ಇಂಡಿಯನ್ ಬಸ್ಟರ್ಡ್ ಪಕ್ಷಿಗಳ ಬಿಡುಗಡೆ 
ದೇಶ

ಅಳಿವಿನಂಚಿನ ‘ಗೋಡಾವಣ’ಕ್ಕೆ ಮರುಜೀವ: ಜೈಸಲ್ಮೇರ್‌ನಲ್ಲಿ 2 Great Indian Bustards ಪಕ್ಷಿಗಳ ಬಿಡುಗಡೆ-Video

ಗ್ರೇಟ್ ಇಂಡಿಯನ್ ಬಸ್ಟರ್ಡ್ ಭಾರತದಲ್ಲೇ ಅತ್ಯಂತ ಅಪಾಯದಲ್ಲಿರುವ ಪಕ್ಷಿ ಪ್ರಭೇದಗಳಲ್ಲಿ ಒಂದಾಗಿದೆ. ಆವಾಸಸ್ಥಾನದ ನಾಶ, ಮಾನವ ಚಟುವಟಿಕೆಗಳು ಹಾಗೂ ವಿದ್ಯುತ್ ಪ್ರಸರಣ ಮಾರ್ಗಗಳಂತಹ ಹಲವು ಕಾರಣಗಳಿಂದ ಇದರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಜೈಸಲ್ಮೇರ್: ಅಳಿವಿನಂಚಿನಲ್ಲಿರುವ ಭಾರತದ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ್ (GIB) ಪಕ್ಷಿಗಳ ಸಂರಕ್ಷಣಾ ಕಾರ್ಯದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ.

ರಾಜಸ್ಥಾನದ ಜೈಸಲ್ಮೇರ್‌ನ ಡೆಸರ್ಟ್ ನ್ಯಾಷನಲ್ ಪಾರ್ಕ್‌ನ ಸ್ಯಾಮ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಎರಡು ಗಂಡು ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ರಾಜಸ್ಥಾನದ ಮರುಭೂಮಿಯಲ್ಲಿ ಈ ಅಪರೂಪದ ಪಕ್ಷಿ ಪ್ರಭೇದವನ್ನು ಮತ್ತೆ ಸ್ಥಾಪಿಸುವ ಉದ್ದೇಶದಿಂದ ವಿಜ್ಞಾನಿಗಳು, ಸಂಶೋಧಕರು ಹಾಗೂ ನೆಲಮಟ್ಟದ ಸಿಬ್ಬಂದಿ ಸುಮಾರು ಒಂದು ದಶಕದಿಂದ ನಡೆಸಿಕೊಂಡು ಬಂದ ಸತತ ಪ್ರಯತ್ನಕ್ಕೆ ಈ ಬೆಳವಣಿಗೆ ಮಹತ್ವದ ಯಶಸ್ಸು ನೀಡಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಭಾರತದಲ್ಲೇ ಅತ್ಯಂತ ಅಪಾಯದಲ್ಲಿರುವ ಪಕ್ಷಿ ಪ್ರಭೇದಗಳಲ್ಲಿ ಒಂದಾಗಿದೆ. ಆವಾಸಸ್ಥಾನದ ನಾಶ, ಮಾನವ ಚಟುವಟಿಕೆಗಳು ಹಾಗೂ ವಿದ್ಯುತ್ ಪ್ರಸರಣ ಮಾರ್ಗಗಳಂತಹ ಹಲವು ಕಾರಣಗಳಿಂದ ಇದರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ರಾಜಸ್ಥಾನದ ಥಾರ್ ಮರುಭೂಮಿ ಈ ಪಕ್ಷಿಯ ಪ್ರಮುಖ ಉಳಿದಿರುವ ಆವಾಸ ಪ್ರದೇಶಗಳಲ್ಲಿ ಒಂದಾಗಿದೆ.

