ಸಂಗ್ರಹ ಚಿತ್ರ 
ದೇಶ

ಹೈಟೆಕ್ ಆದ ಗ್ಯಾಂಗ್‌ಸ್ಟರ್ಸ್: Social Mediaದಲ್ಲೇ 'shooters' ನೇಮಕಾತಿ, ಕ್ರೈಂಗೆ ತಕ್ಕಂತೆ Rate card ಫಿಕ್ಸ್..!

ಯುವಕರನ್ನು "ಶೂಟರ್‌ಗಳಾಗಿ" ನೇಮಿಸಿಕೊಳ್ಳಲು ಗ್ಯಾಂಗ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಮಾಡುವ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಹಣವನ್ನು ಫಿಕ್ಸ್ ಮಾಡುತ್ತಿದ್ದಾರೆ.

ರಾಂಚಿ: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಹಲವೆಡೆ ಗ್ಯಾಂಗ್‌ಸ್ಟರ್‌ಗಳು ಹೈಟೆಕ್ ಆಗುತ್ತಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿ ಸಂಘಟಿತ ಅಪರಾಧ ಗ್ಯಾಂಗ್‌ಗಳು ಯುವಕರನ್ನು ತಪ್ಪು ದಾರಿಗೆ ಎಳೆಯಲು ಸೋಶಿಯಲ್ ಮೀಡಿಯಾವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಯುವಕರನ್ನು "ಶೂಟರ್‌ಗಳಾಗಿ" ನೇಮಿಸಿಕೊಳ್ಳಲು ಗ್ಯಾಂಗ್‌ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಮಾಡುವ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಹಣವನ್ನು ಫಿಕ್ಸ್ ಮಾಡುತ್ತಿದ್ದಾರೆ. ರಾಂಚಿ ಸಿಟಿ ಎಸ್‌ಪಿ ಪಾರಸ್ ರಾಣಾ ನೇತೃತ್ವದಲ್ಲಿ ನಡೆದ ತನಿಖೆಯಿಂದ ಈ ಆಘಾತಕಾರಿ ಡಿಜಿಟಲ್ ಜಾಲ ಪತ್ತೆಯಾಗಿದೆ.

ಸಂಭಾವ್ಯ ಸದಸ್ಯರನ್ನು ಗುರುತಿಸಿ, ಅವರೊಂದಿಗೆ ಸಂಪರ್ಕ ಸಾಧಿಸಿದ ಬಳಿಕ ಗ್ಯಾಂಗ್‌ಗಳಿಗೆ ಸೇರಿಸಿಕೊಳ್ಳಲು ಈ ವೇದಿಕೆಗಳನ್ನು ಬಳಸಲಾಗುತ್ತಿದೆ. ಅಪರಾಧ ಕೃತ್ಯಗಳನ್ನು ಎಸಗಲು ಆನ್‌ಲೈನ್ ವಹಿವಾಟಿನ ಮೂಲಕ ಹಣ ಪಾವತಿಸಲಾಗುತ್ತಿದ್ದು, ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಮೊತ್ತ ಬದಲಾಗುತ್ತದೆ ಎಂಬುದೂ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರು ಇದೀಗ ಇಂತಹ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದು, ಅಪರಾಧಿ ಗ್ಯಾಂಗ್‌ಗಳ ಸದಸ್ಯರೊಂದಿಗೆ ಸಂಪರ್ಕದಲ್ಲಿರುವ ಯುವಕರ ಚಲನವಲನವನ್ನು ಗಮನಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧಿಗಳು ಸಕ್ರಿಯವಾಗಿದ್ದು, ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ರಾಂಚಿ ನಗರ ಪೊಲೀಸ್ ವರಿಷ್ಠಾಧಿಕಾರಿ ಪರಸ್ ರಾಣಾ ತಿಳಿಸಿದ್ದಾರೆ.

