ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪ ಸ್ಫೋಟ 
ದೇಶ

ಭಾರತ-ಪಾಕ್ ಗಡಿ ಸಮೀಪ ರಾಜಸ್ಥಾನದಲ್ಲಿ ಸ್ಫೋಟ: ರೈಲು ಸ್ಫೋಟಿಸುವ ಸಂಚು?

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಸದ್ದು ಸುಮಾರು 200 ಮೀಟರ್ ದೂರದವರೆಗೂ ಕೇಳಿಸಿದೆ ಎನ್ನಲಾಗಿದೆ. ಸ್ಫೋಟದ ಪರಿಣಾಮ ರೈಲು ಹಳಿಯ ಕೆಳಭಾಗದಲ್ಲಿ ಸುಮಾರು ಎರಡು ಅಡಿ ಆಳದ ಕುಳಿಯೂ ನಿರ್ಮಾಣವಾಗಿದೆ.

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪ ಸ್ಫೋಟ ಸಂಭವಿಸಿ ರೈಲು ಹಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಅನುಪ್‌ಗಢ ಮತ್ತು ಸೂರತ್‌ಗಢ ನಡುವಿನ ರೈಲು ಸಂಚಾರವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

ಅನುಪ್‌ಗಢ-ಸೂರತ್‌ಗಢ ರೈಲು ಮಾರ್ಗದ 50 ಜಿಬಿ ಪ್ರದೇಶದ ಸಮೀಪ ಸ್ಫೋಟ ಸಂಭವಿಸಿದ್ದು, ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್ ಕಂಬಗಳಿಗೆ ಹಾನಿಯಾಗಿದೆ. ಅಲ್ಲದೆ, ರೈಲು ಹಳಿಯ ಕೆಲವು ಸ್ಲೀಪರ್‌ಗಳಿಗೂ (ಹಳಿಗೆ ಆಧಾರವಾಗಿರುವ ಕಾಂಕ್ರೀಟ್ ರಚನೆಗಳು) ಹಾನಿಯಾಗಿದೆ.

ಪ್ರಯಾಣಿಕರ ರೈಲನ್ನು ಸ್ಫೋಟಿಸಲು ಸಂಚು?

ಕಳೆದ ರಾತ್ರಿ ಸುಮಾರು 9 ಗಂಟೆಗೆ ಅನುಪ್‌ಗಢದಿಂದ ಸೂರತ್‌ಗಢಕ್ಕೆ ತೆರಳುತ್ತಿದ್ದ ರೈಲು ಈ ಪ್ರದೇಶವನ್ನು ದಾಟಿದ ಸುಮಾರು 45 ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಸದ್ದು ಸುಮಾರು 200 ಮೀಟರ್ ದೂರದವರೆಗೂ ಕೇಳಿಸಿದೆ ಎನ್ನಲಾಗಿದೆ. ಸ್ಫೋಟದ ಪರಿಣಾಮ ರೈಲು ಹಳಿಯ ಕೆಳಭಾಗದಲ್ಲಿ ಸುಮಾರು ಎರಡು ಅಡಿ ಆಳದ ಕುಳಿಯೂ ನಿರ್ಮಾಣವಾಗಿದೆ.

ಘಟನೆಯ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳ (ATS), ಅಪರಾಧ ತನಿಖಾ ಇಲಾಖೆ (CID), ಶ್ವಾನದಳ, ಭದ್ರತಾ ಸಂಸ್ಥೆಗಳು ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ನಸುಕಿನ 2 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ತಂಡ ಸ್ಥಳಕ್ಕೆ ಆಗಮಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅನುಪ್‌ಗಢ ಮತ್ತು ಸೂರತ್‌ಗಢ ನಡುವಿನ ರೈಲು ಸಂಚಾರವನ್ನು ಬೆಳಗ್ಗೆ 9 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶ್ರೀಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್, ಅನುಪ್‌ಗಢ-ಸೂರತ್‌ಗಢ ರೈಲು ಮಾರ್ಗದ 50 ಜಿಬಿ ಗ್ರಾಮದ ಸಮೀಪ ಸಂಭವಿಸಿದ ಶಂಕಿತ ಸ್ಫೋಟದಲ್ಲಿ ರೈಲು ಹಳಿಗೆ ಆಧಾರವಾಗಿದ್ದ ಎರಡು ಸಿಮೆಂಟ್ ಕಂಬಗಳಿಗೆ ಹಾನಿಯಾಗಿದೆ. ಸಾಕ್ಷ್ಯಾಧಾರಗಳ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡವನ್ನು ಸ್ಥಳಕ್ಕೆ ಕರೆಸಲಾಗುತ್ತಿದೆ. ಘಟನೆಯ ನಿಖರ ಸ್ವರೂಪವನ್ನು ನಿರ್ಧರಿಸಲು ಇದು ತುಂಬಾ ಆರಂಭಿಕ ಹಂತವಾಗಿದೆ. ಗಡಿ ಪ್ರದೇಶದಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾದ 7.5 ಕೆ.ಜಿ. ಆರ್‌ಡಿಎಕ್ಸ್‌ಗೂ ಈ ಘಟನೆಗೂ ಯಾವುದೇ ಸಂಬಂಧವಿರುವುದು ದೃಢಪಟ್ಟಿಲ್ಲ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಸ್ಫೋಟದಿಂದ ಸೂರತ್‌ಗಢ-ಅನುಪ್‌ಗಢ ರೈಲು ಮಾರ್ಗದ ಹಳಿಗೂ ಹಾನಿಯಾಗಿದೆ. ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಹಾಗೂ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಎರಡು ರೈಲು ಸ್ಲೀಪರ್‌ಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

AC ಇಲ್ಲ, GPS ಇಲ್ಲ, ಆದರೂ ಛಲ ಬಿಡಲಿಲ್ಲ; -14°C ಚಳಿಯಲ್ಲೂ 2001ರ ಮಾರುತಿ 800 ಓಡಾಟ; 11 ರಾಜ್ಯಗಳ ದಾಟಿ ಲಡಾಖ್ ತಲುಪಿದ ಕರಾವಳಿ ಯುವಕರು..!

ಸೋತ ಅಭ್ಯರ್ಥಿಗಳಿಗೆ ಸಾರ್ವಜನಿಕ ಹುದ್ದೆ 'ಸಾಂತ್ವನ ಬಹುಮಾನ'ವಲ್ಲ; ಸರ್ಕಾರದ ಹಿಂಬಾಗಿಲ ನೇಮಕಕ್ಕೆ ಹೈಕೋರ್ಟ್ ತಡೆ..!

ಜನರಿಗಲ್ಲ, ಹೈಕಮಾಂಡ್ ಮೆಚ್ಚಿಸಲು ಡಿಕೆಶಿ ಕೆಲಸ ಮಾಡ್ತಿದ್ದಾರೆ, 2028ರಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ: ಲಹರ್ ಸಿಂಗ್ ಸಿರೋಯಾ

ಜೀವನಾಂಶ ಸ್ವಯಂಚಾಲಿತ ಹಕ್ಕಲ್ಲ: ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು