ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಯಮುನಾ ನದಿಯ ಶೇ 60ರಷ್ಟು ಭಾಗ ಸ್ವಚ್ಛವಾಗಿದೆ, ಕುಡಿಯಲು ನೀರು ಯೋಗ್ಯವಾಗಿದೆ: ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ನದಿಯ ಒಂದು ತುದಿಯಿಂದ ಕೆಲಸ ಆರಂಭವಾಗಿ ಇನ್ನೊಂದು ತುದಿಯತ್ತ ಸಾಗುತ್ತಿರುವುದರಿಂದ, ಈವರೆಗೆ ಶೇ 60ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ, ಇಡೀ ನದಿ ಮಾರ್ಗವಲ್ಲ ಎಂದು ಅವರು ಹೇಳಿದರು.

ಮಂಜಿಂದರ್ ಸಿಂಗ್ ಸಿರ್ಸಾ
Ramyashree GN
Updated On : 23 Nov 2026, 1:21 pm

ನವದೆಹಲಿ: ಯಮುನಾ ನದಿಯ ಶೇ 60ರಷ್ಟು ಭಾಗವನ್ನು ಸ್ವಚ್ಛಗೊಳಿಸಲಾಗಿದ್ದು, ಅದರ ನೀರು ಈಗ ಕುಡಿಯಲು ಯೋಗ್ಯವಾಗಿದೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಸೋಮವಾರ ತಿಳಿಸಿದ್ದಾರೆ. ಅಲ್ಲದೆ, 2029 ಅಥವಾ 2030ರ ವೇಳೆಗೆ ಇಡೀ ನದಿಯನ್ನು ಸ್ವಚ್ಛಗೊಳಿಸಲಾಗುವುದು ಎಂದು ಅವರು ಹೇಳಿದರು.

ಇಲ್ಲಿ ನಡೆದ 'ಉಬರ್' ಸಂಸ್ಥೆಯ "ಒನ್ ಲೆಸ್ ಕಾರ್" ("One Less Car") ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನದಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕೇಂದ್ರ ಸರ್ಕಾರದ ಕಳೆದ ಎರಡು ವರ್ಷಗಳ ಬೆಂಬಲವೇ ಕಾರಣ ಎಂದು ತಿಳಿಸಿದರು.

ನದಿಯ ಒಂದು ತುದಿಯಿಂದ ಕೆಲಸ ಆರಂಭವಾಗಿ ಇನ್ನೊಂದು ತುದಿಯತ್ತ ಸಾಗುತ್ತಿರುವುದರಿಂದ, ಈವರೆಗೆ ಶೇ 60ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ, ಇಡೀ ನದಿ ಮಾರ್ಗವಲ್ಲ ಎಂದು ಅವರು ಹೇಳಿದರು.

Advertisement

Advertisement

'ಯಮುನಾ ನದಿಯ ಶೇ 60ರಷ್ಟು ಭಾಗ ಸಂಪೂರ್ಣವಾಗಿ ಸ್ವಚ್ಛವಾಗಿದೆ... 'ಸ್ವಚ್ಛ' ಎಂದರೆ ಎಷ್ಟು ಸ್ವಚ್ಛವೆಂದರೆ, ನೀವು ಆ ನೀರನ್ನು ಕುಡಿಯಲೂಬಹುದು'. ಅಲ್ಲದೆ, ಜನರು ನದಿಯ ಬಳಿಗೆ ಹೋಗಿ ಸ್ವತಃ ಅದನ್ನು ಕಣ್ಣಾರೆ ನೋಡುವಂತೆ ಅವರು ಕೋರಿದರು.

Also Read

ಮಲಿನಗೊಂಡ ಯಮುನಾ ನದಿ ನೀರು ಕುಡಿದ ಬಿಜೆಪಿ ನಾಯಕ; ಹೇಳಿದ್ದೇನು?

ನಗರದ ಒಳಚರಂಡಿ ನೀರು ಕಾಲುವೆಗಳ ಮೂಲಕ ಯಮುನಾ ನದಿಯನ್ನು ಸೇರುತ್ತದೆ ಎಂದು ಹೇಳಿದ ಸಿರ್ಸಾ, ಆ ಒಳಚರಂಡಿ ನೀರನ್ನು ಸಂಸ್ಕರಿಸದ ಹೊರತು ನದಿಯನ್ನು ಸ್ವಚ್ಛವಾಗಿಡುವುದು ಅಸಾ. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರವು ಒಳಚರಂಡಿ ಸಂಸ್ಕರಣಾ ಘಟಕಗಳನ್ನು (STPs) ಬಳಸುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement