ನಡು ರಸ್ತೆಯಲ್ಲೇ ಮಹಿಳೆಯರಿಗೆ ಥಳಿಸಿದ ಶಿವಸೇನೆ ಕಾರ್ಯಕರ್ತೆಯರು 
ದೇಶ

ವೇಶ್ಯಾವಾಟಿಕೆ ಆರೋಪ: ನಡು ರಸ್ತೆಯಲ್ಲೇ ಮಹಿಳೆಯರಿಗೆ ಥಳಿಸಿದ ಶಿವಸೇನೆ ಕಾರ್ಯಕರ್ತೆಯರು; ವಿಡಿಯೋ ವೈರಲ್​!

ಪೊಲೀಸರಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ತಾವೇ ಮಧ್ಯಪ್ರವೇಶಿಸಬೇಕಾಯಿತು ಎಂದು ಶಿವಸೇನೆ ಕಾರ್ಯಕರ್ತೆಯರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಥಾಣೆ: ಮಹಾರಾಷ್ಟ್ರದ ಥಾಣೆಯ ಜನನಿಬಿಡ 'ತಲಾವ್ ಪಾಲಿ' ಪ್ರದೇಶದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಡು ರಸ್ತೆಯಲ್ಲೇ ಮಹಿಳೆಯರ ಮೇಲೆ ಶಿವಸೇನೆಯ ಮಹಿಳಾ ಘಟಕದ ಸದಸ್ಯರು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮಹಿಳೆಯರಿಗೆ ಆ ಪ್ರದೇಶದಿಂದ ಹೊರಹೋಗುವಂತೆ ಒತ್ತಾಯಿಸಿದ ಘಟನೆ ಇದೀಗ ದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಮತ್ತು ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪೊಲೀಸರಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ತಾವೇ ಮಧ್ಯಪ್ರವೇಶಿಸಬೇಕಾಯಿತು ಎಂದು ಶಿವಸೇನೆ ಕಾರ್ಯಕರ್ತೆಯರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಶಿವಸೇನೆಯ ಮಹಿಳಾ ಘಟಕದ ಕಾರ್ಯಕರ್ತೆಯರು ಕೆಲವು ಮಹಿಳೆಯರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಕೂದಲು ಹಿಡಿದು ಎಳೆಯುವುದು ಹಾಗೂ ಕಬ್ಬಿನ ಕೋಲುಗಳಿಂದ ಹೊಡೆಯುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿವೆ ಎನ್ನಲಾಗಿದೆ.

ತಲಾವ್ ಪಾಲಿ ಪ್ರದೇಶದಲ್ಲಿ ಕೆಲವು ಮಹಿಳೆಯರು ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಹಿಳಾ ಘಟಕದ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ಈ ವಿಚಾರವಾಗಿ ಸ್ಥಳೀಯ ಮಹಿಳೆಯರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಶಿವಸೇನೆ ಮಹಿಳಾ ಘಟಕದ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Mysuru | ಮೈಸೂರಿಗೆ ಪ್ರಧಾನಿ ಮೋದಿ ಆಗಮನ; ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ

ಜಿಎಸ್‌ಟಿ ಪಾಲು, ಬರ ಪರಿಹಾರ, ಕಬ್ಬು ಬೆಳೆಗಾರರ ಬೇಡಿಕೆ ವಿಷಯ ಪ್ರಸ್ತಾಪಿಸಿದ ಸಿಎಂ; Video

4th ODI: ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಡಕೌಟ್; ಹೀನಾಯ ದಾಖಲೆ ಬರೆದ ಶ್ರೇಯಸ್ ಅಯ್ಯರ್

ಪ್ರಯಾಣಕ್ಕೂ ಮುನ್ನವೇ 'ಟಿಪ್ಸ್': ಓಲಾ ಕಂಪನಿಗೆ 10 ಲಕ್ಷ ರೂ. ದಂಡ ವಿಧಿಸಿದ CCPA

'ಕರಾವಳಿ, ಮಲೆನಾಡಿನ ಜನತೆಯ ಬಹುದಿನಗಳ ಕನಸು ನನಸು'; ನಾಳೆಯಿಂದಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭ!