ASI ಕೊಲೆ ಮಾಡಿ, ಶವ ಸುಟ್ಟು ಹಾಕಿದ ಮಹಿಳಾ ಹೆಡ್‌ಕಾನ್‌ಸ್ಟೆಬಲ್! Online Desk
ದೇಶ

ನನಗೆ ನೀನು ಬೇಡಾ ಎನ್ನುತ್ತಾ, ASI ಕೊಲೆ ಮಾಡಿ, ಶವ ಸುಟ್ಟು ಹಾಕಿದ ಮಹಿಳಾ ಹೆಡ್‌ಕಾನ್‌ಸ್ಟೆಬಲ್! ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದ ಕರಾಳ ಪ್ರೇಮ್ ಕಹಾನಿ

ಗುಜರಾತ್‌ನ ಹಾಥ್ಮತಿ ನದಿ ದಡದಲ್ಲಿ ಸುಟ್ಟು ಕರಕಲಾದ ಕಾರಿನಲ್ಲಿ ಪತ್ತೆಯಾದ ಅಸ್ಥಿಪಂಜರದ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಸಹೋದ್ಯೋಗಿ ಎಎಸ್‌ಐ ಅವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಕಾರಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಬಂಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಅರಾವಳಿ (ಗುಜರಾತ್‌): ಗುಜರಾತ್‌ನ ಅರಾವಳಿ ಜಿಲ್ಲೆಯ ಹಾಥ್ಮತಿ ನದಿ ದಡದಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಪತ್ತೆಯಾಗಿದ್ದ ಮಾನವ ಅಸ್ಥಿಪಂಜರವು 45 ವರ್ಷದ ಸಹಾಯಕ ಸಬ್‌-ಇನ್‌ಸ್ಪೆಕ್ಟರ್ ಅಶ್ವಿನ್‌ಭಾಯ್ ತಬಿಯಾದ್ ಅವರದ್ದು ಎಂಬುದು ದೃಢಪಟ್ಟಿದ್ದು, ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಅವರ ಸಹೋದ್ಯೋಗಿಯೇ ಆದ ಮಹಿಳಾ ಹೆಡ್‌ಕಾನ್‌ಸ್ಟೆಬಲ್‌ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 10ರಂದು ಭಿಲೋಡಾ ತಾಲೂಕಿನ ಪಡಾರ ಗ್ರಾಮದ ಹೊರವಲಯದ ನದಿ ದಡದಲ್ಲಿ ಸಂಪೂರ್ಣ ಸುಟ್ಟುಹೋದ ಮಾರುತಿ ಎರ್ಟಿಗಾ ಕಾರು ಮತ್ತು ಅದರೊಳಗೆ ಅಸ್ಥಿಪಂಜರ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿತ್ತಾದರೂ, ತನಿಖೆಯ ಬಳಿಕ ಇದು ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

45 ವರ್ಷದ ಮೃತ ಸಬ್-ಇನ್‌ಸ್ಪೆಕ್ಟರ್ ಅಶ್ವಿನ್‌ಭಾಯ್ ತಬಿಯಾದ್ ಅವರು ಸಬರ್ಕಾಂತ ಜಿಲ್ಲೆಯ ಚಿಥೋಡಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ 37 ವರ್ಷದ ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಅಲ್ಫಾಬೆನ್ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದಾರೆ. ಏತನ್ಮಧ್ಯೆ, ತಬಿಯಾದ್ ಮತ್ತು ಅಲ್ಫಾಬೆನ್ ನಡುವೆ ಪ್ರೇಮ ಸಂಬಂಧವಿತ್ತು. ಇತ್ತೀಚೆಗೆ ಅಲ್ಫಾಬೆನ್ ಈ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಒಪ್ಪದ ತಬಿಯಾದ್, ಸಂಬಂಧ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಅಲ್ಫಾಬೆನ್, ತಬಿಯಾದ್ ಅವರನ್ನು ಮುಗಿಸಲು ಸಂಚು ರೂಪಿಸಿದ್ದರು. ಅದರಂತೆ, ನವೆಂಬರ್ 8ರ ರಾತ್ರಿ 10:15ರ ಸುಮಾರಿಗೆ ಕರ್ತವ್ಯಕ್ಕೆಂದು ತಮ್ಮ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ತೆರಳಿದ್ದ ತಬಿಯಾದ್ ಮನೆಗೆ ಮರಳಿರಲಿಲ್ಲ. ನದಿ ದಡದಲ್ಲಿ ಸುಟ್ಟ ಕಾರು ಪತ್ತೆಯಾದಾಗ, ತಬಿಯಾದ್ ಅವರ ತಂದೆ ಬಾಬುಭಾಯ್ ಪೊಲೀಸರನ್ನು ಸಂಪರ್ಕಿಸಿ ಅದು ತಮ್ಮ ಮಗನದ್ದೇ ಕಾರು ಮತ್ತು ಅಸ್ಥಿಪಂಜರ ಎಂದು ಶಂಕೆ ವ್ಯಕ್ತಪಡಿಸಿದ್ದರು.

ಮುಂದುವರೆದು, ಅಶ್ವಿನ್ ಅವರನ್ನು ಹತ್ಯೆ ಮಾಡಿದ ಬಳಿಕ, ಅಲ್ಫಾಬೆನ್ ತನ್ನ ಸಹೋದರ ಮತ್ತು ಇಬ್ಬರು ಪರಿಚಿತರ (ಒಟ್ಟು ಮೂವರು ಸಹಚರರ) ಸಹಾಯದಿಂದ ಶವವನ್ನು ಗೋಣಿಚೀಲದಲ್ಲಿ ತುಂಬಿ ಅಶ್ವಿನ್ ಅವರ ಕಾರಿನಲ್ಲೇ ಇರಿಸಿದ್ದರು. ನಂತರ ವಿಜಯನಗರದ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ಖರೀದಿಸಿ ತಂದು, ನದಿ ದಡದಲ್ಲಿ ಕಾರಿಗೆ ಬೆಂಕಿ ಹಚ್ಚಿ ಇದೊಂದು ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರು.

ಏತನ್ಮಧ್ಯೆ, ಆರೋಪಿಗಳು ಎಎಸ್‌ಐ ಅವರನ್ನು ಹತ್ಯೆಗೈದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಕಾರಿನಲ್ಲಿಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಪೆಟ್ರೋಲ್ ಖರೀದಿಸಿದ ದಾಖಲೆಗಳನ್ನು ಆಧರಿಸಿ ಪೊಲೀಸರು ಹೆಡ್‌ಕಾನ್‌ಸ್ಟೆಬಲ್ ಅಲ್ಫಾಬೆನ್, ಆಕೆಯ ಸಹೋದರ ಕಲ್ಪೇಶ್, ಸೋದರಸಂಬಂಧಿ ಪಂಕಜ್ ಕುಮಾರ್ ಮತ್ತು ಸ್ನೇಹಿತ ಮನೋಜ್‌ಕುಮಾರ್ ನಿನಾಮ ಅವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

ICC ಏಕದಿನ ರ‍್ಯಾಂಕಿಂಗ್‌: ಭಾರತದ ಅರ್ಷ್ ದೀಪ್ ಸಿಂಗ್‌ಗೆ ಭರ್ಜರಿ ಮುಂಬಡ್ತಿ, ಜಿಂಬಾಬ್ವೆ ಆಟಗಾರರ ಭರ್ಜರಿ ಸಾಧನೆ!

'ಅಪರಿಚಿತರ ಜೊತೆ ಪ್ರಯಾಣಿಸಬೇಡಿ': ಎಚ್ಚರಿಕೆ ನಿರ್ಲಕ್ಷಿಸಿ ಸ್ಥಳೀಯರೊಂದಿಗೆ ಬ್ರೆಜಿಲ್ ಮಹಿಳೆ ಮರುಭೂಮಿಯಲ್ಲಿ ಕ್ಯಾಂಪಿಂಗ್, ಮುಂದೇನಾಯ್ತು?

ಉತ್ತರ ಪ್ರದೇಶದಲ್ಲಿ ಮತ್ತೆ ಎನ್ಕೌಂಟರ್; ಪೊಲೀಸರ ಗುಂಡಿಗೆ Gangster ವಹೀದ್ ಅನ್ಸಾರಿ ಹತ