ಸಂಭಾವ್ಯ ಸದಸ್ಯರನ್ನು ಸಂಪರ್ಕಿಸಲು ಅಪರಾಧಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ತಮ್ಮ ಗುರುತನ್ನು ಮರೆಮಾಚಿ, ಶೂಟರ್‌ಗಳಾಗಲು ಆಸಕ್ತಿ ಹೊಂದಿರುವ ಯುವಕರೊಂದಿಗೆ ಮಾತುಕತೆ ಆರಂಭಿಸಿ ಅವರನ್ನು ಗ್ಯಾಂಗ್‌ಗಳಿಗೆ ಸೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಳಿಕ ಈ ಯುವಕರಿಗೆ ಗುಂಡಿನ ದಾಳಿ ನಡೆಸುವ ಹೊಣೆ ವಹಿಸಲಾಗುತ್ತದೆ. ಈ ಕೃತ್ಯಗಳಲ್ಲಿ ಭಾಗಿಯಾಗಿರುವ ಯುವಕರು ಮತ್ತು ಅವರಿಂದ ಇಂತಹ ಕೃತ್ಯಗಳನ್ನು ಮಾಡಿಸುತ್ತಿರುವ ಅಪರಾಧಿಗಳನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶೂಟರ್‌ಗಳು ಹಾಗೂ ಶಸ್ತ್ರಾಸ್ತ್ರ ಪೂರೈಸುವವರನ್ನೂ ಒಳಗೊಂಡಂತೆ ಈ ಜಾಲದ ಹಿಂದಿರುವ ಪ್ರಮುಖ ವ್ಯಕ್ತಿಗಳನ್ನು ಪತ್ತೆಹಚ್ಚುವುದು ತನಿಖೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಜಾರ್ಖಂಡ್‌ನ ವಿವಿಧ ಜಿಲ್ಲೆಗಳಿಗೆ ಈ ಜಾಲ ಎಷ್ಟು ವ್ಯಾಪಿಸಿದೆ ಮತ್ತು ಇದರಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈವರೆಗೆ ದೊರೆತಿರುವ ಮಾಹಿತಿಯ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಜಾಲದ ಕುರಿತು ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಶೂಟರ್‌ಗಳ ನೇಮಕಾತಿಯಲ್ಲಿ ಹಣಕಾಸಿನ ವಹಿವಾಟು ನಡೆಯುತ್ತಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಪರಾಧ ಕೃತ್ಯಗಳನ್ನು ನಡೆಸಲು 3,000 ರೂ.ನಿಂದ 50,000 ರೂ.ವರೆಗೆ ಹಣ ನೀಡಲಾಗುತ್ತದೆ. ಅಪರಾಧದ ಸ್ವರೂಪ, ಗ್ಯಾಂಗ್‌ನ ರಚನೆ ಮತ್ತು ಕೃತ್ಯದಲ್ಲಿ ಭಾಗಿಯಾಗುವ ವ್ಯಕ್ತಿಗಳ ಪಾತ್ರಕ್ಕೆ ಅನುಗುಣವಾಗಿ ಹಣದ ಮೊತ್ತ ನಿರ್ಧಾರವಾಗುತ್ತದೆ. ಈ ಸಂಪೂರ್ಣ ಜಾಲವು ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಶಸ್ತ್ರಾಸ್ತ್ರಗಳನ್ನು ಪೂರೈಸಲು ಪ್ರತ್ಯೇಕ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಂದೂಕುಗಳನ್ನು ಒದಗಿಸುವ ಈ ಪೂರೈಕೆದಾರರಿಗೆ ಹಣ ಪಾವತಿಸಲಾಗುತ್ತದೆ. ಅಲ್ಲದೆ, ಯಾವ ಶೂಟರ್‌ಗೆ ಶಸ್ತ್ರಾಸ್ತ್ರ ತಲುಪಿಸಬೇಕೆಂಬುದನ್ನು ತಿಳಿಸಲು ಆತನ ಮೊಬೈಲ್ ಸಂಖ್ಯೆಯನ್ನೂ ನೀಡಲಾಗುತ್ತದೆ. ಹಣ ಸ್ವೀಕರಿಸಿದ ಬಳಿಕ ಪೂರೈಕೆದಾರರು ಸಂಬಂಧಪಟ್ಟ ವ್ಯಕ್ತಿಗೆ ಶಸ್ತ್ರಾಸ್ತ್ರ ತಲುಪಿಸುತ್ತಾರೆ. ಇದರಿಂದ ಶೂಟರ್‌ಗಳ ನೇಮಕಾತಿ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಗ್ಯಾಂಗ್‌ನೊಳಗಿನ ಬೇರೆ ಬೇರೆ ವ್ಯಕ್ತಿಗಳು ನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ.

ಗ್ಯಾಂಗ್‌ಗಳ ಸದಸ್ಯರು ತಮ್ಮ ಗುರುತನ್ನು ಮರೆಮಾಚಲು ನಕಲಿ ಮೊಬೈಲ್ ಸಂಖ್ಯೆಗಳು ಮತ್ತು ಸುಳ್ಳು ಹೆಸರುಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂವಹನ ನಡೆಸುತ್ತಿದ್ದಾರೆ. ಕಾರ್ಯಾಚರಣೆಗಳ ಗೌಪ್ಯತೆ ಕಾಪಾಡಿಕೊಳ್ಳಲು ಮತ್ತು ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಈ ತಂತ್ರ ಅನುಸರಿಸುತ್ತಿದ್ದಾರೆ. ಹೀಗಾಗಿನಕಲಿ ಸಂಖ್ಯೆಗಳು ಹಾಗೂ ಸುಳ್ಳು ಆನ್‌ಲೈನ್ ಗುರುತುಗಳಿಂದ ಆರೋಪಿಗಳ ಪತ್ತೆಹಚ್ಚುವುದು ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪ್ರಸ್ತುತ ಪೊಲೀಸರು ಈ ಜಾಲದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಸಾಮಾಜಿಕ ಜಾಲತಾಣಗಳ ಖಾತೆಗಳು, ಮೊಬೈಲ್ ಸಂಖ್ಯೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಂಪರ್ಕಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

AC ಇಲ್ಲ, GPS ಇಲ್ಲ, ಆದರೂ ಛಲ ಬಿಡಲಿಲ್ಲ; -14°C ಚಳಿಯಲ್ಲೂ 2001ರ ಮಾರುತಿ 800 ಓಡಾಟ; 11 ರಾಜ್ಯಗಳ ದಾಟಿ ಲಡಾಖ್ ತಲುಪಿದ ಕರಾವಳಿ ಯುವಕರು..!

ಸೋತ ಅಭ್ಯರ್ಥಿಗಳಿಗೆ ಸಾರ್ವಜನಿಕ ಹುದ್ದೆ 'ಸಾಂತ್ವನ ಬಹುಮಾನ'ವಲ್ಲ; ಸರ್ಕಾರದ ಹಿಂಬಾಗಿಲ ನೇಮಕಕ್ಕೆ ಹೈಕೋರ್ಟ್ ತಡೆ..!

ಜನರಿಗಲ್ಲ, ಹೈಕಮಾಂಡ್ ಮೆಚ್ಚಿಸಲು ಡಿಕೆಶಿ ಕೆಲಸ ಮಾಡ್ತಿದ್ದಾರೆ, 2028ರಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ: ಲಹರ್ ಸಿಂಗ್ ಸಿರೋಯಾ

ಜೀವನಾಂಶ ಸ್ವಯಂಚಾಲಿತ ಹಕ್ಕಲ್ಲ: ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು