ಬಾಂಗ್ಲಾದೇಶದಲ್ಲಿ ಹಿಂಸಾಚಾರ  online desk
ದೇಶ

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಬಿಎನ್‌ಪಿ ನಾಯಕರ ಹತ್ಯೆಗೆ ಪ್ರತೀಕಾರ, ಅವಾಮಿ ಲೀಗ್ ನಾಯಕರ ಮನೆಗಳ ಮೇಲೆ ದಾಳಿ

ಶುಕ್ರವಾರ ಮಧ್ಯಾಹ್ನ ಕಾಲಿಯಾ ಉಪಜಿಲ್ಲೆಯ ಬೆಂದಾರ್ ಚಾರ್ ಗ್ರಾಮದಲ್ಲಿ ಈ ದಾಳಿಗಳು ಆರಂಭವಾಗಿ ರಾತ್ರಿಯವರೆಗೂ ಮುಂದುವರಿದವು. ಚಟುವಟಿಕೆಗಳನ್ನು ನಿಷೇಧಿಸಲಾಗಿರುವ ಅವಾಮಿ ಲೀಗ್‌ಗೆ ಸಂಬಂಧಿಸಿದ ಆಸ್ತಿಪಾಸ್ತಿಗಳೇ ಈ ದಾಳಿಯ ಗುರಿಯಾಗಿದ್ದವು.

'ಢಾಕಾ ಟ್ರಿಬ್ಯೂನ್' ವರದಿಯ ಪ್ರಕಾರ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಯೊಂದಿಗೆ ಗುರುತಿಸಿಕೊಂಡವರು ಎನ್ನಲಾದ ವ್ಯಕ್ತಿಗಳು, ನರೈಲ್ ಜಿಲ್ಲೆಯಲ್ಲಿ ಅವಾಮಿ ಲೀಗ್‌ನ ನಾಯಕರು ಮತ್ತು ಕಾರ್ಯಕರ್ತರಿಗೆ ಸೇರಿದ ಡಜನ್‌ಗಟ್ಟಲೆ ಮನೆಗಳು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ.

ಈ ವಾರದ ಆರಂಭದಲ್ಲಿ ಬಿಎನ್‌ಪಿ ಬೆಂಬಲಿತ ಇಬ್ಬರು ನಾಯಕರ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

ಶುಕ್ರವಾರ ಮಧ್ಯಾಹ್ನ ಕಾಲಿಯಾ ಉಪಜಿಲ್ಲೆಯ ಬೆಂದಾರ್ ಚಾರ್ ಗ್ರಾಮದಲ್ಲಿ ಈ ದಾಳಿಗಳು ಆರಂಭವಾಗಿ ರಾತ್ರಿಯವರೆಗೂ ಮುಂದುವರಿದವು. ಚಟುವಟಿಕೆಗಳನ್ನು ನಿಷೇಧಿಸಲಾಗಿರುವ ಅವಾಮಿ ಲೀಗ್‌ಗೆ ಸಂಬಂಧಿಸಿದ ಆಸ್ತಿಪಾಸ್ತಿಗಳೇ ಈ ದಾಳಿಯ ಗುರಿಯಾಗಿದ್ದವು.

ದಾಳಿಗೆ ಗುರಿಯಾದ ಆಸ್ತಿಗಳಲ್ಲಿ ನರೈಲ್-1 ಕ್ಷೇತ್ರದ ಮಾಜಿ ಸಂಸದ ಬಿ.ಎಂ. ಕಬೀರುಲ್ ಹಕ್ ಮುಕ್ತಿ ಅವರ ಪೂರ್ವಜರ ಮನೆ ಮತ್ತು ಕಾಲಿಯಾ ಪುರಸಭೆಯ ಮಾಜಿ ಮೇಯರ್ ಫಕೀರ್ ಮುಶ್ಫಿಕುರ್ ರೆಹಮಾನ್ ಲಿಟನ್ ಅವರ ನಿವಾಸ ಸೇರಿವೆ.

'ಢಾಕಾ ಟ್ರಿಬ್ಯೂನ್' ವರದಿಯ ಪ್ರಕಾರ, ಸುಮಾರು 20 ರಿಂದ 25 ವಸತಿ ಆವರಣಗಳಲ್ಲಿನ 50ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಬಾರ್ಡಿಯಾ ಬಜಾರ್‌ನಲ್ಲಿದ್ದ ಹಲವು ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ.

ಆದರೆ, ಸ್ಥಳೀಯ ಆಡಳಿತ ಅಧಿಕಾರಿಗಳ ಅಂದಾಜಿನ ಪ್ರಕಾರ, 15 ರಿಂದ 20 ಮನೆಗಳನ್ನು ಧ್ವಂಸಗೊಳಿಸಲಾಗಿದ್ದು, ಕೆಲವು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ.

ಬುಧವಾರ ಬಿಎನ್‌ಪಿ ಬೆಂಬಲಿತ ಇಬ್ಬರು ನಾಯಕರಾದ ಶಾಹೀನ್ ಮೊಲ್ಲಾ (ಕಾಲಿಯಾ ಪುರಸಭೆ ಕೃಷಕ್ ದಳದ ಪ್ರಧಾನ ಕಾರ್ಯದರ್ಶಿ) ಮತ್ತು ಸೋಹೆಲ್ ಮೊಲ್ಲಾ (ಜಾತಿಯತಬಾದಿ ಸಮಾಜಿಕ್ ಸಾಂಸ್ಕೃತಿಕ ಸಂಸ್ಥೆಯ - JASAS ಕಾಲಿಯಾ ಉಪಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ) ಹತ್ಯೆಯಾದ ನಂತರ ಈ ಹಿಂಸಾಚಾರ ನಡೆದಿದೆ.

ಬೆಂದಾರ್ ಚಾರ್‌ನ 'ಬೋಟ್ ತೋಲಾ' ಛೇದಕದಲ್ಲಿ (intersection) ಇವರು ತಮ್ಮ ಮೋಟಾರ್‌ಸೈಕಲ್ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮೊದಲು ಕಾಲಿಯಾ ಉಪಜಿಲ್ಲಾ ಆರೋಗ್ಯ ಸಂಕೀರ್ಣಕ್ಕೆ ಕರೆದೊಯ್ಯಲಾಯಿತು, ನಂತರ ಖುಲ್ನಾದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಶುಕ್ರವಾರ ನಡೆದ ದಾಳಿಗಳಲ್ಲಿ ಬಿಎನ್‌ಪಿಯೊಂದಿಗೆ ಗುರುತಿಸಿಕೊಂಡವರು ಭಾಗಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಸ್ಥಳೀಯ ಬಿಎನ್‌ಪಿ ನಾಯಕರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿ ನಾನಲ್ಲ: ವಿಜಯೇಂದ್ರಗೆ ಜನಾರ್ದನ ರೆಡ್ಡಿ ಪರೋಕ್ಷ ಟಾಂಗ್!

ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಚೆನ್ನೈ: ದೇಶದಲ್ಲೇ ಅತ್ಯಂತ ಕಲುಷಿತ ನಗರವಾದ ಗುಮ್ಮಿಡಿಪೂಂಡಿ; ವಾಯು ಗುಣಮಟ್ಟ ಸೂಚ್ಯಂಕ 342ಕ್ಕೆ ಏರಿಕೆ..!

'ಒಂದೇ ಕೋಟೆ, ಇಬ್ಬರು ಆಡಳಿತಗಾರರು': Purana Qilaದಲ್ಲಿ ಸಹಬಾಳ್ವೆಯ ಸಂದೇಶ ಸಾರಿದ ಪಾಕ್ ಸಚಿವ ಮುಸಾದಿಕ್ ಮಲಿಕ್..!

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