ನಾನಾ ಪಾಟೇಕರ್ 
ದೇಶ

ಆತ್ಮಹತ್ಯೆ ಮಾಡಿಕೊಂಡ 500 ರೈತರ ಪತ್ನಿಯರ ನೆರವಿಗೆ ಧಾವಿಸಿದ್ದ ನಟ ನಾನಾ ಪಾಟೇಕರ್; 'ಆರೋಗ್ಯ ಕಾರ್ಡ್‌' ವಿತರಣೆ

ಗುರುವಾರ ನಿಧನರಾದ 75 ವರ್ಷದ ಪಾಟೇಕರ್, 2016ರಲ್ಲಿ ಮರಾಠಿ ನಟ ಮಕರಂದ್ ಅನಸ್ಪೂರೆ ಅವರೊಂದಿಗೆ ಸೇರಿ ಸ್ಥಾಪಿಸಿದ 'ನಾಮ್ ಫೌಂಡೇಶನ್' (NAAM Foundation) ಮೂಲಕ ಅಗತ್ಯವಿದ್ದವರಿಗೆ ನೆರವು ಒದಗಿಸಿದ್ದರು.

ಸಹಜ ಅಭಿಯನದಿಂದಲೇ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ನಾನಾ ಪಾಟೇಕರ್ ಅವರು ನಟನೆಗಷ್ಟೇ ಸೀಮಿತವಾಗಿರಲಿಲ್ಲ. ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೆರವಾಗಿದ್ದ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಅವರಾಗಿದ್ದರು.

ಆತ್ಮಹತ್ಯೆ ಮಾಡಿಕೊಂಡ ಸುಮಾರು 500 ರೈತರ ಪತ್ನಿಯರಿಗೆ 'ಆರೋಗ್ಯ ಕಾರ್ಡ್‌'ಗಳನ್ನು ನೀಡುವ ಉಪಕ್ರಮವನ್ನು ಈ ಹಿರಿಯ ನಟ ರೂಪಿಸಿದ್ದರು; ಈ ಮೂಲಕವೇ ಛತ್ರಪತಿ ಸಂಭಾಜಿನಗರದ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ (MGM) ರೈತರ ಪತ್ನಿಯರು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಯಿತು ಎಂದು ಎಂಜಿಎಂ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸ್ಮರಿಸಿಕೊಂಡರು.

ಗುರುವಾರ ನಿಧನರಾದ 75 ವರ್ಷದ ಪಾಟೇಕರ್ ಅವರು ಮರಾಠವಾಡದ ಬರಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ್ದರು; 2016ರಲ್ಲಿ ಮರಾಠಿ ನಟ ಮಕರಂದ್ ಅನಸ್ಪೂರೆ ಅವರೊಂದಿಗೆ ಸೇರಿ ಸ್ಥಾಪಿಸಿದ 'ನಾಮ್ ಫೌಂಡೇಶನ್' (NAAM Foundation) ಮೂಲಕ ಅಗತ್ಯವಿದ್ದವರಿಗೆ ನೆರವು ಒದಗಿಸಿದ್ದರು.

ಪಾಟೇಕರ್ ಅವರ ಈ ಉಪಕ್ರಮದ ಕುರಿತು ಮಾತನಾಡಿದ ಎಂಜಿಎಂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ ಆದ ಡಾ. ರೇಖಾ ಶೆಲ್ಕೆ, ಆಸ್ಪತ್ರೆಯನ್ನೂ ಒಳಗೊಂಡಿರುವ ಎಂಜಿಎಂ ಆವರಣವು 'ನಾಮ್ ಫೌಂಡೇಶನ್'ನ ಆರಂಭದಿಂದಲೂ ಅದರೊಂದಿಗೆ ನಂಟು ಹೊಂದಿತ್ತು ಎಂದು ತಿಳಿಸಿದರು.

'ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳು ಮತ್ತು ಅವರ ಭವಿಷ್ಯದ ಬಗ್ಗೆ ನಾನಾ ಪಾಟೇಕರ್ ಯಾವಾಗಲೂ ಕಾಳಜಿ ವಹಿಸುತ್ತಿದ್ದರು. 2016-17ರಲ್ಲಿ, ಮರಾಠವಾಡ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 'ಆರೋಗ್ಯ ಕಾರ್ಡ್‌'ಗಳನ್ನು ಒದಗಿಸುವ ಕಲ್ಪನೆಯನ್ನು ಅವರು ಮುಂದಿಟ್ಟರು' ಎಂದು ಶೆಲ್ಕೆ ಹೇಳಿದರು.

'ನಾಮ್ ಫೌಂಡೇಶನ್' (NAAM Foundation) ಮೂಲಕ ಸುಮಾರು 500 ಮಹಿಳೆಯರಿಗೆ ಈ ಕಾರ್ಡ್‌ಗಳನ್ನು ವಿತರಿಸಲಾಯಿತು. ಇವು ಫಲಾನುಭವಿಗಳಿಗೆ ವಿವಿಧ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಸಹಕಾರಿಯಾದವು ಎಂದು ಹೇಳಿದರು.

ನಂತರ MGM ಆಸ್ಪತ್ರೆಯು ಆ ಮಹಿಳೆಯರಿಗೆ ಸುಮಾರು ಐದು ವರ್ಷಗಳ ಕಾಲ ಉಚಿತ ಚಿಕಿತ್ಸೆ ನೀಡಿತು. ಈ ಉಪಕ್ರಮವು ಅಲ್ಲಿಗೆ ಕೊನೆಗೊಳ್ಳಲಿಲ್ಲ. MGM ವಿಶ್ವವಿದ್ಯಾಲಯವು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನೂ ಒದಗಿಸಿತು' ಎಂದು ಶೆಲ್ಕೆ ಹೇಳಿದರು.

ಎಂಜಿಎಂ ವಿಶ್ವವಿದ್ಯಾಲಯದ ಕುಲಪತಿ ಅಂಕುಶರಾವ್ ಕದಮ್ ಅವರೊಂದಿಗೆ ಪಾಟೇಕರ್ ಅವರಿಗಿದ್ದ ಒಡನಾಟವನ್ನೂ ಶೆಲ್ಕೆ ಸ್ಮರಿಸಿದರು; ಅವರನ್ನು ಭೇಟಿಯಾಗಲು ನಟ ಕ್ಯಾಂಪಸ್‌ಗೆ ಬರುತ್ತಿದ್ದರು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು