ಅಮಿತ್ ಶಾ 
ದೇಶ

ಕಾಶ್ಮೀರದ ಯಾವುದೇ ಯುವಕರು ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ: ಸಿಯಾಂಗ್ ಅಣೆಕಟ್ಟು ಯೋಜನೆಯ ಆತಂಕ ಪರಿಹರಿಸಲು ಮಾತುಕತೆ- ಶಾ ಭರವಸೆ!

ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲದ ಅಶಾಂತಿ ಮತ್ತು ಹಿಂಸಾಚಾರದ ನಂತರ, ಕಾಶ್ಮೀರದ ಸ್ಥಳೀಯ ಯುವಕರು ಯಾರೂ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಶಾ ಹೇಳಿದರು.

ಸಿಯಾಂಗ್: ಉದ್ದೇಶಿತ 11,200 ಮೆಗಾವ್ಯಾಟ್ ಸಾಮರ್ಥ್ಯದ ಸಿಯಾಂಗ್ ಅಣೆಕಟ್ಟು ಯೋಜನೆ ಕುರಿತು ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆಯ ನಿವಾಸಿಗಳಲ್ಲಿರುವ ಆತಂಕಗಳನ್ನು ಮಾತುಕತೆ ಮೂಲಕ ಪರಿಹರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಭರವಸೆ ನೀಡಿದರು. ಯೋಜನೆಯನ್ನು ಮುಂದುವರಿಸುವಾಗ ಈ ಪ್ರದೇಶದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲದ ಅಶಾಂತಿ ಮತ್ತು ಹಿಂಸಾಚಾರದ ನಂತರ, ಕಾಶ್ಮೀರದ ಸ್ಥಳೀಯ ಯುವಕರು ಯಾರೂ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಶಾ ಹೇಳಿದರು. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದಲ್ಲದೆ, ತಾರತಮ್ಯ ಮತ್ತು ಪ್ರತ್ಯೇಕತೆಯ ಭಾವನೆಯನ್ನು ಕೊನೆಗೊಳಿಸುವ ಮೂಲಕ ಈ ಸಕಾರಾತ್ಮಕ ಬದಲಾವಣೆಯನ್ನು ತರಲಾಗಿದೆ ಎಂದು ಅವರು ತಿಳಿಸಿದರು.

ಇಟಾನಗರದ ಸಮೀಪವಿರುವ ಬಂಡರ್‌ದೇವಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ (PTC) ಕಾನೂನು ಜಾರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ಸಿಯಾಂಗ್ ಪ್ರದೇಶದ ಜನರ ಭಾವನೆಗಳು ಮತ್ತು ಆತಂಕಗಳ ಬಗ್ಗೆ ತಮಗೆ ಅರಿವಿದೆ ಎಂದರು.

ಅವರ ಕಳವಳಗಳನ್ನು ನೇರವಾಗಿ ಆಲಿಸಿ ಪರಿಹರಿಸಲು ತಾವು ಅರುಣಾಚಲ ಪ್ರದೇಶಕ್ಕೆ ಬಂದಿರುವುದಾಗಿ ಅವರು ತಿಳಿಸಿದರು. ಸಿಯಾಂಗ್‌ನ ನನ್ನ ಸಹೋದರ ಸಹೋದರಿಯರಿಗೆ ಭರವಸೆ ನೀಡಲು ಬಯಸುತ್ತೇನೆ; ನಾವು ಸಕಾರಾತ್ಮಕ ಮಾತುಕತೆ ಮೂಲಕ ಮುಂದಿನ ದಾರಿಯನ್ನು ಕಂಡುಕೊಳ್ಳುತ್ತೇವೆ, ಆದ್ದರಿಂದ ನೀವು ಈ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದರು.

ಜನರ ಆತಂಕಗಳ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದು, ಅವರು ಎತ್ತಿರುವ ಅನೇಕ ವಿಷಯಗಳು ಮಹತ್ವದ್ದಾಗಿವೆ ಎಂದು ಒಪ್ಪಿಕೊಂಡರು.

