ಫ್ಲೈ ದುಬೈ ವಿಮಾನ ಅವಘಡ 
ದೇಶ

‘ದಿನವಿಡೀ ಪ್ರಾರ್ಥನೆ, ಮೂಲಭೂತವಾದಿ, ಮಹಿಳೆಯರೊಂದಿಗೆ ಹ್ಯಾಂಡ್ ಶೇಕ್ ಕೂಡ ಮಾಡ್ತಿರ್ಲಿಲ್ಲ': ಫ್ಲೈದುಬೈ ಸಹೋದ್ಯೋಗಿ ಆಘಾತಕಾರಿ ಮಾಹಿತಿ!

ಅವನಿಗೆ ಇರಾನ್‌ನೊಂದಿಗೆ ಯಾವುದೇ ಸಂಪರ್ಕವಿತ್ತೇ ಎಂಬುದನ್ನು ಕೆಲವೇ ದಿನಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಬಹುದು. ಆದರೆ ದಾಳಿಯ ಹಿಂದಿನ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ವಿಮಾನ ಸೌದಿ ಅರೇಬಿಯಾದಲ್ಲಿ ಇಳಿದ ಬಳಿಕ ಸಹ..

ದುಬೈ: ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ದಾಳಿ ನಡೆಸಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಫ್ಲೈದುಬೈ ವಿಮಾನದ ಸಹ ಪೈಲಟ್‌ನ ವರ್ತನೆ ಕುರಿತು ಆತನ ಸಹೋದ್ಯೋಗಿ ನೀಡಿರುವ ಆಘಾತಕಾರಿ ಹೇಳಿಕೆಗಳು ವ್ಯಾಪಕ ವೈರಲ್ ಆಗುತ್ತಿದೆ.

ಚಾನೆಲ್ 16ರ ವಿದೇಶಿ ವರದಿಗಾರ ಯೋಸೆಫ್ ಜೊತೆ ಮಾತನಾಡಿರುವ ದಾಳಿಕೋರ ಫ್ಲೈದುಬೈ ಪೈಲಟ್ ಸಹೋದ್ಯೋಗಿ, ಆತ ‘ಧಾರ್ಮಿಕ ಉಗ್ರಗಾಮಿ’ ರೀತಿಯ ವರ್ತನೆ ತೋರುತ್ತಿದ್ದ.

ಎಫ್‌ಜೆ1073 ವಿಮಾನದ ಸಹ ಪೈಲಟ್ ಅಸಹಜವಾಗಿ ವರ್ತಿಸುತ್ತಿದ್ದ. ಆತ ತೀವ್ರ ಧಾರ್ಮಿಕ ನಡವಳಿಕೆ ಪ್ರದರ್ಶಿಸುತ್ತಿದ್ದ. ಆತ ದಿನವಿಡೀ ಅತಿಯಾಗಿ ಪ್ರಾರ್ಥಿಸುತ್ತಿದ್ದರು ಹಾಗೂ ಮಹಿಳೆಯರೊಂದಿಗೆ ಕೈಕುಲುಕಲು ನಿರಾಕರಿಸುತ್ತಿದ್ದ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಆರೋಪಿತ ಸಹ ಪೈಲಟ್ ಎಂಟು ತಿಂಗಳ ಹಿಂದಷ್ಟೇ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಯಾಗಿದ್ದ. ಆತ ಓಮನ್‌ ದೇಶದ ಪ್ರಜೆಯಾಗಿದ್ದ ಎಂದು ತಿಳಿದುಬಂದಿದೆ.

ಭಯೋತ್ಪಾದಕ ದಾಳಿ ಎಂದ ಇಸ್ರೇಲ್

ಇನ್ನು ಈ ಘಟನೆಗೆ ಇಸ್ರೇಲ್ ಈಗಾಗಲೇ ಭಯೋತ್ಪಾದಕ ದಾಳಿ ಎಂದು ಕರೆದಿದೆ. ಆದರೆ ಯುಎಇ ಸರ್ಕಾರ ಹಾಗೂ ಫ್ಲೈದುಬೈ ಸಂಸ್ಥೆ ತಮ್ಮ ಅಧಿಕೃತ ಹೇಳಿಕೆಗಳಲ್ಲಿ ಇದನ್ನು ಭಯೋತ್ಪಾದಕ ದಾಳಿ ಎಂದು ಈವರೆಗೆ ಖಚಿತಪಡಿಸಿಲ್ಲ. ದಾಳಿಯ ಹಿಂದೆ ಭಯೋತ್ಪಾದನೆಯ ಉದ್ದೇಶವಿತ್ತೇ ಎಂಬುದನ್ನು ತನಿಖೆ ನಡೆಸುವುದಾಗಿ ಯುಎಇ ತಿಳಿಸಿದೆ.

