ಚೆರನಲ್ಲೂರು ಮೂಲಕ ವಲ್ಲರ್ಪಡಂನಿಂದ ಕಲಮಸ್ಸೆರಿಯ ಕಡೆಗೆ ಹೋಗುತ್ತಿದ್ದಾಗ, ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. online desk
ದೇಶ

ಕೊಚ್ಚಿ: ನ್ಯಾಯಾಧೀಶರ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ: 55 ವರ್ಷದ ವ್ಯಕ್ತಿ ಸಾವು!

ಇರಿಂಜಾಲಕುಡದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರ ಪುತ್ರನೆನ್ನಲಾದ ಈ ಅಪ್ರಾಪ್ತನನ್ನು ಚೆರನಲ್ಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಚ್ಚಿ: ಅಪ್ರಾಪ್ತನೊಬ್ಬ ತನ್ನ ಐಷಾರಾಮಿ ಕಾರನ್ನು 55 ವರ್ಷದ ವ್ಯಕ್ತಿಯೊಬ್ಬರ ಸ್ಕೂಟಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಆ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆ ಭಾನುವಾರ ಕೇರಳದ ಚೆರನಲ್ಲೂರು ಎಂಬಲ್ಲಿ ನಡೆದಿದೆ.

ಅಕ್ಟೋಬರ್ 11 ರಂದು ನೆಡುಂಬಸ್ಸೆರಿಯಲ್ಲಿ ನಡೆದ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟ ಘಟನೆ ನಡೆದು ಕೇವಲ ಹದಿನೈದು ದಿನಗಳಲ್ಲೇ ಈ ದುರ್ಘಟನೆ ಸಂಭವಿಸಿದೆ.

ಇರಿಂಜಾಲಕುಡದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರ ಪುತ್ರನೆನ್ನಲಾದ ಈ ಅಪ್ರಾಪ್ತನನ್ನು ಚೆರನಲ್ಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಮಂಜಲಿಯ ನಿವಾಸಿ ಜಯಬಾಲಕೃಷ್ಣನ್ ಎಂದು ಗುರುತಿಸಲಾಗಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್ (FIR) ಪ್ರಕಾರ, ಈ ಅಪಘಾತವು ಕಂಟೈನರ್ ರಸ್ತೆಯಲ್ಲಿರುವ ಫೋರ್ಡ್ ಶೋರೂಮ್ ಬಳಿ, ನಸುಕಿನ ಜಾವ ಸುಮಾರು 2:20 ರ ಸುಮಾರಿಗೆ ನಡೆದಿದೆ.

ವಲ್ಲರ್ಪಾದಂನಿಂದ ಚೆರನಲ್ಲೂರು ಮಾರ್ಗವಾಗಿ ಕಲಮಸ್ಸೆರಿಯತ್ತ ಸಾಗುತ್ತಿದ್ದ ಕಾರು, ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಗೆ ಜಯಬಾಲಕೃಷ್ಣನ್ ಗಂಭೀರವಾಗಿ ಗಾಯಗೊಂಡಿದ್ದು, ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದಾರೆ.

ತಮ್ಮ ಸಂಬಂಧಿ ಚಿತ್ತೂರಿನಲ್ಲಿ ಸಣ್ಣ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದರು ಎಂದು ಅವರ ಕುಟುಂಬಸ್ಥರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆ ಉಪಹಾರ ಗೃಹಕ್ಕೆ ಸಾಗಿಸುತ್ತಿದ್ದಿರಬಹುದಾದ ಅಕ್ಕಿ ಮತ್ತು ಇತರ ಆಹಾರ ಪದಾರ್ಥಗಳು ಅಪಘಾತ ನಡೆದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮೃತದೇಹವನ್ನು ಕಲಮಸ್ಸೆರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಆರೋಪ ಹಾಗೂ ನಿರ್ಲಕ್ಷ್ಯದ ಕೃತ್ಯದಿಂದ ಸಾವು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್‌ಗಳು 281 ಮತ್ತು 106(1) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ, Video

ಖರ್ಗೆ ಭಾಷಣದ ವೇಳೆ 'ಮೋದಿ ಎಲ್ಲೂ ಹೋಗಲ್ಲ ಎಂದ ವ್ಯಕ್ತಿ: ಕಾಂಗ್ರೆಸ್ ಕಾರ್ಯಕರ್ತರಿಂದ ಹಿಗ್ಗಾಮುಗ್ಗ ಥಳಿತ, Video

'ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ, ಆದರೆ ಹಿಂದುತ್ವನಲ್ಲ' - ದಿಗ್ವಿಜಯ್ ಸಿಂಗ್

ಸ್ಟಿಂಗ್‌ ಆಪರೇಷನ್: ಒತ್ತಡಕ್ಕೆ ಮಣಿದು ನಾನು ಸುಳ್ಳು ಹೇಳಿದ್ದೆ, ಸಿದ್ದರಾಮಯ್ಯರನ್ನ ಭೇಟಿಯೇ ಆಗಿಲ್ಲ- ಮುಸುಕುಧಾರಿ ಮಹಿಳೆ!

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ! Video