ಸೋನಿಯಾ, ರಾಜೀವ್ ಮತ್ತು ರಾಹುಲ್ ಗಾಂಧಿ 
ದೇಶ

ಪ್ರತಿ ಬಾರಿ ಊಟದ ಸಮಯದಲ್ಲಿ ಅಮ್ಮ, ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು: ಒಂದೇ ಒಂದು ಸಾರಿ ಜಗಳವಾಡಿದ್ದರು; ರಾಹುಲ್ ಗಾಂಧಿ

ಅಪ್ಪನಿಗೆ ಒತ್ತಡ ಉಂಟಾಯಿತು, ಅದೇ ಆ ಜಗಳವಾಗಿತ್ತು," ಎಂದು ರಾಹುಲ್ ಹೇಳಿದರು. ರಾಹುಲ್ ಅವರ ಪಾಲಿಗೆ, ಅವರ ತಂದೆ-ತಾಯಿಯ ನಡುವಿನ ಬಾಂಧವ್ಯವು ಕೌಟುಂಬಿಕ ಜೀವನದ ಸಣ್ಣಪುಟ್ಟ ದಿನಚರಿಗಳಲ್ಲಿ ಎದ್ದು ಕಾಣುತ್ತಿತ್ತು.

ನವದೆಹಲಿ: ಸೋಮವಾರ ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆಯಾದ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಂದೆ-ತಾಯಿ ಜಗಳವಾಡಿದ್ದ ಏಕೈಕ ಘಟನೆಯನ್ನು ನೆನಪಿಸಿಕೊಂಡರು.

ದೆಹಲಿಯಲ್ಲಿ ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ತಮ್ಮ ಪೋಷಕರ ಬಾಂಧವ್ಯದ ಹಲವು ಅಪರೂಪದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ರಾಹುಲ್ ಗಾಂಧಿ, “ನಮ್ಮ ಮನೆಯಲ್ಲಿ ಪ್ರತಿದಿನ ಊಟದ ಸಮಯದಲ್ಲಿ ತಾಯಿ ಸೋನಿಯಾ ಗಾಂಧಿ ಅವರು ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತಿರುತ್ತಿದ್ದರು. ನನ್ನ ಬಾಲ್ಯದಲ್ಲಿ ಪ್ರಪಂಚದ ಎಲ್ಲಾ ಮನೆಗಳಲ್ಲೂ ತಂದೆ-ತಾಯಿ ಹೀಗೆಯೇ ಅನ್ಯೋನ್ಯವಾಗಿ ಕುಳಿತಿರುತ್ತಾರೆ ಎಂದು ನಾನು ಭಾವಿಸಿದ್ದೆ.

ಆದರೆ, ದೊಡ್ಡವನಾದ ಮೇಲೆ ನನ್ನ ಸ್ನೇಹಿತರ ಮನೆಗಳಿಗೆ ಹೋದಾಗ ಅಲ್ಲಿನ ಪೋಷಕರು ಬೇರೆ ಬೇರೆಯಾಗಿ ಕುಳಿತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿತ್ತು” ಎಂದು ನಗುತ್ತಾ ಹೇಳಿದ್ದಾರೆ.

ರಾಜೀವ್ ಗಾಂಧಿ ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ (ನಂತರ ಪಂಜಾಬ್ ಮುಖ್ಯಮಂತ್ರಿ) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸೋನಿಯಾ ಅವರು ರಾಜೀವ್ ಅವರಿಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದರು ಮತ್ತು ಒಂದೇ ವಿಷಯವನ್ನು ಮೂರು-ನಾಲ್ಕು ಬಾರಿ ಪುನರಾವರ್ತಿಸಿದರು.

ಅಪ್ಪನಿಗೆ ಒತ್ತಡ (stress) ಉಂಟಾಯಿತು, ಅದೇ ಆ ಜಗಳವಾಗಿತ್ತು," ಎಂದು ರಾಹುಲ್ ಹೇಳಿದರು. ರಾಹುಲ್ ಅವರ ಪಾಲಿಗೆ, ಅವರ ತಂದೆ-ತಾಯಿಯ ನಡುವಿನ ಬಾಂಧವ್ಯವು ಕೌಟುಂಬಿಕ ಜೀವನದ ಸಣ್ಣಪುಟ್ಟ ದಿನಚರಿಗಳಲ್ಲಿ ಎದ್ದು ಕಾಣುತ್ತಿತ್ತು.

ಪ್ರತಿ ಊಟದ ಸಮಯದಲ್ಲೂ ಅಪ್ಪ ಇರುತ್ತಿದ್ದರು, ಮತ್ತು ಅಪ್ಪನ ತೊಡೆಯ ಮೇಲೆ ಅಮ್ಮ ಕುಳಿತಿರುತ್ತಿದ್ದರು. ಇದೊಂದು ಸಹಜ ಸಂಗತಿ ಎಂದು ನಾನು ಭಾವಿಸಿದ್ದೆ ಎಂದು ಅವರು ಹೇಳಿದರು. ಆದರೆ, ಒಂದರ ನಂತರ ಒಂದರಂತೆ ಇದೆಲ್ಲವೂ ಛಿದ್ರವಾಗುವುದನ್ನು ನಾವು ನೋಡಿದೆವು," ಎಂದು ಅವರು ಹೇಳಿದರು.

ಮೊದಲು, ನಮ್ಮ ಆಧಾರಸ್ತಂಭವಾಗಿದ್ದ ಅಜ್ಜಿಯನ್ನು [ಇಂದಿರಾ ಗಾಂಧಿ] ಕಳೆದುಕೊಂಡೆವು - ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ನಂತರ, ನಮ್ಮ ಅತಿ ದೊಡ್ಡ ಆಧಾರಸ್ತಂಭವಾಗಿದ್ದ ತಂದೆಯನ್ನು [ರಾಜೀವ್ ಗಾಂಧಿ] ಕಳೆದುಕೊಂಡೆವು - ಅವರನ್ನು ಸ್ಫೋಟಿಸಿ ಛಿದ್ರಗೊಳಿಸಲಾಯಿತು ಎಂದು ನೆನೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

ಸದ್ದೇ ಇಲ್ಲದೇ OTTಗೆ ಲಗ್ಗೆ ಇಟ್ಟ ಕನ್ನಡ ಬ್ಲಾಕ್ ಬಸ್ಟರ್ ಚಿತ್ರ 'ಪ್ರೇಮದ ಊರಲಿ'.. ಎಲ್ಲಿ, ಯಾವಾಗ?

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!

West Asia Conflict ಎಫೆಕ್ಟ್: ರಫ್ತುದಾರರಿಗೆ ತೆರಿಗೆ ಬಿಸಿ; Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!