ರಾಹುಲ್ ಗಾಂಧಿ 
ದೇಶ

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ. ನಷ್ಟದ ಎಚ್ಚರಿಕೆ!

ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಟಿಐ, ದೀಪಾವಳಿ ಹಬ್ಬದ ಶಾಪಿಂಗ್ ಭರಾಟೆಯ ಸಮಯದಲ್ಲಿ ಈ ರ‍್ಯಾಲಿ ನಡೆಸಿದರೆ ಸುಮಾರು 10,000 ಕೋಟಿ ರೂಪಾಯಿ ವಹಿವಾಟಿಗೆ ಅಡ್ಡಿಯುಂಟುಮಾಡಬಹುದು ಎಂದು ಎಚ್ಚರಿಸಿದೆ.

ನವದೆಹಲಿ: ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ 'ಇಂಡಿಯಾ' (INDIA) ಒಕ್ಕೂಟದ ರ‍್ಯಾಲಿಯನ್ನು ನವೆಂಬರ್ 10ರ ನಂತರ ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶನಿವಾರ 'ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ'(CTI) ಒತ್ತಾಯಿಸಿದೆ.

ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಟಿಐ, ದೀಪಾವಳಿ ಹಬ್ಬದ ಶಾಪಿಂಗ್ ಭರಾಟೆಯ ಸಮಯದಲ್ಲಿ ಈ ರ‍್ಯಾಲಿ ನಡೆಸಿದರೆ ಸುಮಾರು 10,000 ಕೋಟಿ ರೂಪಾಯಿ ವಹಿವಾಟಿಗೆ ಅಡ್ಡಿಯುಂಟುಮಾಡಬಹುದು ಎಂದು ಎಚ್ಚರಿಸಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ(ರಾಹುಲ್ ಗಾಂಧಿ ಅವರಿಗೆ) ಬರೆದ ಪತ್ರದಲ್ಲಿ, CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು, ಧಂತೇರಸ್ ಮತ್ತು ದೀಪಾವಳಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ರ್ಯಾಲಿ ನಡೆಸಿದರೆ ರಾಮಲೀಲಾ ಮೈದಾನದ ಸುತ್ತಮುತ್ತಲಿನ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳ ಮೇಲೆ ಈ ತೀವ್ರ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ.

ಈ ವರ್ಷ ನವೆಂಬರ್ 6 ರಂದು ಬರುವ ಧಂತೇರಸ್ ಹಬ್ಬದ ಸಂದರ್ಭದಲ್ಲಿ, ದೆಹಲಿಯಲ್ಲಿ ಚಿನ್ನ-ಬೆಳ್ಳಿ, ಎಲೆಕ್ಟ್ರಾನಿಕ್ಸ್, ಬಟ್ಟೆಗಳು, ಪಾತ್ರೆಗಳು, ಹಣ್ಣು, ಸಿಹಿತಿಂಡಿ, ವಾಹನ, ಆಸ್ತಿ ಮತ್ತು ಉಡುಗೊರೆ ವಸ್ತುಗಳಂತಹ ವಿವಿಧ ವಲಯಗಳಲ್ಲಿ ಸುಮಾರು 25,000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಯುತ್ತದೆ ಎಂದು ಗೋಯಲ್ ವಿವರಿಸಿದ್ದಾರೆ.

ನವೆಂಬರ್ 8 ರಂದು ದೀಪಾವಳಿ ಆಚರಿಸಲಾಗುತ್ತದೆ ಮತ್ತು ನಂತರ ನವೆಂಬರ್ 10 ರಂದು 'ಭಾಯಿ ದೂಜ್' (Bhai Dooj) ಹಬ್ಬ ಬರುತ್ತದೆ.

ಹಬ್ಬಗಳಿಗೆ ಒಂದು ವಾರ ಮುಂಚಿತವಾಗಿಯೇ ಮಾರುಕಟ್ಟೆಗಳಲ್ಲಿ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗುತ್ತವೆ. ಹೀಗಾಗಿ, ರ‍್ಯಾಲಿಯನ್ನು ನವೆಂಬರ್ 10ರ ನಂತರ ಮುಂದೂಡುವಂತೆ ವ್ಯಾಪಾರಿಗಳ ಸಂಘಟನೆ ಆಗ್ರಹಿಸಿದೆ.

CTI ಅಂದಾಜಿನ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಕನ್ನಾಟ್ ಪ್ಲೇಸ್, ಇಂಡಿಯಾ ಗೇಟ್ ಮತ್ತು ದೆಹಲಿಯ ಮಧ್ಯಭಾಗದಲ್ಲಿ ನಡೆದ ರ‍್ಯಾಲಿಗಳು, ಮೆರವಣಿಗೆಗಳು ಹಾಗೂ ರಸ್ತೆ ಬಂದ್‌ಗಳಿಂದಾಗಿ ದೆಹಲಿಯ ವ್ಯಾಪಾರಿಗಳು ಈಗಾಗಲೇ ಸುಮಾರು 3,000 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬರೀ ವೈಭವ್​, ವೈಭವ್​ ಅಂದ್ರೆ ಹೇಗೆ? ನಿಮ್ಮಿಷ್ಟದಂತೆ ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ಟೀಂ​ ಇಂಡಿಯಾ ಬ್ಯಾಟಿಂಗ್​ ಕೋಚ್ ಶಾಕಿಂಗ್ ಹೇಳಿಕೆ!

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೆ ಚೀನಾ ಕ್ಯಾತೆ, ಗಲ್ವಾನ್ ರೀತಿಯ ಸಂಘರ್ಷ; ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮತ್ತೆ ಮುಖಾಮುಖಿ?

'ಪರ್ಫೆಕ್ಟ್ ಪರ್ಯಾಯ': ನಮನ್‌ ಧೀರ್‌ ಆಲ್ರೌಂಡ್ ಆಟಕ್ಕೆ ಅಶ್ವಿನ್‌ ಫಿದಾ, ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಗೆ ಮೆಚ್ಚುಗೆ!

ಅಂತ್ಯಕ್ರಿಯೆ ವೇಳೆ ಚರ್ಚ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ: 7 ಮಂದಿ ಸಾವು, 34 ಜನರಿಗೆ ಗಾಯ; Video