ಅರುಣಾಚಲ ಪ್ರದೇಶದ ಅಭಿವೃದ್ಧಿ ಸಾಮರ್ಥ್ಯ, ದೇಶದ ಇಂಧನ ಭದ್ರತೆ ಹಾಗೂ ರಾಜ್ಯದ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಬಗ್ಗೆ ಮಾತನಾಡಿದ ಶಾ, ಈ ಅಂಶಗಳನ್ನು ಸ್ಥಳೀಯ ಸಮುದಾಯಗಳ ಆಕಾಂಕ್ಷೆಗಳೊಂದಿಗೆ ಸಮತೋಲನಗೊಳಿಸುವ ಅಗತ್ಯದ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ತಿಳಿಸಿದರು."ಸ್ಥಳೀಯ ಸಂಸ್ಕೃತಿಯ ಬಗ್ಗೆ ನಿಮಗಿರುವಷ್ಟೇ ಗೌರವ ನನಗೂ ಮತ್ತು ಸರ್ಕಾರಕ್ಕೂ ಇದೆ. ಈ ಸ್ಥಳದ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಧರ್ಮಕ್ಕೆ ಯಾವುದೇ ಧಕ್ಕೆ ಬರದಂತೆ ನಾವು ಮುಂದುವರಿಯುತ್ತೇವೆ ಎಂದು ಅವರು ಹೇಳಿದರು.

2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. 35 ವರ್ಷಗಳಿಗೂ ಹೆಚ್ಚು ಕಾಲದ ಹಿಂಸಾಚಾರದ ನಂತರ, ಈಗ ಕಾಶ್ಮೀರ ಕಣಿವೆಯ ಒಬ್ಬ ಸ್ಥಳೀಯ ಯುವಕ ಕೂಡ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಅವರು ತಿಳಿಸಿದರು. ಕಾಶ್ಮೀರ ಕಣಿವೆಯ 90ರ ದಶಕದ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ಅವರು, 370ನೇ ವಿಧಿಯ ರದ್ದತಿಯ ನಂತರ ಪರಿಸ್ಥಿತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದು ಹೇಳಿದರು.

ಕಾಶ್ಮೀರ ಕಣಿವೆಯಲ್ಲಿನ ಬದಲಾವಣೆಯು ಕೇವಲ ಭಯೋತ್ಪಾದಕರ ನಿರ್ಮೂಲನೆಯಿಂದ ಮಾತ್ರವಲ್ಲದೆ, ಅಲ್ಲಿನ ಯುವಜನರಲ್ಲಿ ಇದ್ದ ತಾರತಮ್ಯ ಮತ್ತು ಪ್ರತ್ಯೇಕತೆಯ ವಾತಾವರಣವನ್ನು ಕೊನೆಗೊಳಿಸುವುದರ ಮೂಲಕವೂ ಸಾಧ್ಯವಾಗಿದೆ

2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಶಾಶ್ವತ ಶಾಂತಿಯ ಭರವಸೆಯನ್ನು ಇನ್ನಷ್ಟು ಬಲಪಡಿಸಿವೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖಾತೆ ನಿರ್ಬಂಧ ವಿವಾದ: ಭಾರತ Modi ಖಾಸಗಿ ಆಸ್ತಿಯಲ್ಲ; BJP ಕೈಗೊಂಬೆಯಾಗದೆ ಧೈರ್ಯ ತೋರಿಸಿ- META ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ, ಖಾತೆ ಮರುಸ್ಥಾಪನೆಗೆ ಆಗ್ರಹ..!

ಪನ್ನುನ್ ಪ್ರಕರಣ: ಎನ್‌ಎಸ್‌ಎ ದೋವಲ್ ಅವರಿಗೆ ಅಮೆರಿಕ ನ್ಯಾಯಾಲಯದಿಂದ ಸಮನ್ಸ್ ಜಾರಿ

'ಹಿಂದೆ ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದವರು ಕಡತ ಸಿದ್ದಪಡಿಸೋದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ': ಪ್ರಧಾನಿ ಮೋದಿ; Video

ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ಗಳ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ಗಳಿಂದ ಶುಭಮನ್ ಗಿಲ್ ಶತಕ ಮಿಸ್!

'INDIA ನೋಡಿ ಕಲಿಯಿರಿ': ಭಾರತದ ಆರ್ಥಿಕ ಪ್ರಗತಿ ಉಲ್ಲೇಖಿಸಿ ಅಮೆರಿಕ ಫೆಡ್ ನೀತಿ ವಿರುದ್ಧ Trump ವಾಗ್ದಾಳಿ..!