ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಟೋಲ್ ಕಳ್ಳಾಟಕ್ಕೆ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 5 ಪಟ್ಟು ಶುಲ್ಕ ವಸೂಲಿ; ಕೇಂದ್ರದ ಹೊಸ ದಂಡಾಸ್ತ್ರ!

ಈ ದಂಡದ ಜತೆಗೆ ಮೂಲ ಟೋಲ್ ಶುಲ್ಕವನ್ನೂ ವಸೂಲಿ ಮಾಡಿ ಒಟ್ಟು ಮೊತ್ತವನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಪಾವತಿಸಲಾಗುತ್ತದೆ ಎಂದು ತಿಳಿಸಿದೆ.

ಸಂಗ್ರಹ ಚಿತ್ರ
Shilpa D
Updated On : 28 Nov 2026, 11:35 am

ನವದೆಹಲಿ: ಬಹುಪಥ ಮುಕ್ತ ಸಂಚಾರ ಟೋಲ್ ವ್ಯವಸ್ಥೆಯಲ್ಲಿ ಶುಲ್ಕ ಪಾವತಿ ತಪ್ಪಿಸಲು ವಾಹನದ ನೋಂದಣಿ ಸಂಖ್ಯೆ ನಂಬರ್​ ಪ್ಲೇಟ್​ ಯನ್ನು ಉದ್ದೇಶಪೂರ್ವಕವಾಗಿ ಮುಚ್ಚುವ ಅಥವಾ ತಿರುಚುವ ವಾಹನ ಸವಾರರಿಗೆ ಬಳಕೆದಾರ ಶುಲ್ಕದ ಐದು ಪಟ್ಟು ದಂಡ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ಈ ದಂಡದ ಜತೆಗೆ ಮೂಲ ಟೋಲ್ ಶುಲ್ಕವನ್ನೂ ವಸೂಲಿ ಮಾಡಿ ಒಟ್ಟು ಮೊತ್ತವನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಪಾವತಿಸಲಾಗುತ್ತದೆ ಎಂದು ತಿಳಿಸಿದೆ.

ವಾಹನದ ಮುಂಭಾಗ ಅಥವಾ ಹಿಂಭಾಗದ ನಂಬರ್ ಪ್ಲೇಟ್ ಮುಚ್ಚುವುದು, ನೋಂದಣಿ ಸಂಖ್ಯೆಯನ್ನು ತಿರುಚುವುದು ಅಥವಾ ಮರೆಮಾಚುವುದು ಹಾಗೂ ಟೋಲ್ ಶುಲ್ಕ ತಪ್ಪಿಸುವ ಉದ್ದೇಶದಿಂದ ಫಾಸ್ಟ್‌ಟ್ಯಾಗ್ ಅಳವಡಿಸದಿರುವುದು ಈ ಕ್ರಮದ ವ್ಯಾಪ್ತಿಗೆ ಬರಲಿದೆ.

Advertisement

Advertisement

ಶುಲ್ಕ ತಪ್ಪಿಸುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಿರುವುದು ದೃಢಪಟ್ಟ ಪ್ರಕರಣಗಳಲ್ಲಿ ಮಾತ್ರ ದಂಡ ವಿಧಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಪತ್ತೆಯಾಗದಿರುವ ಸಂದರ್ಭದಲ್ಲೂ ನಂಬರ್ ಪ್ಲೇಟ್ ಮರೆಮಾಚಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ವಾಹನಗಳನ್ನು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ಗುರುತಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Also Read

ತ್ರಿಶೂರ್‌: ಕಿಲೋಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದ ವಾಹನ ಕಂಡು ದಂಗಾದ ಸುರೇಶ್ ಗೋಪಿ; ಕೂಡಲೇ ಎಲ್ಲಾ ಟೋಲ್ ಗೇಟ್ ತೆಗಿಸಿದ ಕೇಂದ್ರ ಸಚಿವ

ಸದ್ಯ ಗುಜರಾತ್‌, ದೆಹಲಿ, ರಾಜಸ್ಥಾನ, ಹರಿಯಾಣ, ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂಬತ್ತು ಕಡೆಗಳಲ್ಲಿ ಎಂಎಲ್‌ಎಫ್‌ಎಫ್‌ ವ್ಯವಸ್ಥೆ ಇದೆ. ಈ ವ್ಯವಸ್ಥೆಯ ಇರುವ ಟೋಲ್‌ ಪ್ಲಾಜಾಗಳಲ್ಲಿ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ, ವಾಹನದ ನೋಂದಣಿ ಸಂಖ್ಯೆ ಆಧರಿಸಿ ಟೋಲ್‌ ಕಡಿತವಾಗುತ್ತದೆ. ಆದರೆ, ನೋಂದಣಿ ಸಂಖ್ಯೆ ಅಥವಾ ಫಾಸ್ಟ್‌ಟ್ಯಾಗ್‌ ಮರೆಮಾಚಿದರೆ ಮೊತ್ತ ಕಡಿತವಾಗುವುದಿಲ್ಲ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇದನ್ನು ತಡೆಯಲು ಸಚಿವಾಲಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಫಾಸ್ಟ್‌ಟ್ಯಾಗ್‌ ಮತ್ತು ಅದಕ್ಕೆ ಲಿಂಕ್‌ ಮಾಡಲಾದ ವಾಹನದ ನೋಂದಣಿ ಸಂಖ್ಯೆಯು ಹೊಂದಿಕೆಯಾದಾಗ ಎಂಎಲ್‌ಎಫ್‌ಎಫ್‌ ವ್ಯವಸ್ಥೆ ಇರುವಲ್ಲಿ ಟೋಲ್‌ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಒಂದು ವೇಳೆ ಖಾತೆಯಲ್ಲಿ ನಿಗದಿತ ಮೊತ್ತ ಇಲ್ಲದಿದ್ದರೆ, ವಾಹನದ ಚಾಲಕರಿಗೆ ಇ–ನೋಟಿಸ್‌ ಬರುತ್ತದೆ ಹಾಗೂ ಮುಂದಿನ 72 ಗಂಟೆಗಳಲ್ಲಿ ಮರು ಪಾವತಿಗೆ ಅವಕಾಶ ಇರುತ್ತದೆ. ಆದರೆ, ವಾಹನದ ಸಂಖ್ಯೆ ಮರೆಮಾಚಿದ ಪ್ರಕರಣಗಳಲ್ಲಿ ಈ ವ್ಯವಸ್ಥೆ ಕಾರ್ಯನಿರ್ವಹಿಸುವುದೇ ಇಲ್ಲ, ಹಾಗಾಗಿ ಟೋಲ್‌ ವಸೂಲಿ ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement