ಮಲ್ಲಿಕಾರ್ಜುನ ಖರ್ಗೆ 
ದೇಶ

‘ನಿಮ್ಮ ವೈಫಲ್ಯಗಳಿಗೆ ಉದ್ಯಮ ವಲಯವನ್ನು ಏಕೆ ಹೊಣೆ ಮಾಡುತ್ತಿದ್ದೀರಿ?’: ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

ನಿರುದ್ಯೋಗ ಮತ್ತು ವೇತನ ಹೆಚ್ಚಳದ ಕುರಿತು ಪ್ರಶ್ನಿಸುವ ಮೂಲಕ ಪ್ರಧಾನಿ ಮೋದಿ ಉದ್ಯಮದ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡಿದ್ದರು.

ನವದೆಹಲಿ: ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ(Federation of Indian Chambers of Commerce & Industry-FICCI) ಶತಮಾನೋತ್ಸವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಸರ್ಕಾರದ ವೈಫಲ್ಯಗಳಿಗೆ ಉದ್ಯಮ ವಲಯವನ್ನು ಹೊಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ನಿರುದ್ಯೋಗ ಮತ್ತು ವೇತನ ಹೆಚ್ಚಳದ ಕುರಿತು ಪ್ರಶ್ನಿಸುವ ಮೂಲಕ ಪ್ರಧಾನಿ ಮೋದಿ ಉದ್ಯಮದ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಯವರ ಹೇಳಿಕೆಗಳಿಂದ ದೇಶದ ವಿಶ್ವಾಸಾರ್ಹತೆ ಹಾಗೂ ಭಾರತೀಯ ಉತ್ಪನ್ನಗಳ ಜಾಗತಿಕ ಬ್ರ್ಯಾಂಡ್ ಮೌಲ್ಯ ಕುಸಿದಿದೆ ಎಂದು ಹೇಳಿದರು.

ಇಂದು ಉದ್ಯೋಗಗಳಿಲ್ಲ, ಉಳಿತಾಯವಿಲ್ಲ, ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಸಾರ್ವಜನಿಕ ವಲಯದ ಉದ್ದಿಮೆಗಳು (PSU) ಮುಚ್ಚಲ್ಪಟ್ಟಿವೆ ಮತ್ತು 'ಮೇಕ್ ಇನ್ ಇಂಡಿಯಾ'ವನ್ನು 'ಚೀನಾದಿಂದ ಖರೀದಿಸಿ' ಎಂಬಂತಾಗಿದೆ. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಆಯ್ದ ಕೆಲ ಬಂಡವಾಳಶಾಹಿಗಳಿಗೆ ಭಾರತೀಯ ಆರ್ಥಿಕತೆಯ ಮೇಲೆ ವ್ಯವಸ್ಥಿತವಾಗಿ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿದೆ. ಇದು ಇಂದು ಭಾರತೀಯ ಆರ್ಥಿಕತೆ ಎದುರಿಸುತ್ತಿರುವ ಅತಿದೊಡ್ಡ ಸವಾಲು ಹಾಗೂ ಆರ್ಥಿಕ ದುರಂತವಾಗಿ ಪರಿಣಮಿಸುತ್ತಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ನಿನ್ನೆ ಗುರುವಾರ ಪ್ರಧಾನಿ ಮೋದಿ ಉದ್ಯಮ ವಲಯದವರನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿದ್ದಾರೆಯೇ ಹಾಗೂ ಉದ್ಯೋಗಾವಕಾಶಗಳ ಪ್ರಮಾಣ ಹೆಚ್ಚಿಸಲು ಕೊಡುಗೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದರು.

ನಿನ್ನೆ ಭಾಷಣದಲ್ಲಿ ಪ್ರಧಾನ ಮಂತ್ರಿ ಏನು ಹೇಳಿದ್ದರು?

ಫಿಕ್ಕಿ ಶತಮಾನೋತ್ಸವ ಸಮಾವೇಶದಲ್ಲಿ ಉದ್ಯಮದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉದ್ಯಮದ ಬಗ್ಗೆ ಮಾತನಾಡುವುದಾದರೆ, ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ಗಮನವು ಉದ್ಯಮ ವ್ಯವಹಾರ ಸುಗಮಗೊಳಿಸುವಿಕೆ (Ease of Doing Business) ಮೇಲೆ ಕೇಂದ್ರೀಕೃತವಾಗಿದೆ. 2014ರಲ್ಲಿ ಮೂಲ ಕಾರ್ಪೊರೇಟ್ ತೆರಿಗೆ ದರ ಶೇ. 30ರಷ್ಟಿತ್ತು. ಅದನ್ನು ಶೇ. 22ಕ್ಕೆ ಇಳಿಸಿದ್ದೇವೆ. ಇಂದು ಭಾರತದಲ್ಲಿ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಆದಾಯ ತೆರಿಗೆ ಇಲ್ಲ. ನಾನು ಮಾತನಾಡಿದರೆ ನೀವು ಚಪ್ಪಾಳೆ ತಟ್ಟುವುದಿಲ್ಲ ಎಂಬುದು ಗೊತ್ತು. ಏಕೆಂದರೆ ಎಷ್ಟೇ ಕೊಟ್ಟರೂ ನಿಮ್ಮ ಬೇಡಿಕೆ ತೃಪ್ತಿಯಾಗುವುದಿಲ್ಲ. 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದೇನೆ. ನೀವು ನಿಮ್ಮ ಉದ್ಯೋಗಿಗಳ ವೇತನ ಹೆಚ್ಚಿಸಿದ್ದೀರಾ? ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಇಲ್ಲ. ನಿಮ್ಮ ಧೋರಣೆ ಮಾತ್ರ ಬದಲಾಗಿಲ್ಲ. 'ಮೋದಿಜಿ, ನೀವು ಮಾಡಿ, ನಾವು ನೋಡುತ್ತೇವೆ' ಎಂಬಂತಿದೆ” ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಪತಿ ಜೊತೆ ಅಕ್ರಮ ಸಂಬಂಧ ಶಂಕೆ; ಇಂಡಿಗೋ ಸಿಬ್ಬಂದಿ ವರ್ಷಾ ಹತ್ಯೆ; ಪತ್ನಿಯಿಂದಲೇ ಸುಪಾರಿ!

HDK vs DKS ಸಂಘರ್ಷಕ್ಕೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್! ವಿವಾದಕ್ಕೆ ಕಾರಣವಾಯ್ತು ಕಾಂಗ್ರೆಸ್ MP ಹೇಳಿಕೆ, ಬಿಜೆಪಿ ತಿರುಗೇಟು

ಕಾವೇರಿ ಕದನದಲ್ಲಿ ಮಹಾ ತಿರುವು! ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಅರ್ಜಿ ವಜಾ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು