ಬಿಜೆಪಿ-ಕಾಂಗ್ರೆಸ್ 
ದೇಶ

ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಗೆಲುವು; ಆಡಳಿತರೂಢ BJPಗೆ ತೀವ್ರ ಮುಖಭಂಗ!

ರಾಜ್ಯ ಚುನಾವಣಾ ಆಯೋಗದ(SEC) ಮಾಹಿತಿಯ ಪ್ರಕಾರ, ಕಾಂಗ್ರೆಸ್ ಒಟ್ಟು 2,990 ಪಂಚಾಯತ್ ಸಮಿತಿ ಸ್ಥಾನಗಳನ್ನು ಮತ್ತು 143 ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆದ್ದುಕೊಂಡಿದೆ.

ಜೈಪುರ: ರಾಜಸ್ಥಾನ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ, ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭಾರೀ ಮುನ್ನಡೆ ಕಾಯ್ದುಕೊಂಡಿದೆ.

ರಾಜ್ಯ ಚುನಾವಣಾ ಆಯೋಗದ(SEC) ಮಾಹಿತಿಯ ಪ್ರಕಾರ, ಕಾಂಗ್ರೆಸ್ ಒಟ್ಟು 2,990 ಪಂಚಾಯತ್ ಸಮಿತಿ ಸ್ಥಾನಗಳನ್ನು ಮತ್ತು 143 ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆದ್ದುಕೊಂಡಿದೆ.

ಇಲ್ಲಿಯವರೆಗೆ ಫಲಿತಾಂಶ ಘೋಷಣೆಯಾಗಿರುವ 6,050 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 1,795 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಹಾಗೆಯೇ, ಮತ ಎಣಿಕೆ ಪೂರ್ಣಗೊಂಡಿರುವ 239 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ ಬಿಜೆಪಿ 83 ಸ್ಥಾನಗಳನ್ನು ಪಡೆದುಕೊಂಡಿದೆ.

ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವು(RLP) 438 ಪಂಚಾಯತ್ ಸಮಿತಿ ಸ್ಥಾನಗಳನ್ನು, ಭಾರತ್ ಆದಿವಾಸಿ ಪಕ್ಷವು (BAP) 215, ಸಿಪಿಐ(ಎಂ) 50, ಬಿಎಸ್‌ಪಿ 44, ಆಮ್ ಆದ್ಮಿ ಪಕ್ಷ (AAP) 2 ಸ್ಥಾನಗಳನ್ನು ಗೆದ್ದುಕೊಂಡಿವೆ. ಇವುಗಳಲ್ಲದೆ, ಪಕ್ಷೇತರ ಅಭ್ಯರ್ಥಿಗಳು 516 ಸ್ಥಾನಗಳನ್ನು ಪಡೆದಿದ್ದಾರೆ.

ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ, ಪಕ್ಷೇತರ ಅಭ್ಯರ್ಥಿಗಳು 5 ಸ್ಥಾನಗಳನ್ನು, ಆರ್‌ಎಲ್‌ಪಿ (RLP) 4, ಸಿಪಿಐ(ಎಂ) 3 ಮತ್ತು ಬಿಎಸ್‌ಪಿ 1 ಸ್ಥಾನ ಗೆದ್ದುಕೊಂಡಿವೆ.

ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ ಪ್ರಮುಖ ಬಿಜೆಪಿ ಅಭ್ಯರ್ಥಿಗಳಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಝಬಾರ್ ಸಿಂಗ್ ಖಾರ್ರಾ ಅವರ ಪತ್ನಿ ಶಾಂತಿ ದೇವಿ ಮತ್ತು ಪುತ್ರ ಅಜಯ್ ಸಿಂಗ್ ಸೇರಿದ್ದಾರೆ. ಶಾಂತಿ ದೇವಿ ಮತ್ತು ಅಜಯ್ ಸಿಂಗ್ ಅವರು ಸಿಕಾರ್‌ನಲ್ಲಿ ಕ್ರಮವಾಗಿ 17 ಮತ್ತು 20ನೇ ವಾರ್ಡ್‌ಗಳಿಂದ ಸ್ಪರ್ಧಿಸಿದ್ದರು.

ಖಾರ್ರಾ ಅವರ ಮತ್ತೊಬ್ಬ ಪುತ್ರ ದುರ್ಗಾ ಸಿಂಗ್, 19ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ, ಅವರೂ ಸಹ ಸೋಲು ಅನುಭವಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಪತಿ ಜೊತೆ ಅಕ್ರಮ ಸಂಬಂಧ ಶಂಕೆ; ಇಂಡಿಗೋ ಸಿಬ್ಬಂದಿ ವರ್ಷಾ ಹತ್ಯೆ; ಪತ್ನಿಯಿಂದಲೇ ಸುಪಾರಿ!

ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ

HDK vs DKS ಸಂಘರ್ಷಕ್ಕೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್! ವಿವಾದಕ್ಕೆ ಕಾರಣವಾಯ್ತು ಕಾಂಗ್ರೆಸ್ MP ಹೇಳಿಕೆ, ಬಿಜೆಪಿ ತಿರುಗೇಟು