ನಕಲಿ ಆದೇಶ 
ದೇಶ

ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ ಎಂಬುದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ ಸ್ಪಷ್ಟನೆ

ಹಣಕಾಸು ಸಚಿವಾಲಯವು(ಹಣಕಾಸು ಸೇವೆಗಳ ಇಲಾಖೆ) ಹೊರಡಿಸಿದೆ ಎಂದು ಹೇಳಲಾದ ಗೆಜೆಟ್ ಅಧಿಸೂಚನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನವದೆಹಲಿ: ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳಿಗೆ ಪ್ರತಿ ಶನಿವಾರ ರಜೆ ಘೋಷಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರದ ಸತ್ಯಶೋಧನಾ ವಿಭಾಗವಾದ 'ಪಿಐಬಿ ಫ್ಯಾಕ್ಟ್ ಚೆಕ್'(PIB Fact Check) ತಿಳಿಸಿದೆ.

"ಹಣಕಾಸು ಸಚಿವಾಲಯವು(ಹಣಕಾಸು ಸೇವೆಗಳ ಇಲಾಖೆ) ಹೊರಡಿಸಿದೆ ಎಂದು ಹೇಳಲಾದ ಗೆಜೆಟ್ ಅಧಿಸೂಚನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ, ಎಸ್‌ಬಿಐ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಪ್ರತಿ ಶನಿವಾರ ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಿದೆ ಎಂದು ಹೇಳಲಾಗಿದೆ" ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಅಲ್ಲದೆ, "ಹರಿದಾಡುತ್ತಿರುವ ಈ ದಾಖಲೆಯು ನಕಲಿಯಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಪ್ರತಿ ಶನಿವಾರ ರಜಾದಿನವೆಂದು ಘೋಷಿಸುವ ಯಾವುದೇ ಅಧಿಸೂಚನೆಯನ್ನು ಹಣಕಾಸು ಸಚಿವಾಲಯ ಹೊರಡಿಸಿಲ್ಲ" ಎಂದು ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 28 ರಿಂದ 30 ರವರೆಗೆ ನಿಗದಿಯಾಗಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಬ್ಯಾಂಕ್ ಸಂಘಟನೆಗಳು ಮುಂದೂಡಿದ ಈ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡಿದೆ.

'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್' (UFBU)ನ ಪ್ರಮುಖ ಬೇಡಿಕೆಗಳಲ್ಲಿ ಪ್ರತಿ ಶನಿವಾರ ರಜೆ ನೀಡಬೇಕು ಎಂಬ ಬೇಡಿಕೆಯೂ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಯುಎಸ್ ಕಾಂಗ್ರೆಸ್ ನಲ್ಲಿ Graham Bill ಅಂಗೀಕಾರ: ಅನಿಶ್ಚಿತ ಸ್ಥಿತಿಯಲ್ಲಿ ಅಮೆರಿಕ-ಭಾರತ ವ್ಯಾಪಾರ ಸಂಬಂಧ

'SIR ದೊಡ್ಡ ಪಿತೂರಿ; ಅರ್ಹ ಮತದಾರರ ಹೆಸರು ಅಳಿಸಲು ಪೂರ್ವಮುದ್ರಿತ Form-7 ಪೂರೈಕೆ': ಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ; Video

ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಿಲ್ಲ: ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ..!

ವಿಧಾನಸೌಧದ ಮೆಟ್ಟಿಲ ಉರ್ದು ಉತ್ಸವ: ಭುಗಿಲೆದ್ದ ವಿರೋಧ: ಸಚಿವ ಯುಟಿ ಖಾದರ್ ಸ್ಪಷ್ಟನೆ ಹೀಗಿದೆ...

ರಿಯಲ್ ಹೀರೋ, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ 'ಇಸ್ರೇಲ್ ಸರ್ಕಾರದಿಂದ ಸೆಲ್ಯೂಟ್'