ಮೋಹನ್ ಭಾಗವತ್  
ದೇಶ

ಪಾಶ್ಚಾತ್ಯ ಶಕ್ತಿಗಳ ಟಾರ್ಗೆಟ್ ಭಾರತ ಆಗಿದೆ: RSS ಮುಖ್ಯಸ್ಥ ಮೋಹನ್ ಭಾಗವತ್; Video

ತಮ್ಮದೇ ಹಿತಾಸಕ್ತಿಗಳನ್ನು ಸಾಧಿಸಲು ಪ್ರಯತ್ನಿಸುವ ಶಕ್ತಿಗಳು ರಾಜಕೀಯ ಪರಿಸ್ಥಿತಿಯನ್ನು ಬದಲಿಸುವ ಉದ್ದೇಶದಿಂದ ಆಡಳಿತ ಬದಲಾವಣೆಯನ್ನು ಸಾಧನವಾಗಿ ಬಳಸುತ್ತವೆ. ಬಾಂಗ್ಲಾದೇಶ, ನೇಪಾಳ, ಫ್ರಾನ್ಸ್ ಮತ್ತು ಅಲ್ಬೇನಿಯಾದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಉಲ್ಲೇಖಿಸಿದರು.

ನಾಗ್ಪುರ: ಆಡಳಿತ ಬದಲಾವಣೆಗೆ ಯತ್ನಿಸುತ್ತಿರುವ ಪಾಶ್ಚಿಮಾತ್ಯ ಶಕ್ತಿಗಳ ಅಂತಿಮ ಗುರಿ ಭಾರತವೇ ಆಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗಳು ರಾಜಕೀಯ ಹಿತಾಸಕ್ತಿಗಳ ಸಾಧನಗಳಾಗಿ ಬಳಕೆಯಾಗುವ ಸಾಧ್ಯತೆಯಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಸಮಾಜದಲ್ಲಿ ವಿಭಜನೆ ಹೆಚ್ಚಿಸಬಹುದು ಎಂದು ಎಚ್ಚರಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ಸಮಾವೇಶದಲ್ಲಿ ಇಂದು ಮಾತನಾಡಿದ ಭಾಗವತ್, ನೆರೆಯ ಬಾಂಗ್ಲಾದೇಶ, ನೇಪಾಳ ಹಾಗೂ ಯುರೋಪ್‌ನ ಫ್ರಾನ್ಸ್‌ನಲ್ಲಿ ನಡೆದ ಹಿಂಸಾತ್ಮಕ ದಂಗೆಗಳ ಮಾದರಿಯಲ್ಲೇ ಭಾರತದಲ್ಲೂ ಬೀದಿಗಿಳಿದು ‘ಆಡಳಿತ ಬದಲಾವಣೆ’ ಮಾಡಲು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ. ಆದರೆ, ಇಂತಹ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶ ನೀಡುವುದು ಅಪರೂಪ ಎಂದು ಹೇಳಿದರು.

ಆಡಳಿತವನ್ನು ಬದಲಿಸಿದರೆ ಪರಿಸ್ಥಿತಿಯೂ ಬದಲಾಗುತ್ತದೆ ಎಂದು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಅದು ಎಂದಿಗೂ ಸಂಭವಿಸಿಲ್ಲ ಎಂದರು.

ಭಾರತ ಬಲಿಷ್ಠವಾಗುವುದರಿಂದ ಇಂತಹ ಶಕ್ತಿಗಳ ಪ್ರಭಾವಕ್ಕೆ ಕಡಿವಾಣ ಬೀಳಲಿದೆ. ಹೀಗಾಗಿ, ಭಾರತವನ್ನು ದುರ್ಬಲಗೊಳಿಸಿ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ, ಕೆಲವು ಜಾಗತಿಕ ಶಕ್ತಿಗಳು ಭಾರತ ಅಭಿವೃದ್ಧಿಯಾಗಬೇಕೆಂದು ಬಯಸುತ್ತವೆಯಾದರೂ, ಅದು ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುವುದನ್ನು ಬಯಸುವುದಿಲ್ಲ. ಏಕೆಂದರೆ, ಭಾರತ ಬಲಿಷ್ಠವಾದರೆ ಅವುಗಳ ಪ್ರಾಬಲ್ಯಕ್ಕೆ ಸವಾಲು ಎದುರಾಗಬಹುದು ಎಂದು ಹೇಳಿದರು.

