₹1.25 ಕೋಟಿ ಮೌಲ್ಯದ ಜಮೀನಿಗಾಗಿ ವೈದ್ಯನ ಬರ್ಬರ ಹತ್ಯೆ; ಶವ ಚೀಲದಲ್ಲಿ ತುಂಬಿ ಡ್ಯಾಮ್ಗೆ ಎಸೆದ ಪಾಪಿ!
ಡಾ. ಸಂಜಯ್ ತೆಲಿ ಅವರು ನಾಪತ್ತೆಯಾದ ಐದು ದಿನಗಳ ನಂತರ, ಜಿಲ್ಲೆಯಲ್ಲಿರುವ ಬಹುಲಾ ಅಣೆಕಟ್ಟಿನಿಂದ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.
ಜಲಗಾಂವ್: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ವೈದ್ಯರೊಬ್ಬರು ನವೆಂಬರ್ 18 ರಿಂದ ನಾಪತ್ತೆಯಾಗಿದ್ದರು. ಇದೀಗ ಸೋಮವಾರ ಅಣೆಕಟ್ಟೊಂದರ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತಪಟ್ಟ ವೈದ್ಯರನ್ನು ಡಾ. ಸಂಜಯ್ ತೆಲಿ ಎಂದು ಗುರುತಿಸಲಾಗಿದ್ದು, ಜಲಗಾಂವ್‌ನ ಪಚೋರಾ ತಾಲೂಕಿನ ಗೊರಡ್‌ಖೇಡಾ ಗ್ರಾಮದಲ್ಲಿ ನಡೆದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಡಾ. ಸಂಜಯ್ ತೆಲಿ ಅವರು ನಾಪತ್ತೆಯಾದ ಐದು ದಿನಗಳ ನಂತರ, ಜಿಲ್ಲೆಯಲ್ಲಿರುವ ಬಹುಲಾ ಅಣೆಕಟ್ಟಿನಿಂದ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಯು 1.25 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ವ್ಯವಹಾರಕ್ಕೆ ಸಂಬಂಧಿಸಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ 1.90 ಲಕ್ಷ ರೂಪಾಯಿ ಕಮಿಷನ್ ಹಣ ನೀಡುವುದಾಗಿ ನಂಬಿಸಿ, ಭೂ ದಲ್ಲಾಳಿಯೊಬ್ಬ ಡಾ. ತೆಲಿ ಅವರನ್ನು ಗೊರಡ್‌ಖೇಡಾ ಗ್ರಾಮಕ್ಕೆ ಕರೆಸಿಕೊಂಡಿದ್ದನು.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಮನವಿ; ವಿಚಾರಣೆ ಮುಂದೂಡಿಕೆ
ಆದರೆ, ಅಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ರಾಹುಲ್ ಧರ್ಮರಾಜ್ ಪಾಟೀಲ್ ಎಂಬ ದಲ್ಲಾಳಿಯ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪಾಟೀಲ್, ಡಾ. ತೆಲಿ ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂದೀಪ್ ಗಾವಿತ್ ಅವರು ತಿಳಿಸಿದ ಪ್ರಕಾರ, ಆರೋಪಿಯು ನಂತರ ಸಾಕ್ಷ್ಯವನ್ನು ನಾಶಪಡಿಸಲು, ತನ್ನ ಉದ್ಯೋಗಿ ಸಂಜಯ್ ಭಿಲ್‌ನ ಸಹಾಯದಿಂದ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ಅದನ್ನು ಬಹುಲಾ ಅಣೆಕಟ್ಟಿನಲ್ಲಿ ಎಸೆದಿದ್ದಾನೆ.
ತೆಲಿ ನಾಪತ್ತೆಯಾದ ನಂತರ, ಪೊಲೀಸರು ಆತ ಎಲ್ಲಿದ್ದಾನೆ ಎಂಬುದರ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದರು.
ಸಂತ್ರಸ್ತನ ಮೊಬೈಲ್ ಫೋನ್‌ನ ಕೊನೆಯ ಲೊಕೇಶನ್, ಕರೆ ವಿವರಗಳು(call detail records) ಮತ್ತು ಆ ಪ್ರದೇಶದಲ್ಲಿ ಪತ್ತೆಯಾದ ವಾಹನದಿಂದ ದೊರೆತ ಸುಳಿವುಗಳ ಆಧಾರದ ಮೇಲೆ, ಸ್ಥಳೀಯ ಅಪರಾಧ ವಿಭಾಗ (Crime Branch) ಮತ್ತು ಪಚೋರಾ ಪೊಲೀಸರು, ಆರೋಪಿಗಳಾದ ರಾಹುಲ್ ಪಾಟೀಲ್ ಹಾಗೂ ಸಂಜಯ್ ಭಿಲ್ ಅವರನ್ನು ಬಂಧಿಸಿದ್ದಾರೆ.
ಭೂ ವ್ಯವಹಾರದ ಭಾಗವಾಗಿ ಆರೋಪಿಗೆ ಈಗಾಗಲೇ 80 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು ಎಂದು ಮೃತ ವೈದ್ಯನ ಕುಟುಂಬ ಸದಸ್ಯರು ಹೇಳಿದ್ದಾರೆ. ಅಲ್ಲದೆ ಈ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.