ಮಹತ್ವದ ಮೈಲಿಗಲ್ಲು

ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಸಂಶೋಧನೆ, ಸಂರಕ್ಷಣಾ ಕ್ರಮಗಳು ಹಾಗೂ ದೀರ್ಘಕಾಲದ ಪ್ರಯತ್ನಗಳ ಮೂಲಕ ಗೋಡಾವಣಗಳ ಸಂಖ್ಯೆಯನ್ನು ಹೆಚ್ಚಿಸಿ, ಅವುಗಳನ್ನು ಮತ್ತೆ ಅವುಗಳ ಸ್ವಾಭಾವಿಕ ಆವಾಸಸ್ಥಾನಕ್ಕೆ ಮರಳಿಸುವ ಪ್ರಯತ್ನ ನಡೆಯುತ್ತಿದೆ. ಈ ಮಹತ್ವದ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳು, ಸಂಶೋಧಕರು ಹಾಗೂ ನೆಲಮಟ್ಟದ ಸಿಬ್ಬಂದಿಯ ಸಮರ್ಪಣೆಯನ್ನು ಶ್ಲಾಘಿಸಲಾಗಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಸೇರಿದಂತೆ ಭಾರತದ ವಿವಿಧ ವನ್ಯಜೀವಿ ಪ್ರಭೇದಗಳ ಸಂರಕ್ಷಣೆಗೆ ವೈಜ್ಞಾನಿಕ ಸಮುದಾಯಕ್ಕೆ ನಿರಂತರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಲಾಗಿದೆ.

#IndiaRewildsGIB ಅಭಿಯಾನದಡಿ ನಡೆದಿರುವ ಈ ಕ್ರಮವು ರಾಜಸ್ಥಾನದ ಮರುಭೂಮಿಯಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳ ಪುನಃಸ್ಥಾಪನೆಗೆ ಹೊಸ ಭರವಸೆ ಮೂಡಿಸಿದೆ.

ಗೋಡಾವಣೆ ಹಿನ್ನಲೆ

ಅಂದಹಾಗೆ ಈ ಗೋಡಾವಣೆ (Godawan) ಎನ್ನುವುದು ಮುಖ್ಯವಾಗಿ ಭಾರತದ ರಾಜಸ್ಥಾನದಲ್ಲಿ ಕಂಡುಬರುವ ಅತ್ಯಂತ ಅಪರೂಪದ ಮತ್ತು ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದವಾಗಿದೆ. ಇದನ್ನು ಕನ್ನಡದಲ್ಲಿ ಇಂಡಿಯನ್ ಬಸ್ಟರ್ಡ್ (Great Indian Bustard) ಎಂದು ಕರೆಯಲಾಗುತ್ತದೆ. ಇದು ರಾಜಸ್ಥಾನದ ಅಧಿಕೃತ ರಾಜ್ಯ (State Bird of Rajasthan) ಪಕ್ಷಿಯಾಗಿದೆ.

ಅಂತೆಯೇ ಇವು ಮುಖ್ಯವಾಗಿ ಒಣ ಹುಲ್ಲುಗಾವಲುಗಳು ಮತ್ತು ಅರೆ-ಮರುಭೂಮಿ ಪ್ರದೇಶಗಳಲ್ಲಿ ವಾಸಿಸುತ್ತವೆ. ರಾಜಸ್ಥಾನದ ಜೈಸಲ್ಮೇರ್‌ನ 'ಡೆಸರ್ಟ್ ನ್ಯಾಷನಲ್ ಪಾರ್ಕ್'ನಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು. ಇವು ನೋಡಲು ಉಷ್ಟ್ರಪಕ್ಷಿಯಂತೆ (Ostrich) ಕಾಣುವ, ಎತ್ತರವಾದ ಮತ್ತು ಭಾರವಾದ ದೇಹವನ್ನು ಹೊಂದಿರುವ ಹಾರುವ ಪಕ್ಷಿಗಳಾಗಿವೆ.

ಪ್ರಸ್ತುತ ಜಗತ್ತಿನಲ್ಲಿ ಇವುಗಳ ಸಂಖ್ಯೆ ಕೇವಲ 150ಕ್ಕಿಂತಲೂ ಕಡಿಮೆಯಿದೆ. ಹೀಗಾಗಿ ಐಯುಸಿಎನ್ (IUCN) ಸಂಸ್ಥೆಯು ಇದನ್ನು 'ತೀವ್ರವಾಗಿ ಅಳಿವಿನಂಚಿನಲ್ಲಿರುವ' (Critically Endangered) ಜೀವಿಗಳ ಪಟ್ಟಿಗೆ ಸೇರಿಸಿದೆ. ಇವು ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆಯುವುದು, ವಾಸಸ್ಥಾನಗಳ ನಾಶ ಮತ್ತು ಬೇಟೆಯಾಡುವುದು ಇವುಗಳ ಸಂಖ್ಯೆ ಕ್ಷೀಣಿಸಲು ಮುಖ್ಯ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