ಈ ನಡುವೆ, ಘಟನೆಯ ಕುರಿತು ಸ್ವಂತ ತನಿಖೆ ಪೂರ್ಣಗೊಳ್ಳುವವರೆಗೆ ಇಸ್ರೇಲ್‌ಗೆ ಹಾಗೂ ಇಸ್ರೇಲ್‌ನಿಂದ ತನ್ನ ಎಲ್ಲ ವಿಮಾನ ಸೇವೆಗಳನ್ನು ಫ್ಲೈದುಬೈ ರದ್ದುಗೊಳಿಸಿದೆ.

‘ಇಸ್ಲಾಮಿಸ್ಟ್‌ ತೀವ್ರಗಾಮಿ ಬೋಧನೆಗೆ ಒಳಗಾಗಿದ್ದ’

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಓಮನ್ ಮೂಲದ ಸಹ ಪೈಲಟ್ ‘ಇಸ್ಲಾಮಿಸ್ಟ್ ತೀವ್ರಗಾಮಿ ಬೋಧನೆಗೆ ಒಳಗಾಗಿದ್ದ’ ಎಂದು ಹೇಳಿದ್ದಾರೆ.

ಅವನಿಗೆ ಇರಾನ್‌ನೊಂದಿಗೆ ಯಾವುದೇ ಸಂಪರ್ಕವಿತ್ತೇ ಎಂಬುದನ್ನು ಕೆಲವೇ ದಿನಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಬಹುದು. ಆದರೆ ದಾಳಿಯ ಹಿಂದಿನ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ವಿಮಾನ ಸೌದಿ ಅರೇಬಿಯಾದಲ್ಲಿ ಇಳಿದ ಬಳಿಕ ಸಹ ಪೈಲಟ್‌ನನ್ನು ಬಂಧಿಸಲಾಗಿದೆ ಎಂದೂ ನೆತನ್ಯಾಹು ಹೇಳಿದ್ದಾರೆ.

ಭಾರತೀಯ ಪೈಲಟ್ ಬಗ್ಗೆ ವ್ಯಾಪಕ ಮೆಚ್ಚುಗೆ

ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಪೈಲಟ್ ವಿರುದ್ಧ ಹೋರಾಡಿ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್‌ಪಿಟ್ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.

ಇದೇ ವೇಳೆ, ಮಚ್ಚರ್ ಅವರ ಈ ಸಾಹಸವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

“ಅತ್ಯಂತ ಗಂಭೀರ ಅಪಾಯದ ನಡುವೆಯೂ, ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಅಪಾರ ಧೈರ್ಯ ಮತ್ತು ಇತರರ ಜೀವಗಳನ್ನು ರಕ್ಷಿಸುವ ಅಚಲ ಸಂಕಲ್ಪ ತೋರಿಸಿದರು. ಅವರ ಸಾಹಸ ನೂರಾರು ಜೀವಗಳನ್ನು ಉಳಿಸಲು ಹಾಗೂ ಭಾರೀ ದುರಂತವನ್ನು ತಪ್ಪಿಸಲು ನೆರವಾಯಿತು,” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ನೆತನ್ಯಾಹು ಕೂಡ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆದಿದ್ದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೆ ಸಹ ಪೈಲಟ್‌ನ ಉದ್ದೇಶ, ಆತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದನೇ ಎಂಬುದು ಸೇರಿದಂತೆ ಪ್ರಕರಣದ ಪ್ರಮುಖ ಅಂಶಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'FIR ಆಗೋ ತನಕ ಇಲ್ಲಿಂದ ಕದಲೋದಿಲ್ಲ': ಸಿಎಂ ಡಿ ಕೆ ಶಿವಕುಮಾರ್ ಪಟ್ಟು, ಧರಣಿ, CEO ಕಚೇರಿ ಮುಂದೆ ಹೈಡ್ರಾಮಾ; Video

2 ಗಂಟೆ ಕಾದರೂ ಸೆಲ್​​​ನಿಂದ ಹೊರಬರದ ದರ್ಶನ್‌: 'ದಾಸ'ನ ಭೇಟಿಗಾಗಿ ಜೈಲಿಗೆ ಹೋಗಿದ್ದ ರಚಿತಾ ರಾಮ್‌ಗೆ ತೀವ್ರ ನಿರಾಸೆ!

ಉರ್ದು ಕೂಡ ಈ ನೆಲದ ಭಾಷೆ; ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಮಾಡಿದ್ರೆ ತಪ್ಪೇನು?: ಪ್ರಿಯಾಂಕ್ ಖರ್ಗೆ

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ 'ಉರ್ದು ಹಬ್ಬ' ಇಲ್ಲ: ತೀವ್ರ ವಿರೋಧದ ನಂತರ CM ಕಚೇರಿ ಸ್ಪಷ್ಟನೆ

'ಕೊಡಲಿಯಿಂದ ದಾಳಿ, ರಕ್ತಸ್ರಾವದ ನಡುವೆ ಕರ್ತವ್ಯ ನಿರ್ವಹಣೆ': 9/11 ಮಾದರಿ ದುರಂತ ತಪ್ಪಿಸಿದ ಭಾರತೀಯ ಪೈಲಟ್, Netanyahu ಶ್ಲಾಘನೆ