ರವಿ ಹಂಜ್  
ದೇಶ

'ಬಸವ ಮಂಟಪ' ಪುಸ್ತಕ ವಿವಾದ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲೇಖಕ ರವಿ ಹಂಜ್ ಪೊಲೀಸ್ ವಶಕ್ಕೆ

ಕೊಚ್ಚಿ ವಿಮಾನ ನಿಲ್ದಾಣದ ಪೊಲೀಸರು ರವಿ ಹಂಜ್ ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಬಳಿಕ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಎಫ್‌ಐಆರ್‌ಗಳು ದಾಖಲಾಗಿದ ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಹಿಂದೆ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.

ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಮತ್ತು ಲಿಂಗಾಯತ ಸಮುದಾಯದ ವಿರುದ್ಧ ಅವಹೇಳನಕಾರಿ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಕನ್ನಡ ಪುಸ್ತಕ ಬಸವ ಮಂಟಪದ ಅಮೆರಿಕ ಮೂಲದ ಲೇಖಕ ರವಿ ಹಂಜ್ ಅವರನ್ನು ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಮತ್ತು ಬೆಂಗಳೂರು ಪೊಲೀಸರು ರವಿ ಹಂಜ್ ಅವರನ್ನು ಕೊಚ್ಚಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಖಚಿತಪಡಿಸಿದ್ದಾರೆ.

ವರದಿಗಳ ಪ್ರಕಾರ, ಕೊಚ್ಚಿ ವಿಮಾನ ನಿಲ್ದಾಣದ ಪೊಲೀಸರು ರವಿ ಹಂಜ್ ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಬಳಿಕ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಎಫ್‌ಐಆರ್‌ಗಳು ದಾಖಲಾಗಿದ ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಹಿಂದೆ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.

ಕನ್ನಡ ದಿನಪತ್ರಿಕೆಯೊಂದರಲ್ಲಿ ಈ ಹಿಂದೆ ಪ್ರಕಟವಾಗಿದ್ದ ರವಿ ಹಂಜ್ ಅವರ ಅಂಕಣಗಳ ಸಂಕಲನವಾದ ಬಸವ ಮಂಟಪ ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರವಿ ಹಂಜ್ ಅಲಿಯಾಸ್ ಹಂಜಿಗುಮಠ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೆಳಗಾವಿಯಲ್ಲೂ ಪ್ರಕರಣ ದಾಖಲಾಗಿರುವ ವರದಿಗಳಿವೆ. ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು, ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು, ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣಗಳು ದಾಖಲಾಗಿವೆ. ಪುಸ್ತಕದಲ್ಲಿನ ಬರಹಗಳು ಮತ್ತು ನವೆಂಬರ್ 13ರಂದು ನೀಡಿದ ಸಂದರ್ಶನದಲ್ಲಿ ಹಂಜ್ ಮಾಡಿದ ಹೇಳಿಕೆಗಳು ಬಸವಣ್ಣನವರ ಬೋಧನೆ ಹಾಗೂ ತತ್ವಗಳನ್ನು ತಿರುಚಿವೆ ಎಂದು ಸಮುದಾಯದ ಮುಖಂಡರು ಮತ್ತು ಸಂಘಟನೆಗಳು ಆರೋಪಿಸಿವೆ.

