ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ online desk
ದೇಶ

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ 23 ಭಾರತೀಯರ ಸಾವು: MEA

"ಪಶ್ಚಿಮ ಏಷ್ಯಾದ ಸಂಘರ್ಷದಲ್ಲಿ ನಾವು 23 ಭಾರತೀಯರನ್ನು ಕಳೆದುಕೊಂಡಿದ್ದೇವೆ, ಅವರಲ್ಲಿ 15 ಮಂದಿ ಭಾರತೀಯ ನಾವಿಕರಾಗಿದ್ದರು" ಎಂದು ಜೈಸ್ವಾಲ್ ಹೇಳಿದರು.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 15 ಭಾರತೀಯ ನಾವಿಕರು ಸೇರಿದಂತೆ ಒಟ್ಟು 23 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೆ, ಕಪ್ಪು ಸಮುದ್ರ (Black Sea) ಪ್ರದೇಶದಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆದ ದಾಳಿಗಳಲ್ಲಿ ಐವರು ಭಾರತೀಯರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಂಗಳವಾರ ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಡೆಸುವ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ, ಜೈಸ್ವಾಲ್ ಅವರು ಈ ಎರಡು ಪ್ರದೇಶಗಳಲ್ಲಿ ಸಂಭವಿಸಿದ ಭಾರತೀಯರ ಸಾವುನೋವುಗಳ ಅಂಕಿಅಂಶಗಳನ್ನು ಹಂಚಿಕೊಂಡರು. ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಕಪ್ಪು ಸಮುದ್ರದಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಗಳ ಪರಿಣಾಮವನ್ನು ಅವರು ಈ ಸಂದರ್ಭದಲ್ಲಿ ಎತ್ತಿ ತೋರಿಸಿದರು.

"ಪಶ್ಚಿಮ ಏಷ್ಯಾದ ಸಂಘರ್ಷದಲ್ಲಿ ನಾವು 23 ಭಾರತೀಯರನ್ನು ಕಳೆದುಕೊಂಡಿದ್ದೇವೆ, ಅವರಲ್ಲಿ 15 ಮಂದಿ ಭಾರತೀಯ ನಾವಿಕರಾಗಿದ್ದರು" ಎಂದು ಜೈಸ್ವಾಲ್ ಹೇಳಿದರು.

ಕಪ್ಪು ಸಮುದ್ರ ಪ್ರದೇಶದಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆದ ದಾಳಿಗಳಲ್ಲಿ ಎಷ್ಟು ಭಾರತೀಯರು ಮೃತಪಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯದ ವಕ್ತಾರರು, ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ದೃಢಪಡಿಸಿದರು.

"ಕಪ್ಪು ಸಮುದ್ರ ಪ್ರದೇಶದಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆದ ದಾಳಿಗಳಲ್ಲಿ ಎಷ್ಟು ಭಾರತೀಯರು ಮೃತಪಟ್ಟಿದ್ದಾರೆ ಎಂಬ ಪ್ರಶ್ನೆಯೂ ಇತ್ತು. ಅಲ್ಲಿ ನಾವು ಐವರು ಭಾರತೀಯರನ್ನು ಕಳೆದುಕೊಂಡಿದ್ದೇವೆ ಮತ್ತು ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ" ಎಂದು ಜೈಸ್ವಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೇಲ್‌ಗೆ ವಾರ್ಷಿಕ 3.8 ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ: ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಟ್ರಂಪ್ ಘೋಷಣೆ

'2 ವಿಮಾನ, 6 ನಿವೇಶನ': EDಯಿಂದ ಅನಿಲ್ ಅಂಬಾನಿ ಸಮೂಹದ ₹510 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ!

ಪ್ರಧಾನಿ ಮೋದಿ ಮನೆ ಸಮೀಪದ ಮಸೀದಿ ನಂತರ ಮತ್ತೊಂದು ಮಸೀದಿ ತೆರವಿಗೆ ಕೇಂದ್ರ ನಿರ್ಧಾರ; ಹೈಕೋರ್ಟ್‌ಗೆ ಮಾಹಿತಿ!

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ; ಬಂಧನಕ್ಕೆ ಆಗ್ರಹ; Video

ಕೊಲೆಯಾದ ಬಳಿಕ ದೆವ್ವವಾಗಿ ಕಾಡಿದ ಸ್ನೇಹಿತ; ಕಾಟ ತಾಳದೇ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಯುವಕ!