ಬಿಎಸ್‌ಎಫ್ ಯೋಧರ ಸಾಂದರ್ಭಿಕ ಚಿತ್ರ 
ದೇಶ

‘ಅಚಾನಕ್ಕಾಗಿ’ ಬಾಂಗ್ಲಾ ಗಡಿಯೊಳಗೆ ಪ್ರವೇಶ: ಬಿಎಸ್‌ಎಫ್ ಯೋಧ BGB ವಶಕ್ಕೆ!

ಮೇಘಾಲಯದ ಪಶ್ಚಿಮ ಜೈಂತಿಯಾ ಹಿಲ್ಸ್ ಜಿಲ್ಲೆಯ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಗಡಿಯ ಸಮೀಪ ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ.

ಗುವಾಹಟಿ: ಅಚಾನಕ್ಕಾಗಿ ನೆರೆಯ ಬಾಂಗ್ಲಾದೇಶದ ಗಡಿಯೊಳಗೆ ಪ್ರವೇಶಿಸಿದ ಗಡಿ ಭದ್ರತಾ ಪಡೆಯ (BSF) ಸಶಸ್ತ್ರ ಯೋಧರೊಬ್ಬರನ್ನು ಬಾಂಗ್ಲಾದೇಶ ಗಡಿ ರಕ್ಷಕ ಪಡೆ (BGB) ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.

ಮೇಘಾಲಯದ ಪಶ್ಚಿಮ ಜೈಂತಿಯಾ ಹಿಲ್ಸ್ ಜಿಲ್ಲೆಯ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಗಡಿಯ ಸಮೀಪ ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ.

ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಎನ್‌ಎಸ್‌ಎಎಸ್ (INSAS) ರೈಫಲ್ ಮತ್ತು ವಾಕಿ-ಟಾಕಿ ಹೊಂದಿರುವ ಬಿಎಸ್‌ಎಫ್ ಯೋಧನನ್ನು ಇಬ್ಬರು ಬಿಜಿಬಿ ಸಿಬ್ಬಂದಿ ಕರೆದೊಯ್ಯುತ್ತಿರುವುದು ಕಂಡುಬರುತ್ತದೆ.

ಆತನ ಸುತ್ತಲೂ ಇರುವ ಬಾಂಗ್ಲಾದೇಶದ ಕೆಲವರು ಆತನನ್ನು ನಿಂದಿಸುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಈ ವೇಳೆ ಯೋಧ ತನ್ನ ವಾಕಿ-ಟಾಕಿಯಲ್ಲಿ, “ಕ್ಯೂಆರ್‌ಟಿ (QRT) ಕಳುಹಿಸಿ” (ತ್ವರಿತ ಪ್ರತಿಕ್ರಿಯೆ ತಂಡವನ್ನು ಕಳುಹಿಸಿ) ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ನಂತರ, ಬಿಜಿಬಿ ಸಿಬ್ಬಂದಿ ಸ್ಥಳೀಯ ವ್ಯಕ್ತಿಯೊಬ್ಬರ ಬೈಕ್‌ನಲ್ಲಿ ಆ ಯೋಧನನ್ನು ಕರೆದೊಯ್ದರು. ಅವರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಉಭಯ ದೇಶಗಳ ಗಡಿ ಅಧಿಕಾರಿಗಳ ನಡುವೆ ‘ಫ್ಲಾಗ್ ಮೀಟಿಂಗ್’ (flag meeting) ಆಯೋಜಿಸಲಾಗುತ್ತಿತ್ತು ಎಂಬ ವರದಿಗಳು ಕೇಳಿಬಂದಿದೆ.

ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಸಿಲ್ಹೆಟ್‌ನ ಬಿಚ್ಚಾನಕಂದಿ ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಯೋಧನನ್ನು ವಶಕ್ಕೆ ಪಡೆಯಲಾಗಿದೆ. ಬಿಜಿಬಿ ಗಸ್ತು ತಂಡವೊಂದು ಆ ಪ್ರದೇಶದಲ್ಲಿದ್ದಾಗ ಈ ಯೋಧನನ್ನು ಗಮನಿಸಿದೆ. ಬಳಿಕ ಅವರನ್ನು ಬಿಜಿಬಿಯ ಬಿಚ್ಚಾನಕಂದಿ ಗಡಿ ಹೊರಠಾಣೆಗೆ (Border Outpost) ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

ತಮಿಳುನಾಡು, ಕರ್ನಾಟಕ ಕಾಂಗ್ರೆಸ್ ಸಮಿತಿಗೆ ಪ್ರಮುಖ ನೇಮಕಾತಿ; ಜಿಎಚ್ ನಾಗರಾಜ್ KPCC ನೂತನ ಖಜಾಂಚಿ!

'ಚಿಕ್ಕ ವಯಸ್ಸಿನಲ್ಲಿ ದೊಡ್ಡ ತಪ್ಪು ಮಾಡಿದೆ': ಕಿಸ್ ಬೆಡಗಿ ಶ್ರೀಲೀಲಾ ಶಾಕಿಂಗ್ ತಪ್ಪೊಪ್ಪಿಗೆ!

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್! Video

IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರಿಗೆ RCB ಗೇಟ್ ಪಾಸ್! ಉಳಿದುಕೊಂಡವರ ಸಂಪೂರ್ಣ ಪಟ್ಟಿ!