ಸನಿಯಾ ಪಟೇಲ್, ಕೌಶಲ್ ಪಟೇಲ್ 
ದೇಶ

ಅನ್ಯಜಾತಿ ಯುವಕನ ಜೊತೆ ಪ್ರೀತಿ: ಮರ್ಯಾದೆಗೆ ಅಂಜಿ 21 ವರ್ಷದ ಮಗಳನ್ನು ಕತ್ತುಹಿಸುಕಿ ಕೊಂದ ತಂದೆ

ಮರ್ಯಾದೆಗೆ ಅಂಜಿ ತನ್ನ 21 ವರ್ಷದ ಮಗಳನ್ನು ತಂದೆಯೇ ಕೊಂದಿರುವ ದಾರುಣ ಘಟನೆ ನಡೆದಿದೆ. ಗುಜರಾತ್‌ನ ಆನಂದ್ ಜಿಲ್ಲೆಯ ಖಂಭತ್ ತಾಲ್ಲೂಕಿನ ಮೆಟ್ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ.

ಮರ್ಯಾದೆಗೆ ಅಂಜಿ ತನ್ನ 21 ವರ್ಷದ ಮಗಳನ್ನು ತಂದೆಯೇ ಕೊಂದಿರುವ ದಾರುಣ ಘಟನೆ ನಡೆದಿದೆ. ಗುಜರಾತ್‌ನ ಆನಂದ್ ಜಿಲ್ಲೆಯ ಖಂಭತ್ ತಾಲ್ಲೂಕಿನ ಮೆಟ್ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಆರೋಪಿ ತಂದೆ ಕೌಶಲ್‌ಕುಮಾರ್ ಪಟೇಲ್ ತನ್ನ 21 ವರ್ಷದ ಮಗಳು ಸನಿಯಾ ಪಟೇಲ್ ಅವರನ್ನು ಕೊಂದಿದ್ದಾನೆ. ಯುವತಿ ಸನಿಯಾ, ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಯುವಕ ಅನ್ಯಜಾತಿಗೆ ಸೇರಿದವನಾಗಿದ್ದು ಇದು ತಂದೆಗೆ ಇಷ್ಟವಿರಲಿಲ್ಲ. ಸನಿಯಾ ಬಿ.ಕಾಂ ಪದವೀಧರೆಯಾಗಿದ್ದು, ಕಳೆದ ಒಂದು ವರ್ಷದಿಂದ ತನ್ನ ಹಳ್ಳಿಯ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ತಂದೆ ಕೌಶಲ್‌ಕುಮಾರ್ ಪಟೇಲ್‌ಗೆ ಈ ವಿಷಯ ತಿಳಿದ ತಕ್ಷಣ ವಿರೋಧಿಸಿದ್ದರು.

ಯುವಕ ಬೇರೆ ಜಾತಿಗೆ ಸೇರಿದವನಾಗಿದ್ದು ಹೇಳಿಕೊಳ್ಳುವಂತ ಸಂಪಾದನೆ ಮಾಡುತ್ತಿರಲಿಲ್ಲ. ಆದರೆ ಸನಿಯಾ ಅದೇ ಯುವಕನನ್ನು ಮದುವೆಯಾಗುವ ಬಗ್ಗೆ ಹಠ ಹಿಡಿದಿದ್ದಳು. ಅವಳು ಆ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದಳು. ದೀಪಾವಳಿಯ ರಾತ್ರಿ ಈ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ದೀಪಾವಳಿ ರಾತ್ರಿ ಎಲ್ಲಾ ಕುಟುಂಬಗಳು ಒಟ್ಟುಗೂಡಿದ್ದವು ರಾತ್ರಿ ಎಲ್ಲರೂ ಮಲಗಲು ಹೋದಾಗ, ತಂದೆ ಮತ್ತು ಮಗಳ ನಡುವೆ ಅಡುಗೆಮನೆಯಲ್ಲಿ ಚರ್ಚೆ ನಡೆಯಿತು. ತಂದೆ ಯುವಕನಿಗೆ ತನ್ನ ಸಂಬಂಧವನ್ನು ಮುರಿಯಲು ಕೇಳಿಕೊಂಡರು. ಇದಕ್ಕೆ ಸನಿಯಾ ನಿರಾಕರಿಸಿದ್ದಳು.

