ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ನಾವೇನು ಭಿಕ್ಷುಕರಲ್ಲ': ಎಸ್‌ಪಿಯ 26 ಸೀಟುಗಳ ಆಫರ್‌ಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆಕ್ರೋಶ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ತೀವ್ರ ಭಿನ್ನಾಭಿಪ್ರಾಯ ತಲೆದೋರಿದ್ದು, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಎಸ್‌ಪಿಯ 26 ಸೀಟುಗಳ ಆಫರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ನಾವೇನು ಭಿಕ್ಷುಕರಲ್ಲ': ಎಸ್‌ಪಿಯ ಆಫರ್‌ಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆಕ್ರೋಶ! — Online Desk
Hruthin H P
Updated On : 25 Nov 2026, 12:37 pm

ಲಕ್ನೊ (ಉತ್ತರ ಪ್ರದೇಶ): ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನವೇ ಇಂಡಿಯಾ ಮೈತ್ರಿಕೂಟದಲ್ಲಿ ಅಸಮಾಧಾನದ ಹೊಗೆ ಆಡಲಾರಂಭಿಸಿದೆ. ಬರೋಬ್ಬರಿ 180 ಹೆಚ್ಚು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್‌ಗೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಕೇವಲ 26 ಸೀಟುಗಳ ಆಫರ್ ನೀಡುವ ಮೂಲಕ ಶಾಕ್ ಕೊಟ್ಟಿದೆ. ಎಸ್‌ಪಿಯ ಈ ಏಕಪಕ್ಷೀಯ ನಡೆಯಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ನಾಯಕರು, 'ನಾವೇನು ಭಿಕ್ಷುಕರಲ್ಲ' ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಒಂದೆಡೆ ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಸೀಟು ಹಂಚಿಕೆ ಎಂದು ಎಸ್‌ಪಿ ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸೀಟು ಹಂಚಿಕೆ ಮಾತುಕತೆ ನಡುವೆಯೇ ಎಸ್‌ಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವುದು 'ಯುಪಿ ಕೆ ದೋ ಲಡ್ಕೆ' (ರಾಹುಲ್-ಅಖಿಲೇಶ್) ದೋಸ್ತಿಯಲ್ಲಿ ಬಿರುಕು ಮೂಡಿಸಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಆ ಕುರಿತ ವರದಿ ಇಲ್ಲಿದೆ:

ನಾವೇನು ಭಿಕ್ಷುಕರಲ್ಲ!

ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸೀಟುಹಂಚಿಕೆ ಮಾತುಕತೆಗೂ ಮುನ್ನ ಎಸ್‌ಪಿ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಕಾಂಗ್ರೆಸ್‌ಗೆ 26 ಗೆಲ್ಲುವ ಸೀಟುಗಳ ಪಟ್ಟಿ ನೀಡಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಹರಾನ್‌ಪುರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, "ನಾವೇನು ಭಿಕ್ಷುಕರಲ್ಲ, ನಾವು ನಿಮ್ಮ ಬಳಿ 26 ಸೀಟುಗಳನ್ನು ಕೇಳಿಯೂ ಇರಲಿಲ್ಲ. ಮೈತ್ರಿಕೂಟದಲ್ಲಿ ಸೀಟುಗಳನ್ನು ಬೇಡುವುದಿಲ್ಲ, ಬದಲಾಗಿ ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ನಿರ್ಧರಿಸಲಾಗುತ್ತದೆ. ನಾವು ಎಸ್‌ಪಿಯ ಸಹೋದ್ಯೋಗಿಗಳಾಗಬಹುದೇ ಹೊರತು ಹಿಂಬಾಲಕರಲ್ಲ" ಎಂದು ಕಿಡಿಕಾರಿದ್ದಾರೆ.

Advertisement

Advertisement

Also Read

'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್; ಕಾಂಗ್ರೆಸ್‌ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!

ಅದರಲ್ಲೂ, ನವೆಂಬರ್ 24 ರ ರಾತ್ರಿ ಸಮಾಜವಾದಿ ಪಕ್ಷವು 5 ಕ್ಷೇತ್ರಗಳಿಗೆ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇಮ್ರಾನ್ ಮಸೂದ್ ಅವರು ಕಾಂಗ್ರೆಸ್‌ಗಾಗಿ ಪಟ್ಟು ಹಿಡಿದಿದ್ದ ಸಹರಾನ್‌ಪುರ ಜಿಲ್ಲೆಯ ಬೆಹತ್ ಮತ್ತು ಸಹರಾನ್‌ಪುರ ಕ್ಷೇತ್ರಗಳಿಗೂ ಎಸ್‌ಪಿ ಅಭ್ಯರ್ಥಿಗಳನ್ನು (ಉಮರ್ ಅಲಿ ಖಾನ್ ಮತ್ತು ಆಶು ಮಲಿಕ್) ಘೋಷಿಸಿರುವುದು ಮಸೂದ್ ಅವರ ಕೋಪವನ್ನು ಮತ್ತಷ್ಟು ಹೆಚ್ಚಿಸಿದ್ದು, ನಮ್ಮ ಹೋರಾಟ ಬಿಜೆಪಿ ವಿರುದ್ಧವೋ ಅಥವಾ ಕಾಂಗ್ರೆಸ್ ವಿರುದ್ಧವೋ ಎಂಬುದನ್ನು ಎಸ್‌ಪಿ ಮೊದಲು ಸ್ಪಷ್ಟಪಡಿಸಬೇಕು" ಎಂದು ಹೇಳಿದ್ದಾರೆ. ಈ ಕುರಿತು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಲೆಕ್ಕಾಚಾರ ಹೇಗಿದೆ?

2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಆರಂಭದಲ್ಲಿ 181 ಸೀಟುಗಳನ್ನು ಕೇಳಿದ್ದು, ನಂತರದ ಮಾತುಕತೆ ವೇಳೆ 130–131 ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಆದರೆ, ಎಸ್‌ಪಿ 2022ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು (ಆಗ ಕಾಂಗ್ರೆಸ್ ಕೇವಲ 2 ಸೀಟು ಗೆದ್ದಿತ್ತು) ಮುಂದಿಟ್ಟುಕೊಂಡು ಕಡಿಮೆ ಸೀಟುಗಳ ಆಫರ್ ನೀಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement