ಎಸ್ ಜೈಶಂಕರ್ 
ದೇಶ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

'ಜಾಗತಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಈ ಎರಡೂ ಪ್ರಮುಖ ಶಕ್ತಿಗಳನ್ನು ಕಡಿಮೆ ಪ್ರಾತಿನಿಧ್ಯದೊಂದಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಎಸ್. ಜೈಶಂಕರ್ ಹೇಳಿದ್ದಾರೆ.

ಅಡಿಸ್ ಅಬಾಬಾ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಆಫ್ರಿಕಾ ಖಂಡಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಲೇಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 'ಜಾಗತಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಈ ಎರಡೂ ಪ್ರಮುಖ ಶಕ್ತಿಗಳನ್ನು ಕಡಿಮೆ ಪ್ರಾತಿನಿಧ್ಯದೊಂದಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಎಸ್. ಜೈಶಂಕರ್ ಹೇಳಿದ್ದಾರೆ.

ಭಾರತವು 2023ರಲ್ಲಿ ಜಿ20 ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಜಿ20ಯಲ್ಲಿ ಕಾಯಂ ಸದಸ್ಯತ್ವ ದೊರಕಿಸಿಕೊಡಲು ಕೈಗೊಂಡ ಪ್ರಯತ್ನಗಳನ್ನೂ ಅವರು ಸ್ಮರಿಸಿದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆಫ್ರಿಕಾಕ್ಕೆ ಕಾಯಂ ಮತ್ತು ಕಾಯಂ ಅಲ್ಲದ ಎರಡೂ ಸದಸ್ಯತ್ವ ವಿಭಾಗಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ದೊರೆಯಬೇಕು ಎಂದು ಪ್ರತಿಪಾದಿಸಿದರು.

ಭಾರತ–ಆಫ್ರಿಕಾ ವ್ಯಾಪಾರ 100 ಶತಕೋಟಿ ಡಾಲರ್ ಸಮೀಪ

ಮೂರು ರಾಷ್ಟ್ರಗಳ ಆಫ್ರಿಕಾ ಪ್ರವಾಸದ ಕೊನೆಯ ಹಂತದಲ್ಲಿರುವ ಜೈಶಂಕರ್, ಭಾರತವು ಆಫ್ರಿಕಾದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ ಎಂದು ತಿಳಿಸಿದರು. ಭಾರತ ಮತ್ತು ಆಫ್ರಿಕಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 100 ಶತಕೋಟಿ ಅಮೆರಿಕನ್ ಡಾಲರ್‌ಗಳ ಸಮೀಪದಲ್ಲಿದೆ ಎಂದರು.

ಭಾರತದ ಬೆಂಬಲದೊಂದಿಗೆ ಆಫ್ರಿಕಾ ಖಂಡದ ವಿವಿಧ ಭಾಗಗಳಲ್ಲಿ 4.5 ಶತಕೋಟಿ ಡಾಲರ್ ಮೌಲ್ಯದ 220ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಅವರು ಮಾಹಿತಿ ನೀಡಿದರು. ಆಫ್ರಿಕಾದಲ್ಲಿ ಹೂಡಿಕೆ ಮಾಡಲು ಭಾರತೀಯ ಉದ್ಯಮಗಳಿಗೆ ಅವರು ಕರೆ ನೀಡಿದರು.

ಆಹಾರ ಭದ್ರತೆ, ಕೃಷಿ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತ–ಆಫ್ರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಅಡ್ವಾ ವಿಜಯಕ್ಕೂ ನಂಟು

1896ರಲ್ಲಿ ಅಡ್ವಾ ಕದನದಲ್ಲಿ ಇಥಿಯೋಪಿಯಾ ಇಟಲಿ ಪಡೆಗಳ ವಿರುದ್ಧ ಸಾಧಿಸಿದ ವಿಜಯವನ್ನು ಸ್ಮರಿಸಿದ ಜೈಶಂಕರ್, ಈ ಐತಿಹಾಸಿಕ ಘಟನೆ ವಸಾಹತುಶಾಹಿ ವಿರೋಧಿ ಹೋರಾಟಗಳಿಗೆ ಸ್ಫೂರ್ತಿ ನೀಡಿತ್ತು ಎಂದು ಹೇಳಿದರು.

ಅಡ್ವಾ ವಿಜಯದ ಸಂದೇಶವು ಭಾರತದ ಸ್ವಾತಂತ್ರ್ಯ ಚಳವಳಿಯೊಂದಿಗೂ ಸಾಮ್ಯ ಹೊಂದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ 2047ರ ಅಭಿವೃದ್ಧಿ ದೃಷ್ಟಿಕೋನ ಮತ್ತು ಆಫ್ರಿಕಾದ ಅಜೆಂಡಾ 2063 ಪರಸ್ಪರ ಪೂರಕವಾದ ಗುರಿಗಳನ್ನು ಹೊಂದಿವೆ ಎಂದು ಜೈಶಂಕರ್ ಹೇಳಿದರು.

ಎರಡೂ ಪ್ರದೇಶಗಳು ಅಭಿವೃದ್ಧಿ, ಆರ್ಥಿಕ ಪ್ರಗತಿ ಮತ್ತು ಜಾಗತಿಕ ಸಹಕಾರದ ಮೂಲಕ ತಮ್ಮ ಗುರಿಗಳನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಬಹುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ, ಜಾಗತಿಕ ನಿರ್ಧಾರಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ಹಾಗೂ ಭಾರತ–ಆಫ್ರಿಕಾ ಆರ್ಥಿಕ ಸಹಕಾರದ ವಿಸ್ತರಣೆ ಅವರ ಭಾಷಣದ ಪ್ರಮುಖ ಅಂಶಗಳಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