ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಘೋರ ದುರಂತ: ಉದಯನಿಧಿ ಸ್ಟಾಲಿನ್ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ದುರ್ಮರಣ!

ಮೃತರನ್ನು ವಾಣಿಯಚತಿರಂನ ಅಣ್ಣಾ ನಗರದ ವಿ. ವೀರೇಂದರ್(22) ಮತ್ತು ಕರಾಣಿ ಗ್ರಾಮದ ಎಂ. ವೇಲನ್ (30) ಎಂದು ಗುರುತಿಸಲಾಗಿದೆ.

ವಿ. ವೀರೇಂದರ್(22) - ಎಂ. ವೇಲನ್ (30)
Lingaraj Badiger
Updated On : 27 Nov 2026, 1:05 pm

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ವೆಂಗಲ್ ಸಮೀಪದ ವಾಣಿಯಚತಿರಂನಲ್ಲಿ, ಶುಕ್ರವಾರ ಬೆಳಗ್ಗೆ ಘೋರ ದುರಂತವೊಂದು ಸಂಭವಿಸಿದ್ದು, ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಜನ್ಮದಿನದ ಅಂಗವಾಗಿ ಬ್ಯಾನರ್ ಕಟ್ಟುತ್ತಿದ್ದಾಗ, ವಿದ್ಯುತ್ ತಗುಲಿ ಇಬ್ಬರು ಡಿಎಂಕೆ ಕಾರ್ಯಕರ್ತರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ವಾಣಿಯಚತಿರಂನ ಅಣ್ಣಾ ನಗರದ ವಿ. ವೀರೇಂದರ್(22) ಮತ್ತು ಕರಾಣಿ ಗ್ರಾಮದ ಎಂ. ವೇಲನ್ (30) ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ವಾಣಿಯಚತಿರಂನ ಆಲ್ಬರ್ಟ್ (22) ಅವರು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Advertisement

Also Read

ಬೆಂಗಳೂರಿನಲ್ಲಿ ಶೂಟೌಟ್: ಲಿಖಿತ್ ಗೌಡಗೆ ಗುಂಡಿಕ್ಕಿ ಹತ್ಯೆ, ಇತರ ಇಬ್ಬರಿಗೆ ಗಾಯ!

ವೆಂಗಲ್ ಪೊಲೀಸ್ ಮೂಲಗಳ ಪ್ರಕಾರ, ಉದಯನಿಧಿ ಸ್ಟಾಲಿನ್ ಅವರ ಜನ್ಮದಿನದ ಅಂಗವಾಗಿ ಖಾಸಗಿ ಸಭಾಂಗಣವೊಂದರಲ್ಲಿ ಆಯೋಜಿಸಲಾಗಿದ್ದ ಕಲ್ಯಾಣ ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಈ ಮೂವರು ಭಾಗವಹಿಸಿದ್ದರು.

ವಾಣಿಯಚತಿರಂ ಬಳಿ ರಸ್ತೆ ಬದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದಾಗ, ಸಮೀಪದಲ್ಲಿದ್ದ ವಿದ್ಯುತ್ ಕಂಬದ ತಂತಿಯೊಂದು ಅವರಿಗೆ ತಗುಲಿದ ಪರಿಣಾಮ ಈ ದುರಂತ ಸಂಭವಿಸಿದೆ.

ಮೃತಪಟ್ಟವರು ಡಿಎಂಕೆ ಸದಸ್ಯರಾಗಿದ್ದು, ಸ್ಥಳೀಯ ಡಿಎಂಕೆ ಪದಾಧಿಕಾರಿಗಳ ಸಂಬಂಧಿಕರೂ ಆಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೆಂಗಲ್ ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement