ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದೆ.
ಜೇಸನ್ ಸಂಜಯ್ ಅವರು, ಸಂದೀಪ್ ಕಿಶನ್ ಅಭಿನಯದ ಸಿಗ್ಮಾ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಮಗನ ಚೊಚ್ಚಲ ಸಿನಿಮಾಗೆ ಸಿಎಂ ವಿಜಯ್ ಅವರು ವಿಶೇಷ ರೀತಿಯಲ್ಲಿ ಬೆಂಬಲ ನೀಡಿದ್ದಾರೆ.
ಸಿನಿಮಾ ಬಿಡುಗಡೆ ದಿನದಂದೇ ಮಧುರಾಂತಕಂನಲ್ಲಿ ನಡೆದ ರೋಡ್ ಶೋ ವೇಳೆ ನಟ-ರಾಜಕಾರಣಿ ವಿಜಯ್ ಅವರು, ಅಭಿಮಾನಿಯೊಬ್ಬರು ನೀಡಿದ ಮಗ ಜೇಸನ್ ಸಂಜಯ್ ಅವರ ‘ಸಿಗ್ಮಾ’ ಚಿತ್ರದ ಫೋಟೋ ಫ್ರೇಮ್ ಅನ್ನು ಎತ್ತಿಹಿಡಿದು ಬೆಂಬಲ ಸೂಚಿಸಿದ್ದಾರೆ. ಈ ಭಾವನಾತ್ಮಕ ಕ್ಷಣದ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಪಕ್ಷದ ಕಾರ್ಯಕರ್ತರೊಬ್ಬರು ವಿಜಯ್ ಅವರಿಗೆ ತಮ್ಮ ಮಗ ಜೇಸನ್ ಸಂಜಯ್ ಅವರ ಸಿನಿಮಾದ ಫೋಟೋ ಫ್ರೇಮ್ ನೀಡುತ್ತಿರುವುದನ್ನು ಕಾಣಬಹುದು. ವಿಜಯ್ ಅದನ್ನು ತೆಗೆದುಕೊಂಡು ಹೆಮ್ಮೆಯಿಂದ ಎತ್ತಿ ಜನಸಮೂಹಕ್ಕೆ ತೋರಿಸಿದರು.
ಇನ್ನು 'ಸಿಗ್ಮಾ' ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಲು ಜೇಸನ್ ಅವರ ತಾಯಿ ಸಂಗೀತಾ ಸೊರ್ನಲಿಂಗಂ ಮತ್ತು ಸಹೋದರಿ ದಿವ್ಯಾ ಸಾಶಾ ಅವರು ಚೆನ್ನೈನ ಕಮಲಾ ಸಿನೆಮಾಸ್‌ಗೆ ಆಗಮಿಸುತ್ತಿರುವ ವಿಡಿಯೋಗಳು ಸಹ ವೈರಲ್ ಆಗಿವೆ. ಸಂಗೀತಾ ಅವರು ನಗುಮುಖದಿಂದಲೇ ಚಿತ್ರಮಂದಿರದೊಳಗೆ ಪ್ರವೇಶಿಸುತ್ತಿರುವ ದೃಶ್ಯ ಸೆರೆಯಾಗಿದೆ.