ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ಪಂಜಾಬ್-ಪಂಜಾಬಿಗಳಿಗೆ ಮೊದಲ ಆದ್ಯತೆ': ಶಿರೋಮಣಿ ಅಕಾಲಿದಳ ಮತ್ತೆ NDA ಸೇರ್ಪಡೆ ಬಗ್ಗೆ ಪ್ರಧಾನಿ ಮೋದಿ!

ಈ ಎರಡೂ ಪಕ್ಷಗಳ ನಡುವಿನ ಒಪ್ಪಂದವನ್ನು ಅಧಿಕೃತಗೊಳಿಸಲು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ನಿತಿನ್ ನಬಿನ್ ಮತ್ತು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಮಂಗಳವಾರ ನವದೆಹಲಿಯಲ್ಲಿ ಸಭೆ ನಡೆಸಿದರು.

ಪ್ರಧಾನಿ ಮೋದಿ
Nagaraja AB
Updated On : 24 Nov 2026, 4:15 pm

ನವದೆಹಲಿ: ಶಿರೋಮಣಿ ಅಕಾಲಿ ದಳವು (SAD) ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಮರಳಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಎನ್ ಡಿಎ ಮೈತ್ರಿಯು ಪಂಜಾಬ್‌ನ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2027ರ ಪಂಜಾಬ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿದೆ. ಗುರುನಾನಕ್ ದೇವ್ ಜಿ ಅವರ 'ಪ್ರಕಾಶ್ ಪುರಬ್' (ಜನ್ಮದಿನ) ಸಂದರ್ಭದಲ್ಲಿ ಈ ಮೈತ್ರಿ ಮತ್ತೆ ಏರ್ಪಟ್ಟಿದೆ ಎಂದು ಹೇಳಿದ ಪ್ರಧಾನಿ ಮೋದಿ, ಬಿಜೆಪಿ ಮತ್ತು ಅಕಾಲಿ ದಳದ ನಡುವಿನ ಸಂಬಂಧವನ್ನು "ಸ್ವಾಭಾವಿಕ ಮೈತ್ರಿ" ಎಂದು ಬಣ್ಣಿಸಿದ್ದಾರೆ.

ಈ ಎರಡೂ ಪಕ್ಷಗಳ ನಡುವಿನ ಒಪ್ಪಂದವನ್ನು ಅಧಿಕೃತಗೊಳಿಸಲು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ನಿತಿನ್ ನಬಿನ್ ಮತ್ತು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಮಂಗಳವಾರ ನವದೆಹಲಿಯಲ್ಲಿ ಸಭೆ ನಡೆಸಿದರು.

Advertisement

Advertisement

ಈ ಮೈತ್ರಿಯು ಪಂಜಾಬ್ ಮತ್ತು ಅಲ್ಲಿನ ಜನರ ಕಲ್ಯಾಣದ ಮೇಲೆ ಗಮನ ಕೇಂದ್ರೀಕರಿಸಲಿದೆ. ಪಂಜಾಬ್ ಮತ್ತು ಪಂಜಾಬಿಗಳ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು, ಶಿರೋಮಣಿ ಅಕಾಲಿ ದಳ ಗುರುನಾನಕ್ ದೇವ್ ಜಿ ಅವರ ಪ್ರಕಾಶ್ ಪುರಬ್ ದಿನದಂದೇ ಮರಳುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಮ್ಮದು ಒಂದು ಸ್ವಾಭಾವಿಕ ಮೈತ್ರಿಯಾಗಿದ್ದು, ಇದು ಪಂಜಾಬ್‌ಗೆ ಜನಪರ ಆಡಳಿತವನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ ಮತ್ತು ರಾಜ್ಯವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಮೈತ್ರಿಯನ್ನು ಪೋಷಿಸಿ ಬೆಳೆಸಿದ ಶ್ರೇಯಸ್ಸು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಸೇರುತ್ತದೆ. ಅವರಿಂದ ಪೋಷಿಸಲ್ಪಟ್ಟ ಮೈತ್ರಿಯು ಕಾಲದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ನಿಂತಿದೆ. ನಮ್ಮ ಈ ಮೈತ್ರಿಯು ಪಂಜಾಬ್‌ನ ಜನರ ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.

Also Read

ಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿಷಯದಲ್ಲಿ ಅಕಾಲಿ ದಳವು ಎನ್‌ಡಿಎ (NDA) ಮೈತ್ರಿಕೂಟದಿಂದ ಹೊರಬಂದ ನಂತರ, ಎಸ್‌ಎಡಿ (SAD) ಮತ್ತು ಬಿಜೆಪಿ ತಮ್ಮ ದಶಕಗಳಷ್ಟು ಹಳೆಯ ಮೈತ್ರಿಯನ್ನು ಸೆಪ್ಟೆಂಬರ್ 2020ರಲ್ಲಿ ಕೊನೆಗೊಳಿಸಿದವು. ನಂತರ ಈ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲಾಯಿತಾದರೂ, 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷಗಳು ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement