ಓವೈಸಿಗೆ 'ಗಾರ್ಡ್ ಆಫ್ ಆನರ್ 
ದೇಶ

ಸುಪ್ರೀಂ ಕೋರ್ಟ್ ಜಡ್ಜ್ ಎಂದು ಭಾವಿಸಿ ಓವೈಸಿಗೆ 'ಗಾರ್ಡ್ ಆಫ್ ಆನರ್': UP ಪೊಲೀಸರ ವಿರುದ್ಧ ತನಿಖೆಗೆ ಆದೇಶ!

ನ್ಯಾಯಾಧೀಶರಿಗೆ 'ಗಾರ್ಡ್ ಆಫ್ ಆನರ್' ನೀಡಲು ಪೊಲೀಸ್ ತಂಡವು ಇಂದು ಬೆಳಗ್ಗೆಯೇ ಸರ್ಕ್ಯೂಟ್ ಹೌಸ್‌ ಬಳಿ ಕಾಯುತ್ತಿತ್ತು. ಈ ವೇಳೆ ಸರ್ಕ್ಯೂಟ್ ಹೌಸ್‌ ಗೆ ಆಗಮಿಸಿದ ಓವೈಸಿಯನ್ನೇ ಜಡ್ಜ್ ಎಂದು ತಪ್ಪಾಗಿ ಭಾವಿಸಿ 'ಗಾರ್ಡ್ ಆಫ್ ಆನರ್' ನೀಡಿದ್ದಾರೆ.

ಸಹಾರನ್‌ಪುರ: ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಶನಿವಾರ ಸರ್ಕ್ಯೂಟ್ ಹೌಸ್‌ಗೆ ಭೇಟಿ ನೀಡಬೇಕಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಎಂದು ತಪ್ಪಾಗಿ ಭಾವಿಸಿದ ಪೊಲೀಸರು, ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರಿಗೆ 'ಗಾರ್ಡ್ ಆಫ್ ಆನರ್' (ಗೌರವ ವಂದನೆ) ನೀಡಿದ್ದಾರೆ. ಈ ಘಟನೆಯ ಕುರಿತು ಇದೀಗ ತನಿಖೆಗೆ ಆದೇಶಿಸಲಾಗಿದೆ.

ನ್ಯಾಯಾಧೀಶರಿಗೆ 'ಗಾರ್ಡ್ ಆಫ್ ಆನರ್' ನೀಡಲು ಪೊಲೀಸ್ ತಂಡವು ಇಂದು ಬೆಳಗ್ಗೆಯೇ ಸರ್ಕ್ಯೂಟ್ ಹೌಸ್‌ ಬಳಿ ಕಾಯುತ್ತಿತ್ತು. ಈ ವೇಳೆ ಸರ್ಕ್ಯೂಟ್ ಹೌಸ್‌ ಗೆ ಆಗಮಿಸಿದ ಓವೈಸಿಯನ್ನೇ ಜಡ್ಜ್ ಎಂದು ತಪ್ಪಾಗಿ ಭಾವಿಸಿ 'ಗಾರ್ಡ್ ಆಫ್ ಆನರ್' ನೀಡಿದ್ದಾರೆ. ಆದರೆ ನ್ಯಾಯಾಧೀಶರು ಇನ್ನೂ ಅಲ್ಲಿಗೆ ಬಂದಿರಲಿಲ್ಲ.

ಸ್ಥಳೀಯ ಮೂಲಗಳ ಪ್ರಕಾರ, ಓವೈಸಿ ಅವರ ಸರ್ಕ್ಯೂಟ್ ಹೌಸ್ ಭೇಟಿಯು ಅವರ ಪೂರ್ವನಿಗದಿತ ಕಾರ್ಯಕ್ರಮದ ಭಾಗವಾಗಿರಲಿಲ್ಲ. ಅವರು ಅನಿರೀಕ್ಷಿತವಾಗಿ ಅಲ್ಲಿಗೆ ಆಗಮಿಸಿದ್ದರು.

ಓವೈಸಿ ಅವರು ಆಜಾದ್ ಸಮಾಜ ಪಾರ್ಟಿ(ಕಾನ್ಶಿರಾಂ) ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರೊಂದಿಗೆ ಜಿಲ್ಲೆಯಲ್ಲಿದ್ದರು. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲು ಈ ಇಬ್ಬರು ನಾಯಕರು ಸಹಾರನ್‌ಪುರಕ್ಕೆ ಬಂದಿದ್ದರು.

ಪೊಲೀಸ್ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದಾಗ, ಓವೈಸಿ ಅವರು ಎದ್ದು ನಿಂತು ಅದನ್ನು ಸ್ವೀಕರಿಸಿದರು.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು, ಈ ಇಬ್ಬರು ನಾಯಕರು ಇತ್ತೀಚೆಗಷ್ಟೇ 'ಸಾಮಾಜಿಕ್ ಪರಿವರ್ತನ್ ಮೋರ್ಚಾ' (SPM) ಎಂಬ ಜಂಟಿ ರಾಜಕೀಯ ಮೈತ್ರಿಕೂಟವನ್ನು ರಚಿಸುವುದಾಗಿ ಘೋಷಿಸಿದ್ದರು.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಹಾರನ್‌ಪುರ ಪೊಲೀಸರು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು(SSP) ಈ ವಿಷಯದ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಗ್ರಾಮೀಣ) ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

"ತನಿಖೆಯ ನಂತರ ಲಭ್ಯವಾಗುವ ಸಾಕ್ಷ್ಯಗಳ ಆಧಾರದ ಮೇಲೆ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ಹೇಳಿದ್ದಾರೆ.

ಗೌರವ ವಂದನೆ ಸಲ್ಲಿಸಬೇಕಾದ ವ್ಯಕ್ತಿಯನ್ನು ಗುರುತಿಸುವಲ್ಲಿ ಆಗಿರುವ ಈ ಲೋಪವು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಅಧಿಕೃತ ನಿವಾಸ 'ಗಂಗಾ' ನವೀಕರಣಕ್ಕೆ ₹100 ಕೋಟಿ ಖರ್ಚು!: ವಿಜಯೇಂದ್ರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಇಟಲಿ: ಸೋನಿಯಾ ಗಾಂಧಿ ಬಾಲ್ಯದ ಮನೆ ಖರೀದಿಸಿದ ಸಿಖ್ ಉದ್ಯಮಿ; ಗುರುದ್ವಾರವಾಗಿ ಪರಿವರ್ತನೆ ಆಗಲಿದೆಯೇ ಕಾಂಗ್ರೆಸ್ ನಾಯಕಿಯ ಮನೆ?

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಅಸಮಾಧಾನ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?