ಪರಿಸರ ಕಾಳಜಿಗೆ ಧರ್ಮದ ಬಣ್ಣ ಬೇಡ ಎನ್ನುತ್ತಾ ದಿಯಾ ಮಿರ್ಜಾ ವಿಡಿಯೋ ರೀಅಪ್‌ಲೋಡ್ ಮಾಡಲು ಬಿಎಂಸಿಗೆ ಹೈಕೋರ್ಟ್ ಆದೇಶ Online Desk
ದೇಶ

ಭಾರತ ಒಂದು ಜಾತ್ಯತೀತ ರಾಷ್ಟ್ರ; ಪರಿಸರ ಕಾಳಜಿಗೆ ಧರ್ಮದ ಬಣ್ಣ ಬೇಡ ಎಂದ ಹೈಕೋರ್ಟ್: ದಿಯಾ ಮಿರ್ಜಾ ವಿಡಿಯೋ ರೀ-ಅಪ್‌ಲೋಡ್ ಮಾಡಲು ಆದೇಶ

ಭಾರತವು ಒಂದು ಜಾತ್ಯತೀತ ರಾಷ್ಟ್ರ ದೇಶವಲ್ಲವಾ? ಪರಿಸರ ಕಾಳಜಿಯ ವಿಷಯದಲ್ಲಿ ಯಾವುದೇ ಧಾರ್ಮಿಕ ಕೋನ ಅಥವಾ ಬಣ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಮೂಲಕ ಬಿಎಂಸಿಗೆ ನಟಿ ದಿಯಾ ಮಿರ್ಜಾ ಅವರ ವಿಡಿಯೋವನ್ನು ರೀಅಪ್‌ಲೋಡ್ ಮಾಡಲು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ಭಾರತವು ಒಂದು ಜಾತ್ಯತೀತ ರಾಷ್ಟ್ರ ದೇಶವಲ್ಲವಾ? ಪರಿಸರ ಕಾಳಜಿಯ ವಿಷಯದಲ್ಲಿ ಯಾವುದೇ ಧಾರ್ಮಿಕ ಕೋನ ಅಥವಾ ಬಣ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಮೂಲಕ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ಪರಿಸರ ಸ್ನೇಹಿ ಮತ್ತು ಪಟಾಕಿ ಮುಕ್ತ ದೀಪಾವಳಿ ಆಚರಣೆಗೆ ಮನವಿ ಮಾಡಿದ್ದ ನಟಿ ದಿಯಾ ಮಿರ್ಜಾ ಅವರ ವಿಡಿಯೋವನ್ನು ಮರು ಅಪ್‌ಲೋಡ್ ಮಾಡಲು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಮುಂಬೈನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ, ಪಟಾಕಿ ಮುಕ್ತ ಮತ್ತು ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಬಿಎಂಸಿ ಜಾಗೃತಿ ಅಭಿಯಾನ ನಡೆಸಿತ್ತು. ಇದಕ್ಕಾಗಿ ದಿಯಾ ಮಿರ್ಜಾ, ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಸೇರಿದಂತೆ ಹಲವು ಗಣ್ಯರ ವಿಡಿಯೋ ಸಂದೇಶಗಳನ್ನು ಬಿಎಂಸಿ ಹಂಚಿಕೊಂಡಿತ್ತು. ಆದರೆ, ದಿಯಾ ಮಿರ್ಜಾ ಅವರು ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದ್ದ ವಿಡಿಯೋವನ್ನು ಬಿಜೆಪಿ ನಾಯಕರು ಆಕ್ಷೇಪಿಸಿದ್ದರು. ಅದರಂತೆ, ಮುಂಬೈ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಅಮೀತ್ ಸಾತಮ್ ಅವರು, "ದೀಪಾವಳಿ ಆಚರಣೆಯ ಕುರಿತು ದಿಯಾ ಮಿರ್ಜಾ ಅವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ, ಇದು ಹಿಂದೂ ವಿರೋಧಿ" ಎಂದು ಆರೋಪಿಸಿದ್ದರು. ಈ ರಾಜಕೀಯ ಒತ್ತಡಕ್ಕೆ ಮಣಿದ ಬಿಎಂಸಿ ಭಾನುವಾರ ದಿಯಾ ಮಿರ್ಜಾ ಅವರ ವಿಡಿಯೋವನ್ನು ಮಾತ್ರ ಡಿಲೀಟ್ ಮಾಡಿತ್ತು. ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ವಿಡಿಯೋಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.

ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಡಾ. ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. "ಕೇವಲ ಬೇರೆ ಧರ್ಮದವರು ಎಂಬ ಕಾರಣಕ್ಕೆ ಒಬ್ಬರ ಭಾಗವಹಿಸುವಿಕೆಯನ್ನು ನೀವು ಹೇಗೆ ವಿರೋಧಿಸುತ್ತೀರಿ? ನಾವೇನು ಜಾತ್ಯತೀತ ದೇಶವಲ್ಲವೇ? ಮಾಲಿನ್ಯ ಮತ್ತು ಆರೋಗ್ಯದ ಬಗ್ಗೆ ಮಾತನಾಡುವಾಗ ಬಣ ರಾಜಕಾರಣಕ್ಕೆ ಜಾಗವಿಲ್ಲ. ಪ್ರತಿಯೊಬ್ಬರೂ ಒಂದೇ ಗಾಳಿಯನ್ನು ಉಸಿರಾಡುತ್ತಿದ್ದಾರೆ" ಎಂದು ನ್ಯಾಯಪೀಠವು ರಾಜಕಾರಣಿಗಳ ನಡೆಗೆ ತರಾಟೆಗೆ ತೆಗೆದುಕೊಂಡಿತು. ಜೊತೆಗೆ, ನಟಿ ದಿಯಾ ಮಿರ್ಜಾ ಅವರು ಕೋರ್ಟ್ ಆದೇಶದ ಅನ್ವಯವೇ ಪರಿಸರ ಕಾಳಜಿಯ ಉತ್ತಮ ಸಂದೇಶ ನೀಡಿದ್ದಾರೆ. ಹಾಗಾಗಿ, ರಾಜಕಾರಣಿಗಳ ಸಣ್ಣ ಆಕ್ಷೇಪಣೆಗಳಿಗೆ ಬಿಎಂಸಿ ತಕ್ಷಣವೇ ಮಣಿಯುವ ಅಗತ್ಯವಿರಲಿಲ್ಲ ಎಂದು ಕೋರ್ಟ್ ಹೇಳಿದ್ದು, ಜನರ ವಿಶ್ವಾಸ ಮರುಗಳಿಸಲು ವಿಡಿಯೋವನ್ನು ಮತ್ತೆ ಅಪ್‌ಲೋಡ್ ಮಾಡಲು ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

ಕಾಂಗ್ರೆಸ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ: ಪೋಸ್ಟರ್ ಸಮರ ಬೆನ್ನಲ್ಲೇ 'ಈ ನನ್ನ ಮಕ್ಕಳು' ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಮಹಿಳೆಗೆ ಚಾಕು ತೋರಿಸಿ, ಒತ್ತೆಯಾಳಾಗಿಸಿಕೊಂಡು ದರೋಡೆಗೆ ಯತ್ನ; ಮಂಗಳಸೂತ್ರ ಕಿತ್ತುಕೊಂಡ ದುಷ್ಕರ್ಮಿಗೆ 'ಧರ್ಮದೇಟು'! Video

RTGS ಚೋರ್ ಬಿವೈ ವಿಜಯೇಂದ್ರ: ಈ ನನ್ ಮಕ್ಕಳು ಎಂದಿದ್ದಕ್ಕೆ BYV ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಸಮರ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ‘ಮುರಸು’; ಧರೆಗುರುಳಿದ ಸಾವಿರಾರು ಮರಗಳು, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತ; Video