ನಾಗ್ಪುರದಲ್ಲಿ ಆರ್‌ಎಸ್‌ಎಸ್‌ನ ವಿಜಯದಶಮಿ ಉತ್ಸವದ ಅಂಗವಾಗಿ ಮೋಹನ್ ಭಾಗವತ್ ಆಯುಧಗಳಿಗೆ ಪೂಜೆ ನೆರವೇರಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳ ಕುರಿತು ಮಾತನಾಡಿದ ಅವರು, ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸುವ ಬದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಪ್ರತಿಭಟನೆಗಳ ಉದ್ದೇಶವಾಗಿರಬೇಕು ಎಂದರು.

ಸಮಸ್ಯೆಗಳು ಇದ್ದೇ ಇರುತ್ತವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳೂ ಅನಿವಾರ್ಯ. ಆದರೆ, ಪ್ರತಿಭಟನೆಗಳ ಉದ್ದೇಶವೇನಾಗಿರಬೇಕು? ಅವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಹೊಂದಿರಬೇಕು ಎಂದು ಹೇಳಿದರು.

ಸಾರ್ವಜನಿಕ ಹಿತಾಸಕ್ತಿಗಿಂತ ಭಿನ್ನವಾದ ಉದ್ದೇಶಗಳಿಂದ ಪ್ರತಿಭಟನೆಗಳು ನಡೆದಾಗ, ಅವು ರಾಜಕೀಯ ಸಾಧನಗಳಾಗಿ ಬದಲಾಗಬಹುದು. ಇದರಿಂದ ವ್ಯಕ್ತಿಗಳು, ಗುಂಪುಗಳು ಅಥವಾ ಸಿದ್ಧಾಂತಗಳ ವಿರುದ್ಧ ದ್ವೇಷ ಹೆಚ್ಚಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ರಾಜಕೀಯ ನಾಯಕರು, ಪ್ರತಿಭಟನಾಕಾರರು ಮತ್ತು ಆಡಳಿತ ವ್ಯವಸ್ಥೆಯು ತಮ್ಮ ನಡೆಗಳು ಸಮಾಜದಲ್ಲಿ ಕಹಿ ಭಾವನೆ ಅಥವಾ ವಿಭಜನೆಯನ್ನು ಸೃಷ್ಟಿಸದಂತೆ ಎಚ್ಚರ ವಹಿಸಬೇಕು ಎಂದೂ ಮನವಿ ಮಾಡಿದರು.

ನಮ್ಮ ಭಾವನೆಗಳು ಎಷ್ಟೇ ತೀವ್ರವಾಗಿದ್ದರೂ, ಸಂವಿಧಾನ ನಿಗದಿಪಡಿಸಿರುವ ಮಿತಿಗಳನ್ನು, ಸಭ್ಯ ಸಾರ್ವಜನಿಕ ಚರ್ಚೆಯ ನಿಯಮಗಳನ್ನು ಮತ್ತು ಗೌರವಯುತ ನಡವಳಿಕೆಯ ಮಾನದಂಡಗಳನ್ನು ನಾವು ಪಾಲಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್ ಆಪರೇಷನ್ ಕೋಲಾಹಲ: ಸಿದ್ದರಾಮಯ್ಯ ಮೌನವೇಕೆ; ಕಾಂಗ್ರೆಸ್ ನಲ್ಲಿ, ರಾಜಕೀಯ ವಲಯದಲ್ಲಿ ಎದ್ದಿದೆ ಕುತೂಹಲ

ಕಿಮ್ ಜಾಂಗ್-ಉನ್ ನಿಧನ? ಉತ್ತರಾಧಿಕಾರ ಬಿಕ್ಕಟ್ಟಿನ ಭೀತಿ ನಡುವೆ ಸಹೋದರಿ ಕೈಗೆ ಆಡಳಿತ, 9,000 ಚೀನಾ ಸೈನಿಕರ ನಿಯೋಜನೆ!

CJP ನಾಯಕರ ಅತಿಕ್ರಮಣ ಪ್ರಕರಣ ಅಪರಾಧ ವಿಭಾಗಕ್ಕೆ ವರ್ಗಾವಣೆ: ನ್ಯಾಯಾಂಗ ಬಂಧನ ಬೆನ್ನಲ್ಲೇ ಪೊಲೀಸರ ಶಾಕ್

ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ ಶಂಕಿತರು ಸೂರತ್ ನಿಲ್ದಾಣದಲ್ಲಿ ರೈಲು ಹತ್ತಲು ಧಾವಂತ; CCTVಯಲ್ಲಿ ದೃಶ್ಯ ಸೆರೆ; Video

ಅಶಾಂತಿಯ ನಡುವೆ,'ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ'- ಡೊನಾಲ್ಡ್ ಟ್ರಂಪ್! Video