ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ 
ದೇಶ

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!

ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ 27 ವರ್ಷದ ಆತನ ಪತ್ನಿ ಇಲ್ಮಾಳನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು, ಬಳಿಕ ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಎಲ್ಲರನ್ನೂ ನಂಬಿಸಿದ್ದಳು. ಆದರೆ, ಪತಿಯ ಮೊಬೈಲ್‌ನಲ್ಲಿದ್ದ ಚಾಟ್ ನಿಂದ ಆಕೆಯ ಅಕ್ರಮ ಸಂಬಂಧ ಮತ್ತು ಕೊಲೆ ರಹಸ್ಯವನ್ನು ಬಯಲು ಮಾಡಿದೆ.

ಮೀರತ್‌ನ ಲೋಹಿಯಾ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯಿಂದ ಹತ್ಯೆಯಾದ ವ್ಯಕ್ತಿಯನ್ನು 30 ವರ್ಷದ ತಾಲಿಬ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ 27 ವರ್ಷದ ಆತನ ಪತ್ನಿ ಇಲ್ಮಾಳನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಇಲ್ಮಾ ನಾಲ್ಕು ವರ್ಷಗಳ ಹಿಂದೆ ತಾಲಿಬ್ ಅವರನ್ನು ಮದುವೆಯಾಗಿದ್ದು, ದಂಪತಿಗೆ ಮದುವೆಯಾಗಿ ಮೂರು ವರ್ಷದ ಮಗಳಿದ್ದಾಳೆ.

ಕೊಲೆ ನಡೆದ ದಿನ, ತಾಲಿಬ್ ಕೆಲಸದಿಂದ ಹಿಂದಿರುಗಿದ ನಂತರ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡನೆಂದು ಇಲ್ಮಾ ತನ್ನ ಹಿರಿಯ ಸಹೋದರ ಅಕ್ರಮ್‌ಗೆ ಹೇಳಿದ್ದಳು. ಆತ ಹಾಸಿಗೆಯ ಮೇಲೆ ಮಲಗಿದ್ದಾಗಲೇ ಮೃತಪಟ್ಟಿದ್ದಾನೆ ಎಂದು ಇಲ್ಮಾ ಎಲ್ಲರನ್ನು ನಂಬಿಸಿದ್ದರು.

ಅದು ಸಹಜ ಸಾವು ಎಂದು ಭಾವಿಸಿದ ಕುಟುಂಬದವರು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ನಂತರ ಅವರಿಗೆ ಸಾವಿನ ಬಗ್ಗೆ ಅನುಮಾನ ಬಂದಿದೆ. ಅಕ್ಟೋಬರ್ 1 ರಂದು, ತಾಲಿಬ್‌ನ ಸೋದರಸಂಬಂಧಿ ರೈಸ್, ಇಲ್ಮಾಳ ಮನೆಗೆ ಬಂದಿದ್ದಾರೆ. ಈ ವೇಳೆ ಇಲ್ಮಾ ತಾಲಿಬ್‌ನ ಮೊಬೈಲ್ ಅನ್ನು ಬಚ್ಚಿಟ್ಟಿದ್ದಳು. ಆದರೆ ರೈಸ್ ಬಟ್ಟೆಗಳ ಅಡಿಯಲ್ಲಿದ್ದ ಮೊಬೈಲ್ ಅನ್ನು ಪತ್ತೆಹಚ್ಚಿದ್ದಾನೆ. ಆ ಫೋನ್‌ನಲ್ಲಿ ತಾಲಿಬ್ ಮತ್ತು ಅಮನ್ ನಡುವಿನ ಚಾಟ್ ಪತ್ತೆಯಾಗಿದೆ. ಅದರಲ್ಲಿ ತಾಲಿಬ್, ಅಮನ್ ತನ್ನ ಪತ್ನಿಯೊಂದಿಗೆ ಮಾತನಾಡುವುದನ್ನು ವಿರೋಧಿಸಿದ್ದನು. ಈ ಬಗ್ಗೆ ಕುಟುಂಬದವರು ವಿಚಾರಿಸಿದಾಗ, ಇಲ್ಮಾ ತನ್ನ ಪತಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ತಾಲಿಬ್ ತನಗೆ ಹೊಡೆಯುತ್ತಿದ್ದ ಎಂದು ಇಲ್ಮಾ ಹೇಳಿದ್ದು, ಸೆಪ್ಟೆಂಬರ್ 28 ರಂದು ಪತಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ, ಆಕೆ ತನ್ನ ಗೆಳೆಯ ಅಮನ್‌ನನ್ನು ಕರೆದಿದ್ದಾಳೆ. ಅಮನ್ ತನ್ನ ಸ್ನೇಹಿತನೊಂದಿಗೆ ಬಂದು ತಾಲಿಬ್ ಮೇಲೆ ಹಲ್ಲೆ ನಡೆಸಿ 'ಚುನ್ನಿ'ಯಿಂದ (ಶಾಲಿನಿಂದ) ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಅಮನ್ ಇಲ್ಮಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!