'ಮಾದಕ ವಸ್ತು ಮತ್ತು ವ್ಯಸನ ದೇಶದ ಯುವಜನತೆಗೆ ದೊಡ್ಡ ಸವಾಲು': 140ನೇ Mann Ki Baat ಸಂಚಿಕೆಯಲ್ಲಿ ಪ್ರಧಾನಿ ಮೋದಿ
140ನೇ 'ಮನ್ ಕಿ ಬಾತ್' ಸಂಚಿಕೆಯಲ್ಲಿ ಇಂದು ಭಾನುವಾರ ಮಾತನಾಡಿದ ಪ್ರಧಾನಿ, ದೇಶಾದ್ಯಂತ 'ನಶಾ ಮುಕ್ತ ಯುವ ಅಭಿಯಾನ' ನಡೆಯುತ್ತಿದೆ ಎಂದು ಹೇಳಿದರು.
ನವದೆಹಲಿ: ಮಾದಕ ವಸ್ತುಗಳು ಮತ್ತು ವ್ಯಸನವು ದೇಶದ ಯುವಜನತೆಯ ಕನಸುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ವಿರುದ್ಧದ ಹೋರಾಟದಲ್ಲಿ ಸಮಾಜದ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
140ನೇ 'ಮನ್ ಕಿ ಬಾತ್' ಸಂಚಿಕೆಯಲ್ಲಿ ಇಂದು ಭಾನುವಾರ ಮಾತನಾಡಿದ ಪ್ರಧಾನಿ, ದೇಶಾದ್ಯಂತ 'ನಶಾ ಮುಕ್ತ ಯುವ ಅಭಿಯಾನ' ನಡೆಯುತ್ತಿದೆ ಎಂದು ಹೇಳಿದರು.
ಯುವಜನರು ಮಾದಕ ವಸ್ತುಗಳ ಬಳಕೆ ಮತ್ತು ವ್ಯಸನದ ಅಪಾಯಗಳ ಬಗ್ಗೆ ಅರಿತುಕೊಳ್ಳಬೇಕು. ಜಾಗೃತರಾಗಿದ್ದು, ಈ ವಿನಾಶಕಾರಿ ಚಟದಿಂದ ದೂರವಿರಬೇಕು ಎಂದು ಅವರು ಕರೆ ನೀಡಿದರು.
ಸಾಮಾಜಿಕ ಅಭಿಯಾನಗಳನ್ನು ಯಶಸ್ವಿಗೊಳಿಸುವಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆಯ ಶಕ್ತಿಯನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ವೈಯಕ್ತಿಕವಾಗಿ ಕೈಗೊಂಡಾಗ ಕಷ್ಟಕರವೆನಿಸುವ ಕಾರ್ಯಗಳನ್ನು ಸಾಮೂಹಿಕವಾಗಿ ಕೈಗೊಂಡರೆ ಹೆಚ್ಚಿನ ಉತ್ಸಾಹ ಮತ್ತು ಶಕ್ತಿ ದೊರೆಯುತ್ತದೆ ಎಂದು ಹೇಳಿದರು.
ಕೆಲವು ಕಾರ್ಯಗಳನ್ನು ಒಬ್ಬೊಬ್ಬರಾಗಿ ಕೈಗೊಂಡಾಗ ಕೆಲವೊಮ್ಮೆ ನಿರಾಶೆ, ಆಯಾಸ ಉಂಟಾಗಬಹುದು. ದೂರದ ಹಾದಿ ಸಾಗಲು ಹಿಂಜರಿಕೆಯೂ ಮೂಡಬಹುದು. ಆದರೆ, ಅದೇ ಕಾರ್ಯ ಸಾಮೂಹಿಕ ಅಭಿಯಾನದ ರೂಪ ಪಡೆದಾಗ, ಲಕ್ಷಾಂತರ ಜನರು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದಾಗ, ವೈಯಕ್ತಿಕವಾಗಿ ಮಾಡಲು ಸಾಧ್ಯವಾಗದವರಲ್ಲೂ ಹೊಸ ಉತ್ಸಾಹ ಮತ್ತು ಶಕ್ತಿ ತುಂಬುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.