ಕದಿಯಬಾರದು, ಕೊಲ್ಲಬಾರದು, ಸುಳ್ಳು ಹೇಳಬಾರದು ಎಂಬ ಸಂದೇಶ ಸಾರುವ ಪ್ರಸಿದ್ಧ ವಚನಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಒಳಗೊಂಡಂತೆ ಲೇಖಕರು ಬಸವಣ್ಣನವರನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ಬಿಂಬಿಸಿದ್ದಾರೆ. ಇದರಿಂದ ಲಿಂಗಾಯತ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪುಸ್ತಕದ ವಿಷಯವನ್ನು ಖಂಡಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮೂಲತಃ ದಾವಣಗೆರೆಯವರಾದ, ಪ್ರಸ್ತುತ ಅಮೆರಿಕದ ಚಿಕಾಗೋದಲ್ಲಿ ನೆಲೆಸಿರುವ ಹಂಜ್, ತಮ್ಮ ಕೃತಿ ಸಂಶೋಧನಾಧಾರಿತವಾಗಿದೆ ಎಂದು ಹೇಳಿದ್ದಾರೆ. ವಿವಿಧ ಕಾಲಘಟ್ಟಗಳ ಲಿಂಗಾಯತ ಸಂಪ್ರದಾಯವನ್ನು ಪರಿಶೀಲಿಸಿರುವುದಾಗಿ ತಿಳಿಸಿರುವ ಅವರು, ಬಸವಣ್ಣನವರಿಂದ ಮಾತ್ರ ಸ್ಥಾಪನೆಯಾದ ಪ್ರತ್ಯೇಕ ಧರ್ಮವಲ್ಲ; ಲಿಂಗಾಯತರು ಮತ್ತು ವೀರಶೈವರು ಒಂದೇ ಶೈವ ಪರಂಪರೆಯ ಭಾಗವಾಗಿದ್ದಾರೆ ಎಂಬ ವಾದವನ್ನು ತಮ್ಮ ಕೃತಿಯಲ್ಲಿ ಮಂಡಿಸಿದ್ದಾರೆ.

ತಮ್ಮ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ವಿಷಾದ ವ್ಯಕ್ತಪಡಿಸಿ ರವಿ ಹಂಜ್ ಹೇಳಿಕೆಗಳು ಮತ್ತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆದರೆ, ಪುಸ್ತಕದಲ್ಲಿನ ವಿಶಾಲವಾದ ಐತಿಹಾಸಿಕ ದಾಖಲೆಗಳಿಗೆ ಸಂಬಂಧಿಸಿದ ವಾದಗಳನ್ನು ಸಮರ್ಥಿಸಿಕೊಂಡಿರುವ ಅವರು, ಯಾವುದೇ ಕಾನೂನು ಪ್ರಕ್ರಿಯೆ ಎದುರಿಸಲು ಸಿದ್ಧ ಎಂದಿದ್ದಾರೆ.

ಪೊಲೀಸರ ತನಿಖೆ ಮುಂದುವರಿದಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಹಂಜ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುವ ನಿರೀಕ್ಷೆಯಿದೆ. ದಾಖಲಾದ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖಾತೆ ನಿರ್ಬಂಧ ವಿವಾದ: ಭಾರತ Modi ಖಾಸಗಿ ಆಸ್ತಿಯಲ್ಲ; BJP ಕೈಗೊಂಬೆಯಾಗದೆ ಧೈರ್ಯ ತೋರಿಸಿ- META ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ, ಖಾತೆ ಮರುಸ್ಥಾಪನೆಗೆ ಆಗ್ರಹ..!

'ಹಿಂದೆ ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದವರು ಕಡತ ಸಿದ್ದಪಡಿಸೋದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ': ಪ್ರಧಾನಿ ಮೋದಿ; Video

ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ಗಳ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ಗಳಿಂದ ಶುಭಮನ್ ಗಿಲ್ ಶತಕ ಮಿಸ್!

'INDIA ನೋಡಿ ಕಲಿಯಿರಿ': ಭಾರತದ ಆರ್ಥಿಕ ಪ್ರಗತಿ ಉಲ್ಲೇಖಿಸಿ ಅಮೆರಿಕ ಫೆಡ್ ನೀತಿ ವಿರುದ್ಧ Trump ವಾಗ್ದಾಳಿ..!

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವಾಡಿಗರ ದೇಶ' ಎಂದು ಏಕೆ ಕರೆಯಲಾಗುತ್ತಿತ್ತು?