ಅಯೋಧ್ಯೆಯಿಂದ ಸ್ಪರ್ಧಿಸಲು ಅಖಿಲೇಶ್‌ಗೆ ಸಿಎಂ ಯೋಗಿ ಪಂಥಾಹ್ವಾನ Online Desk
ದೇಶ

ಧೈರ್ಯವಿದ್ದರೆ ಅಯೋಧ್ಯೆಯಿಂದ ನನ್ನ ವಿರುದ್ಧ ಸ್ಪರ್ಧಿಸಿ: ಅಖಿಲೇಶ್‌ಗೆ ಸಿಎಂ ಯೋಗಿ ಪಂಥಾಹ್ವಾನ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಅಯೋಧ್ಯೆ ಕ್ಷೇತ್ರದಿಂದ ತಮ್ಮ ವಿರುದ್ಧ ನೇರವಾಗಿ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಗೋರಖ್‌ಪುರ (ಉತ್ತರ ಪ್ರದೇಶ): 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ರಣಾಂಗಣ ರಂಗೇರಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಅಯೋಧ್ಯೆ ಕ್ಷೇತ್ರದಿಂದ ತಮ್ಮ ವಿರುದ್ಧ ನೇರ ಚುನಾವಣೆಗೆ ಸ್ಪರ್ಧಿಸುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಯೋಗಿ ಆದಿತ್ಯನಾಥ್ ಅವರ ನೇರ ಸವಾಲು

ತಮ್ಮ ತವರು ಕ್ಷೇತ್ರ ಗೋರಖ್‌ಪುರದ ಕ್ಯಾಂಪಿಯರ್‌ಗಂಜ್‌ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ನೀವು ಶ್ರೀ ಅಯೋಧ್ಯಾ ಧಾಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ನಾನೂ ಅಲ್ಲಿಂದಲೇ ನಾಮಪತ್ರ ಸಲ್ಲಿಸುತ್ತೇನೆ. ಧೈರ್ಯವಿದ್ದರೆ ನೇರವಾಗಿ ಮುಖಾಮುಖಿ ಸ್ಪರ್ಧೆ ನಡೆಯಲಿ, ಒಮ್ಮೆ ಅದೃಷ್ಟ ಪರೀಕ್ಷೆ ಮಾಡೋಣ" ಎಂದು ಯೋಗಿ ಆದಿತ್ಯನಾಥ್ ಪಂಥಾಹ್ವಾನ ನೀಡಿದ್ದಾರೆ. ಇದರೊಂದಿಗೆ, ಅಖಿಲೇಶ್ ಯಾದವ್ ಅವರಿಗೆ ತಮ್ಮನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲ ಎಂದು ಆರೋಪಿಸಿದ ಯೋಗಿ, "ದುರ್ಬಲರು ಎಂದಿಗೂ ಮುಖಾಮುಖಿಯಾಗಿ ಹೋರಾಡುವುದಿಲ್ಲ, ಅವರು ಹಿಂದಿನಿಂದ ದಾಳಿ ಮಾಡುತ್ತಾರೆ" ಎಂದು ಟೀಕಿಸಿದ್ದಾರೆ.

ಏತನ್ಮಧ್ಯೆ, ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಗೆ ಒಂದು ದಿನ ಮೊದಲು, ಅಖಿಲೇಶ್ ಯಾದವ್ ಅವರು ಗೋರಖ್‌ಪುರದಲ್ಲಿ 20 ಕಿ.ಮೀ. ಉದ್ದದ 'ಪಿಡಿಎ ರಥಯಾತ್ರೆ' ನಡೆಸಿದ್ದರು. ಈ ವೇಳೆ 2027ರ ಚುನಾವಣೆಯಲ್ಲಿ ಅಯೋಧ್ಯೆಯಿಂದ ಸ್ಪರ್ಧಿಸುವಂತೆ ಯೋಗಿ ಅವರಿಗೆ ಅಖಿಲೇಶ್ ಸವಾಲು ಹಾಕಿದ್ದರು ಮತ್ತು ಇಂದು ಚುನಾವಣೆ ನಡೆದರೆ ಗೋರಖ್‌ಪುರದಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಿದ್ದರು.

ಮುಂದುವರೆದು ಮಾತನಾಡಿದ ಯೋಗಿ, ರಾಮಮಂದಿರ ಚಳವಳಿಯ ಸಂದರ್ಭದಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ್ದವರು ಮತ್ತು 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಬಲಪ್ರಯೋಗ ಮಾಡಿದ್ದವರು ಈಗ ರಾಜಕೀಯ ಲಾಭಕ್ಕಾಗಿ ಶ್ರೀರಾಮನನ್ನು ಸ್ಮರಿಸುತ್ತಿದ್ದಾರೆ ಎಂದು ಯೋಗಿ ಟೀಕಿಸಿದರು. ರಾಮಾಯಣದ ಮಾರೀಚನ ಪಾತ್ರವನ್ನು ಉಲ್ಲೇಖಿಸಿದ ಅವರು, ವೇಷ ಮರೆಸಿಕೊಂಡು ಬರುವವರ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಹೇಳಿದರು. ಅಲ್ಲದೆ, ಹಿಂದಿನ ಎಸ್‌ಪಿ ಆಡಳಿತಾವಧಿಯಲ್ಲಿ ಮಾಫಿಯಾ, ಗೂಂಡಾಗಿರಿ ಮತ್ತು ನಿರುದ್ಯೋಗ ಹೆಚ್ಚಾಗಿತ್ತು ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕದನದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್! 11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿ ಸುಪ್ರೀಂನಲ್ಲಿ ವಜಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಒಂದೆಡೆ ತನಿಖೆ ಬೇಕೆನ್ನುತ್ತೀರಿ, ಈಗ FIR ರದ್ದು ಕೋರುತ್ತಿದ್ದೀರಿ: SIT ತನಿಖೆ ರದ್ದು ಕೋರಿದ್ದ ಗಿರೀಶ್ ಮಟ್ಟಣ್ಣನವರ್‌ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

'ಅಕ್ವಾನ್ ಚಂಡಮಾರುತ': ಒಡಿಶಾದ ಗೋಪಾಲಪುರ ಸಮೀಪ ಪ್ರವೇಶ ಪ್ರಕ್ರಿಯೆ ಆರಂಭ; 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!