥಳಗಳಲ್ಲಿ ತಮಿಳು ಭಾಷೆಯ ಬಳಕೆಯ ವಿಚಾರವನ್ನೂ ಪ್ರಸ್ತಾಪಿಸಿರುವ ಬಿಜೆಪಿ ನಾಯಕ, "ತಮಿಳು ಭಾಷೆಯೇ ನಿಜವಾಗಿಯೂ ನಿಮ್ಮ ಕಾಳಜಿಯಾಗಿದ್ದರೆ, ಆ ನಿಯಮ ಎಲ್ಲ ಧರ್ಮಗಳಿಗೂ ಅನ್ವಯಿಸಬೇಕು. ಹಿಂದೂ ದೇವಾಲಯಗಳಲ್ಲಿ ತಮಿಳು ಭಾಷೆಗೆ ಒತ್ತಾಯಿಸುವ ನೀವು ಚರ್ಚ್‌ಗಳು ಮತ್ತು ಮಸೀದಿಗಳಲ್ಲೂ ತಮಿಳು ಭಾಷೆಯ ಬಳಕೆಗೆ ಆಗ್ರಹಿಸುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಮೃತದೇಹ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ

ತಾರಕಕ್ಕೇರಿದ ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!