ಅಮೇಥಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನವೇ ಸಮಾಜವಾದಿ ಪಕ್ಷದ(SP) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಅವರ ಪಕ್ಷದ ಮೂವರು ಬಂಡಾಯ ಶಾಸಕರು ಅಕ್ಟೋಬರ್ 14 ರಂದು ಅಮೇಥಿಯ ಗೌರಿಗಂಜ್‌ನಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರಲು ನಿರ್ಧರಿಸಿದ್ದಾರೆ.
ಇದು ಅಖಿಲೇಶ್ ಯಾದವ್ ಅವರಿಗೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಿಮಿಸಿದೆ. ಎಸ್ ಪಿ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್ ಮತ್ತು ವಿನೋದ್ ಚತುರ್ವೇದಿ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಗೌರಿಗಂಜ್‌ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮವೊಂದರಲ್ಲಿ ಈ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಈ ಮೂವರು ನಾಯಕರು ಕಳೆದ ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದರು(ಕ್ರಾಸ್-ವೋಟಿಂಗ್).
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇವರ ಬಿಜೆಪಿ ಸೇರ್ಪಡೆಯು ಮಹತ್ವದ ಬೆಳವಣಿಗೆಯಾಗಿ ನೋಡಲಾಗುತ್ತಿದೆ.