ಸಾಂದರ್ಭಿಕ ಚಿತ್ರ 
ದೇಶ

ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ 74 ಭಯೋತ್ಪಾದಕರ ಹತ್ಯೆ: ಪಾಕಿಸ್ತಾನ ಸೇನೆ

ಈ ಗುಪ್ತಚರ ಆಧಾರಿತ ಕಾರ್ಯಾಚರಣೆಗಳ ವೇಳೆ, ಭಯೋತ್ಪಾದಕರ ಹಲವು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ಸರಣಿ ಸಂಘರ್ಷಗಳಲ್ಲಿ 'ತೆಹ್ರೀಕ್-ಎ-ತಾಲಿದಾನ್' ಸಂಘಟನೆಯ 31 ಭಯೋತ್ಪಾದಕರು ಹತರಾಗಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ಭದ್ರತಾ ಪಡೆಗಳು ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಕ್ವಾ ಪ್ರಾಂತ್ಯಗಳಲ್ಲಿ ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ ಕನಿಷ್ಠ 74 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಪಾಕಿಸ್ತಾನ ಸೇನೆ ಶುಕ್ರವಾರ ತಿಳಿಸಿದೆ.

ನವೆಂಬರ್ 3 ರಿಂದ ಬಲೂಚಿಸ್ತಾನದ ಕ್ವೆಟ್ಟಾ ಜಿಲ್ಲೆಯ ಕುರ್ರಮ್ ಪ್ರದೇಶದಲ್ಲಿ ಹಾಗೂ ಖೈಬರ್ ಪಖ್ತುಂಕ್ವಾದ ಮಿರ್ ಅಲಿ ಮತ್ತು ಒರಾಕ್‌ಜಾಯ್ ಪ್ರದೇಶಗಳಲ್ಲಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗವಾದ 'ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್' (ISPR) ಪ್ರಕಟಣೆಯಲ್ಲಿ ತಿಳಿಸಿದೆ.

ಈ ಗುಪ್ತಚರ ಆಧಾರಿತ ಕಾರ್ಯಾಚರಣೆಗಳ ವೇಳೆ, ಭಯೋತ್ಪಾದಕರ ಹಲವು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ಸರಣಿ ಸಂಘರ್ಷಗಳಲ್ಲಿ 'ತೆಹ್ರೀಕ್-ಎ-ತಾಲಿದಾನ್' ಸಂಘಟನೆಯ 31 ಭಯೋತ್ಪಾದಕರು ಹತರಾಗಿದ್ದಾರೆ. ಅಲ್ಲದೆ, ಅವರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.

ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ಕಳೆದ 48 ಗಂಟೆಗಳಲ್ಲಿ ಮಿರ್ ಅಲಿಯಲ್ಲಿ 35 ಮತ್ತು ಒರಾಕ್‌ಜಾಯ್ ಪ್ರದೇಶದಲ್ಲಿ 8 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಸೇನೆ ಹೇಳಿದೆ.

"ಭಯೋತ್ಪಾದಕ ಬೆದರಿಕೆಗಳನ್ನು ಹೋಗಲಾಡಿಸಲು ಮತ್ತು ಭಯೋತ್ಪಾದಕ ಜಾಲಗಳನ್ನು ಧ್ವಂಸಗೊಳಿಸುವ ದೃಢ ನಿರ್ಧಾರದೊಂದಿಗೆ, ಭದ್ರತಾ ಪಡೆಗಳು ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಸರಣಿ ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸುತ್ತಿವೆ" ಎಂದು ತಿಳಿಸಿದೆ.

2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಪಾಕಿಸ್ತಾನದಲ್ಲಿ, ವಿಶೇಷವಾಗಿ ಖೈಬರ್ ಪಖ್ತುಂಕ್ವಾ (KP) ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ತೀವ್ರಗೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ನಮ್ಮ ಮೆಟ್ರೊ ಪಿಂಕ್ ಲೈನ್ ಪ್ರಧಾನಿ ಮೋದಿ ಉದ್ಘಾಟನೆ; ನ.14ರಿಂದ ಕಾರ್ಯಾಚರಣೆ

4th ODI: ಒಂದೇ ಓವರ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಡಕೌಟ್, Matt Henry ಮಾರಕ ಬೌಲಿಂಗ್, ವಿಶ್ವದಾಖಲೆ!

4th ODI: ವಿಲ್ ಯಂಗ್ ಸ್ಫೋಟಕ ಶತಕ, ಭಾರತಕ್ಕೆ ಗೆಲ್ಲಲು 334 ರನ್ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್

ಝಾಕಿರ್ ನಾಯಕ್​ಗೆ ಮೋದಿ ಸರ್ಕಾರ ಶಾಕ್: 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಣೆ!

16 ವರ್ಷಗಳ ಹಿಂದೆ ವಿಚ್ಚೇದನ, ಮುರಿದು ಬಿದ್ದ 2ನೇ ಮದುವೆ, ಕೊನೆಗೂ ಒಂದಾದ ತಾರಾ ದಂಪತಿ ರಂಜಿತ್-ಪ್ರಿಯಾ ರಮಣ್!