ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಹಾರದ ವೈಶಾಲಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರಿನಲ್ಲಿ ಗಂಗಾ ನದಿಯ ಮೇಲೆ ನಿರ್ಮಿಸಲಾಗಿರುವ 5,500 ಕೋಟಿ ರೂಪಾಯಿ ವೆಚ್ಚದ ನಿತೀಶ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಿತೀಶ್ ಕುಮಾರ್ ರಾಜೀನಾಮೆ ನಂತರ ಬಿಹಾರದಲ್ಲಿ ಮೊದಲ ಬಾರಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರ ರಚನೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮೋದಿ ಅವರು ಮೊದಲ ಬಾರಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ.
ವೈಶಾಲಿಯ ಬಿದುಪುರ್ ಬ್ಲಾಕ್ನಿಂದ ಪಾಟ್ನಾದ ಹೊರವಲಯದಲ್ಲಿರುವ ಕಚ್ಚಿ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ 9.76 ಕಿಮೀ ಉದ್ದದ ಆರು ಪಥದ ಸೇತುವೆಗೆ 'ನಿತೀಶ್ ಸೇತು' ಎಂದು ನಾಮಕರಣ ಮಾಡಲಾಗಿದೆ.
JD-U ನೇತೃತ್ವದ ಮತ್ತು ಸುಮಾರು ಎರಡು ದಶಕಗಳ ಅವಧಿಯ ನಂತರ ಕಳೆದ ಏಪ್ರಿಲ್ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ ನಿತೀಶ್ ಕುಮಾರ್ ಅವರು, 2012 ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು. ಆದರೆ 2015 ರಲ್ಲಿ ಕೆಲಸ ಪ್ರಾರಂಭವಾಯಿತು. ಕೇಂದ್ರದ NDA ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನಿಂದ 3472.15 ಕೋಟಿ ರೂ. ಸಾಲವಾಗಿ ಪಡೆಯಲು ರಾಜ್ಯಕ್ಕೆ ಸಹಾಯ ಮಾಡಿದ ನಂತರ ಈ ಯೋಜನೆ ವೇಗ ಪಡೆದುಕೊಂಡಿತು.