ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Thirupparankundram ದೀಪ ವಿವಾದಕ್ಕೆ ಇಂದು ತೆರೆ ಸಾಧ್ಯತೆ; ಸಂಜೆ 5ಕ್ಕೆ 'ದೀಪತೂಣ್' ಸ್ತಂಭದ ಬಳಿ ಕಾರ್ತಿಕ ದೀಪ ಬೆಳಗಲು ಸಿದ್ಧತೆ, ದೇಗುಲದ ಸುತ್ತ ಬಿಗಿ ಭದ್ರತೆ..!

ಸರ್ವೋಚ್ಚ ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಇಂದು (ನವೆಂಬರ್ 28, ಶನಿವಾರ) ಸಂಜೆ 5:00 ಗಂಟೆಗೆ ದೀಪತೂಣ್ ಬಳಿ ಕಾರ್ತಿಕ ದೀಪವನ್ನು ಬೆಳಗಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ದೀಪ ಬೆಳಗಿಸಲು ಸಿದ್ಧತೆ ನಡೆಸುತ್ತಿರುವುದು.
Manjula VN
Updated On : 28 Nov 2026, 2:47 pm

ಮಧುರೈ: ತಮಿಳುನಾಡಿನ ಪ್ರಸಿದ್ಧ ಯಾತ್ರಾಸ್ಥಳ ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ 'ದೀಪತೂಣ್' (Deepathoon) ಕಲ್ಲಿನ ಸ್ತಂಭದ ಬಳಿ ಕಾರ್ತಿಕ ದೀಪ ಬೆಳಗಿಸುವ ವಿವಾದಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದೊಂದಿಗೆ ನಿರ್ಣಾಯಕ ತಿರುವು ಸಿಕ್ಕಿದೆ.

ಸರ್ವೋಚ್ಚ ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಇಂದು (ನವೆಂಬರ್ 28, ಶನಿವಾರ) ಸಂಜೆ 5:00 ಗಂಟೆಗೆ ದೀಪತೂಣ್ ಬಳಿ ಕಾರ್ತಿಕ ದೀಪವನ್ನು ಬೆಳಗಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ದೀಪ ಬೆಳಗಿಸುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವೈಧ್ಯನಾಥನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

Advertisement

Advertisement

ಈ ಕುರಿತು TNIE ಜೊತೆ ದೂರವಾಣಿ ಮೂಲಕ ಮಾತನಾಡಿದ ನ್ಯಾಯಮೂರ್ತಿ ವೈಧ್ಯನಾಥನ್ ಅವರು, ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಸುಮಾರು 20 ಮಂದಿ ಪಾಲ್ಗೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ತನ್ನ ಆದೇಶದಂತೆ ದೀಪ ಬೆಳಗಿಸುವ ಪ್ರಕ್ರಿಯೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈಧ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರನ್ನು ನೇಮಿಸಿದೆ. ವೈಧ್ಯನಾಥನ್ ಅವರು ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು.

Also Read

ದೀಪತೂಣ್‌ನಲ್ಲಿ ದೀಪ ಹಚ್ಚದ ವಿಜಯ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ; ನಾಳೆಯೇ ದೀಪ ಬೆಳಗಲು ಆದೇಶ; ಬೆಟ್ಟದ ಭದ್ರತೆ CRPF ಹೆಗಲಿಗೆ!

ಬೆಟ್ಟದ ಮೇಲೆ ಭದ್ರತೆ ಬಿಗಿ

ಈ ನಡುವೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶನಿವಾರ ತಿರುಪರಂಕುಂದ್ರಂ ಬೆಟ್ಟದ ಭದ್ರತಾ ವ್ಯವಸ್ಥೆಯನ್ನು ಸಿಆರ್‌ಪಿಎಫ್ ಪಡೆ ವಹಿಸಿಕೊಂಡಿದೆ.

ಬೆಟ್ಟದ ಮೇಲಿರುವ ದೀಪತ್ತೂಣ್ ಮತ್ತು ಉಚ್ಚಿಪಿಳ್ಳೈಯಾರ್ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಟ್ಟದ ತುದಿಗೆ ತೆರಳಿದ್ದ ಭಕ್ತರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಸ್ಥಳದಿಂದ ತೆರಳುವಂತೆ ಸಿಆರ್‌ಪಿಎಫ್ ಸಿಬ್ಬಂದಿ ಸೂಚಿಸಿದ್ದಾರೆ.

ಇನ್ನೊಂದೆಡೆ, ಕಾರ್ತಿಕ ದೀಪ ಬೆಳಗಿಸಲು ಅಗತ್ಯವಿರುವ ಮೂರು ಮಣ್ಣಿನ ದೀಪಗಳು, ತುಪ್ಪ ಮತ್ತು ಬಟ್ಟೆಯನ್ನು ದೇವಸ್ಥಾನದ ಅಧಿಕಾರಿಗಳು ಬಿಗಿ ಭದ್ರತೆಯ ನಡುವೆ ಬೆಟ್ಟದ ಮೇಲಿರುವ ದೀಪತೂಣ್ ಸ್ತಂಭದ ಬಳಿ ಕೊಂಡೊಯ್ದಿದ್ದಾರೆ.

ನವೆಂಬರ್ 24ರಂದು ಬೆಟ್ಟದ ಮೇಲಿನ ಸಾಂಪ್ರದಾಯಿಕ ಸ್ಥಳವಾದ ದೀಪ ಮಂಟಪದಲ್ಲಿ ಕಾರ್ತಿಕ ದೀಪ ಬೆಳಗಿಸಲಾಗಿತ್ತು. ಆದರೆ, ನ್ಯಾಯಪೀಠ ನೀಡಿದ್ದ ನಿರ್ದೇಶನದಂತೆ ದೀಪತ್ತೂಣ್‌ನಲ್ಲಿ ದೀಪ ಬೆಳಗಿಸಿರಲಿಲ್ಲ. ಇದಾದ ಮೂರು ದಿನಗಳ ಬಳಿಕ ಸುಪ್ರೀಂ ಕೋರ್ಟ್ ಈ ಕುರಿತು ನಿರ್ದೇಶನ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement