ಮುಂಬೈ: ಪುಣೆಯ ನಂತರ, ಇದೀಗ ದೇಶದ ವಾಣಿಜ್ಯ ನಗರಿ ಮುಂಬೈ ಮತ್ತು ಮುಂಬೈ ಮಹಾನಗರ ಪ್ರದೇಶದಲ್ಲಿ(MMR) ಸಿಎನ್‌ಜಿ(CNG) ಮತ್ತಷ್ಟು ದುಬಾರಿಯಾಗಿದೆ.
ಮುಂಬೈನಲ್ಲಿ ಸಿಎನ್‌ಜಿ ಚಾಲಿತ ವಾಹನಗಳನ್ನು ಬಳಸುವವರು ಇನ್ನು ಮುಂದೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಶನಿವಾರ ಮಹಾನಗರ ಗ್ಯಾಸ್ ಲಿಮಿಟೆಡ್(MGL) ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 1.50 ರೂಪಾಯಿ ಹೆಚ್ಚಿಸಿದೆ.
ಈ ಹೊಸ ದರಗಳು ಇಂದಿನಿಂದ, ಅಂದರೆ ಭಾನುವಾರ, ನವೆಂಬರ್ 15 ರಿಂದ ಜಾರಿಗೆ ಬರಲಿವೆ.
ಮುಂಬೈ ಮಹಾನಗರ ಪ್ರದೇಶ (MMR) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 91.50 ರೂಪಾಯಿಗೆ ಏರಿಕೆಯಾಗಿದೆ.
ಈ ವರ್ಷದ ಜನವರಿಯಲ್ಲಿ, ಸಿಎನ್‌ಜಿ ದರವು ಪ್ರತಿ ಕೆಜಿಗೆ 80.50 ರೂಪಾಯಿ ಇತ್ತು. ಈ ಹೆಚ್ಚಳದೊಂದಿಗೆ, ಒಟ್ಟು ಏರಿಕೆಯು ಪ್ರತಿ ಕೆಜಿಗೆ 11 ರೂಪಾಯಿ ಆಗಿದ್ದು, ಕಳೆದ 11 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಸಿಎನ್‌ಜಿ ಬೆಲೆಯನ್ನು 8 ಬಾರಿ ಹೆಚ್ಚಿಸಲಾಗಿದೆ. ಇದರೊಂದಿಗೆ ಸುಮಾರು ಶೇ. 14 ರಷ್ಟು ದುಬಾರಿಯಾಗಿದೆ.