ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ 
ದೇಶ

ಹಾರ್ಮುಜ್‌ನಲ್ಲಿ LPG ಟ್ಯಾಂಕರ್ ಮೇಲಿನ ದಾಳಿ ಖಂಡಿಸಿದ ಭಾರತ; ಓರ್ವ ಭಾರತೀಯ ನಾಪತ್ತೆ, ಇಬ್ಬರಿಗೆ ಗಾಯ

ನವೆಂಬರ್ 16 ರಂದು ನಡೆದ ಈ ದಾಳಿಯಲ್ಲಿ ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ ಮತ್ತು ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ನವದೆಹಲಿ: ಹಾರ್ಮುಜ್‌ ಜಲಸಂಧಿಯಲ್ಲಿ ಪನಾಮ ಧ್ವಜ ಹೊಂದಿದ್ದ ಎಲ್‌ಪಿಜಿ(LPG) ಟ್ಯಾಂಕರ್ 'ಎಂಟಿ ತಾರಾ ಗ್ಯಾಸ್' (MT Tara Gas) ಮೇಲೆ ನಡೆದ ದಾಳಿಯನ್ನು ಭಾರತ ಮಂಗಳವಾರ ತೀವ್ರವಾಗಿ ಖಂಡಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ನವೆಂಬರ್ 16 ರಂದು ನಡೆದ ಈ ದಾಳಿಯಲ್ಲಿ ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ ಮತ್ತು ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ನೀಡಿರುವ ಹೇಳಿಕೆಯ ಪ್ರಕಾರ, ಹಡಗಿನಲ್ಲಿದ್ದ 24 ಭಾರತೀಯ ಪ್ರಜೆಗಳ ಪೈಕಿ 21 ಮಂದಿಯನ್ನು ಸುರಕ್ಷಿತವಾಗಿ ಓಮನ್‌ನ ಖಸಾಬ್‌ಗೆ ಕರೆತರಲಾಗಿದೆ. ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"ನವೆಂಬರ್ 16 ರಂದು ಹಾರ್ಮುಜ್ ಜಲಸಂಧಿಯಲ್ಲಿ ಪನಾಮ ಧ್ವಜವನ್ನು ಹೊಂದಿರುವ ಎಲ್‌ಪಿಜಿ ಟ್ಯಾಂಕರ್ 'ಎಂಟಿ ತಾರಾ ಗ್ಯಾಸ್' ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ" ಎಂದು ಸಚಿವಾಲಯ ಹೇಳಿದೆ.

ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಓಮನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲೆ ನಿಕಟ ನಿಗಾ ಇರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

"ಓಮನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು, ಅಲ್ಲಿನ ಅಧಿಕಾರಿಗಳೊಂದಿಗೆ ಸೇರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ" ಎಂದು ಹೇಳಿರುವ ಸಚಿವಾಲಯವು, ರಕ್ಷಣಾ ಕಾರ್ಯದಲ್ಲಿ ನೆರವು ನೀಡಿದ್ದಕ್ಕಾಗಿ ಓಮನ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದೆ.

ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಪದೇ ಪದೇ ನಡೆಯುತ್ತಿರುವ ದಾಳಿಗಳ ಬಗ್ಗೆ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಇಂತಹ ದಾಳಿಗಳು ನಾಗರಿಕ ನಾವಿಕರಿಗೆ ಗಂಭೀರ ಬೆದರಿಕೆಯೊಡ್ಡುತ್ತವೆ ಎಂದು ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

ತಮಿಳುನಾಡು, ಕರ್ನಾಟಕ ಕಾಂಗ್ರೆಸ್ ಸಮಿತಿಗೆ ಪ್ರಮುಖ ನೇಮಕಾತಿ; ಜಿಎಚ್ ನಾಗರಾಜ್ KPCC ನೂತನ ಖಜಾಂಚಿ!

'ಚಿಕ್ಕ ವಯಸ್ಸಿನಲ್ಲಿ ದೊಡ್ಡ ತಪ್ಪು ಮಾಡಿದೆ': ಕಿಸ್ ಬೆಡಗಿ ಶ್ರೀಲೀಲಾ ಶಾಕಿಂಗ್ ತಪ್ಪೊಪ್ಪಿಗೆ!

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್! Video

IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರಿಗೆ RCB ಗೇಟ್ ಪಾಸ್! ಉಳಿದುಕೊಂಡವರ ಸಂಪೂರ್ಣ ಪಟ್ಟಿ!