ನೀನು ಯುವಕನ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿಕೊಳ್ಳದಿದ್ದರೇ ನಿನ್ನನ್ನು ಕೊಲ್ಲುವುದಾಗಿ ತಂದೆ ಬೆದರಿಕೆ ಹಾಕಿದ್ದರು. ಆದರೆ ಇದನ್ನು ಸನಿಯಾ ಗಂಭೀರವಾಗಿ ಪರಿಗಣಿಸಲಿಲ್ಲ. ಆ ನಂತರ ತಂದೆ ಮಗಳು ಕುತ್ತಿಗೆಯನ್ನು ಹಿಸುಕಲು ಪ್ರಾರಂಭಿಸಿದರು. ಉಸಿರಾಟದ ತೊಂದರೆಯಿಂದ ಸನಿಯಾ ಸಾವನ್ನಪ್ಪಿದರು. ದೀಪಾವಳಿ ಅಲಂಕಾರದ ಅರ್ಧದಷ್ಟು ಭಾಗದಿಂದ ಮನೆಯನ್ನು ಒಂದು ಕ್ಷಣ ಅಲಂಕರಿಸಿದ್ದರೆ, ಅದೇ ಮನೆಯಲ್ಲಿ ತಂದೆಯೊಬ್ಬ ಮಗಳ ಜೀವನವನ್ನೇ ಕತ್ತಲಾಗಿಸಿದ್ದನು. ಸನಿಯಾ ಸಾವಿನ ನಂತರ ಆತ್ಮಹತ್ಯೆಯ ಕಥೆಯನ್ನು ಸೃಷ್ಟಿಸಲಾಗಿತ್ತು.

ಆದರೆ ವೈದ್ಯರಿಗೆ ಸನಿಯಾ ಸಾವಿನ ಬಗ್ಗೆ ಅನುಮಾನವಿತ್ತು. ಅವರು ವಿಧಿವಿಜ್ಞಾನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗೆ ಸಲಹೆ ನೀಡಿದರು. ನಂತರ, ಮರಣೋತ್ತರ ಪರೀಕ್ಷೆಯಲ್ಲಿ, ಸನಿಯಾ ಕತ್ತು ಹಿಸುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ತನಿಖೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು. ಪ್ರಸ್ತುತ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವೆಂಬರ್ 15ರಂದು KPSC ಪೂರ್ವಭಾವಿ ಪರೀಕ್ಷೆ: ಚುನಾವಣಾ ಮಾದರಿಯ ಭದ್ರತೆಗೆ CM ಸೂಚನೆ; 319 ಹುದ್ದೆಗಳಿಗೆ 1.47 ಲಕ್ಷ ಅಭ್ಯರ್ಥಿಗಳು

8ನೇ ದಿನಕ್ಕೆ 1000 ಕೋಟಿ ಕ್ಲಬ್ ಸೇರಿದ Ramayana: ಕರ್ನಾಟಕದಲ್ಲಿ 100 ಕೋಟಿ ದಾಖಲೆ ಕಲೆಕ್ಷನ್, ವಿಶ್ವದಾದ್ಯಂತ ಇತಿಹಾಸ ಸೃಷ್ಟಿ!

'ಜಲ್ಸಾ' ಬಂಗಲೆ ಅಮಿತಾಬ್ ಬಚ್ಚನ್ ಅವರದಲ್ವಾ? ಬಿಗ್ ಬಿ ಕುಟುಂಬದಲ್ಲಿ ಆಸ್ತಿ ಕಲಹ!

ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಚಿಂತನೆ,15-18 ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ!

U19 ಏಷ್ಯಾಕಪ್ ಸೆಮಿಸ್: ಅಫ್ಗಾನ್ ಮಣಿಸಿದ ಟೀಂ ಇಂಡಿಯಾ, ಫೈನಲ್‌ನಲ್ಲಿ ಭಾರತ-ಪಾಕ್ ಮುಖಾಮುಖಿ