ಪ್ರಧಾನಿ ನರೇಂದ್ರ ಮೋದಿ  
ದೇಶ

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಬಡತನದಿಂದ ಹೊರಬಂದವರಲ್ಲಿ ಹಲವರು ಶಿಸ್ತುಬದ್ಧವಲ್ಲದ ಖರ್ಚಿನ ಕಾರಣದಿಂದ ಮತ್ತೆ ಬಡತನಕ್ಕೆ ಜಾರುವ ಅಪಾಯವಿದೆ ಎಂಬ ಕಳವಳದಿಂದ ಪ್ರಧಾನಿ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

ಭಾರತವು ಸುಮಾರು 50 ಕೋಟಿ ಜನರನ್ನು ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿರುವುದನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಉಳಿತಾಯದ ಸಂಸ್ಕೃತಿಯನ್ನು ಉತ್ತೇಜಿಸುವಂತೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಸರ್ಕಾರಿ ಕಾರ್ಯದರ್ಶಿಗಳಿಗೆ ಕರೆ ನೀಡಿದ್ದಾರೆ.

ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲ ಕ್ಯಾಬಿನೆಟ್ ಸಚಿವರು ಮತ್ತು ಸರ್ಕಾರಿ ಕಾರ್ಯದರ್ಶಿಗಳು ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದ್ದಾರೆ.

ಭಾರತೀಯ ಸಂಸ್ಕೃತಿಯು “ತಿನ್ನು, ಕುಡಿ, ಮೋಜು ಮಾಡು (ಖಾವೋ, ಪಿಯೋ ಔರ್ ಮೌಜ್ ಕರೋ)” ಎಂಬ ಮನೋಭಾವವನ್ನು ನಂಬುವುದಿಲ್ಲ, ಅದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದರು.

ಬಡತನದಿಂದ ಹೊರಬಂದವರಲ್ಲಿ ಹಲವರು ಶಿಸ್ತುಬದ್ಧವಲ್ಲದ ಖರ್ಚಿನ ಕಾರಣದಿಂದ ಮತ್ತೆ ಬಡತನಕ್ಕೆ ಜಾರುವ ಅಪಾಯವಿದೆ ಎಂಬ ಕಳವಳದಿಂದ ಪ್ರಧಾನಿ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

2011ರಿಂದ 2023ರ ಅವಧಿಯಲ್ಲಿ ಲಕ್ಷಾಂತರ ಜನರನ್ನು ಬಡತನದಿಂದ ಹೊರತರುವಲ್ಲಿ ಭಾರತ ಸಾಧಿಸಿರುವ ಯಶಸ್ಸನ್ನು ಶ್ಲಾಘಿಸಿದ ಮೋದಿ, ಈ ಸಾಧನೆಯು 'ರಾಷ್ಟ್ರೀಯ ಸಂಭ್ರಮಾಚರಣೆ'ಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಗಳು, ಅಧಿಕಾರಿಗಳು, ಕೈಗಾರಿಕೆಗಳು ಮತ್ತು ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. ಎಡಪಂಥೀಯ ಉಗ್ರವಾದವನ್ನು (LWE) ನಿರ್ಮೂಲನೆ ಮಾಡುವ ಗುರಿ ಸಾಧಿಸಿರುವುದನ್ನೂ ಪ್ರಧಾನಿ ಪ್ರಸ್ತಾಪಿಸಿದ್ದಾರೆ.

ನಮ್ಮ ಸಾಮೂಹಿಕ ಪ್ರಯತ್ನದಿಂದ ಈವರೆಗಿನ ಅತಿ ಹೆಚ್ಚಿನ ಸಂಖ್ಯೆಯ ಜನರನ್ನು ಬಡತನದಿಂದ ಹೊರತರುವಲ್ಲಿ ಮತ್ತು ಎಡಪಂಥೀಯ ಉಗ್ರವಾದದ ಪಿಡುಗನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದರೆ, ಮಾದಕ ವಸ್ತುಗಳ ದುರ್ಬಳಕೆಯನ್ನೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲವೇ? ಇವೆಲ್ಲವೂ ಎಲ್ಲರ ಕೊಡುಗೆಯಿಂದ ಸಾಧ್ಯವಾಗಿದೆ. ಹೀಗಾಗಿ, ನಾವು ದೃಢಸಂಕಲ್ಪ ಮಾಡಿದರೆ ಇದನ್ನೂ ಸಾಧಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.

ಮುಂದಿನ ಪೀಳಿಗೆಯನ್ನು ರಕ್ಷಿಸಲು ಮಾದಕ ವಸ್ತುಗಳ ದುರ್ಬಳಕೆಯನ್ನು ಕೊನೆಗೊಳಿಸುವುದು ಅತ್ಯಗತ್ಯ. ಇದು ಪ್ರತಿಯೊಬ್ಬರ ವೈಯಕ್ತಿಕ ಬದ್ಧತೆಯಾಗಬೇಕು ಎಂದು ಮೋದಿ ಹೇಳಿದ್ದಾರೆ.

ವಿಶ್ವಬ್ಯಾಂಕ್‌ನ ಅಕ್ಟೋಬರ್ ತಿಂಗಳ ಬಡತನ ಮತ್ತು ಸಮಾನತೆಯ ವರದಿಯ ಪ್ರಕಾರ, ಜಾಗತಿಕವಾಗಿ ಅತ್ಯಂತ ವೇಗವಾಗಿ ಬಡತನವನ್ನು ಕಡಿಮೆ ಮಾಡುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. 2011ರಿಂದ 2023ರ ಅವಧಿಯಲ್ಲಿ ಅಂದಾಜು 49.6 ಕೋಟಿ ಜನರನ್ನು ತೀವ್ರ ಬಡತನದಿಂದ ಹೊರತರುವಲ್ಲಿ ಭಾರತ ಯಶಸ್ವಿಯಾಗಿದೆ.

ದೇಶದಲ್ಲಿ ತೀವ್ರ ಬಡತನದಲ್ಲಿ ಬದುಕುತ್ತಿರುವ ಜನರ ಪ್ರಮಾಣವು 2011ರಲ್ಲಿ ಶೇ.27.1ರಷ್ಟಿದ್ದು, 2023ರಲ್ಲಿ ಶೇ.2.6ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ. ಇದು ದೇಶದ ಬಡತನ ಸೂಚ್ಯಂಕಗಳಲ್ಲಿ ಮಹತ್ವದ ಸುಧಾರಣೆಯನ್ನು ಸೂಚಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ; ಮುಹಮ್ಮದ್ ಯೂನಸ್ ಮನೆಗೆ ಬೆಂಕಿ, ಗ್ರಾಮೀಣ್ ಬ್ಯಾಂಕ್ ಗಳ ಮೇಲೂ ದಾಳಿ, ಕನಿಷ್ಠ 4 ಸಾವು!

ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕನ ಆತಂಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ, ಬಲವಂತವಾಗಿ ನುಗ್ಗಲು ಯತ್ನಿಸಿದವ CISF ವಶಕ್ಕೆ! Video

Video: 'ಇನ್ಮೇಲೆ ನೀರಿಗಾಗಿ ಗಲಾಟೆ ಇರೋಲ್ಲ': ಕಾವೇರಿ-ಗೋದಾವರಿ ಜೋಡಣೆ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ!

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ, ಮೊದಲ ದಿನದಾಟದ ಅಂತ್ಯಕ್ಕೆ NZ 243/5