ಮಲ್ಲಿಕಾರ್ಜುನ ಖರ್ಗೆ 
ದೇಶ

'ಮತ ಗಳ್ಳತನ' ಪ್ರತಿಭಟನೆ ನಡುವೆ ಅ. 30 ರಿಂದ ನ. 1 ರವರೆಗೆ ದೆಹಲಿಯಲ್ಲೇ ಇರುವಂತೆ ಕಾಂಗ್ರೆಸ್ ಸಂಸದರಿಗೆ ಸೂಚನೆ!

ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಅಕ್ರಮಗಳ ವಿರುದ್ಧ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲೇ ಈ ನಿರ್ದೇಶನ ಹೊರಬಿದ್ದಿದೆ.

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ECI) ನಡೆಸಿದೆ ಎನ್ನಲಾದ 'ಮತ ಕಳ್ಳತನ' ಮತ್ತು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ದೆಹಲಿಯಲ್ಲೇ ಹಾಜರಿರುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 30, 31 ಮತ್ತು ನವೆಂಬರ್ 1 ರಂದು ರಾಷ್ಟ್ರ ರಾಜಧಾನಿಯಲ್ಲಿ ಹಾಜರಿರುವಂತೆ ಖರ್ಗೆ ಅವರು ಸಂಸದರನ್ನು ಕೋರಿದ್ದಾರೆ. ಮತ ಗಳ್ಳತನ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆ, ಭಾರತೀಯ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತರು ಎಸಗಿರಬಹುದಾದ ಅಕ್ರಮ ಬಹಿರಂಗಪಡಿಸುವಿಕೆ ಹಿನ್ನೆಲೆಯಲ್ಲಿ, ಎಲ್ಲಾ ಸಂಸದರು ದೆಹಲಿಯಲ್ಲಿ ಹಾಜರಿರಬೇಕೆಂದು ಕೋರಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಅಕ್ರಮಗಳ ವಿರುದ್ಧ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲೇ ಈ ನಿರ್ದೇಶನ ಹೊರಬಿದ್ದಿದೆ. ಈ ಮೂರು ದಿನಗಳ ಕಾಲ ದೆಹಲಿಯಲ್ಲಿಯೇ ಇರುವಂತೆ ಕಾಂಗ್ರೆಸ್ ತನ್ನ ಸಂಸದರಿಗೆ ಸೂಚಿಸಿದೆ.

ನವೆಂಬರ್ 1 ರ ರಂದು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ 'ಮತ ಉಳಿಸಿ, ದೇಶ ಉಳಿಸಿ' ಶೀರ್ಷಿಕೆಯಡಿ ಬೃಹತ್ Rally ನಡೆಯಲಿದೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ ಹಾಗೂ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ rally ಯಲ್ಲಿ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಮತ್ತು ವ್ಯಾಪಾರಿಗಳು ಭಾಗವಹಿಸಬೇಕೆಂದು ಭಾನುವಾರ ಕರೆ ನೀಡಿದ್ದಾರೆ.

ನಮ್ಮ ಮತಗಳನ್ನು ಕದಿಯಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾವು ಇದನ್ನು ಸುಮ್ಮನೆ ಸಹಿಸಿಕೊಳ್ಳುವುದಿಲ್ಲ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ. ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ಪ್ರಶ್ನೆಗಳನ್ನು ಕೇಳಿದವರ ಮೇಲೆ ಲಾಠಿಗಳನ್ನು ಬಳಸಲಾಗಿದೆ. ಈಗ ದೇಶವು ಇದಕ್ಕೆ ಪ್ರತಿಕ್ರಿಯಿಸುತ್ತಿದೆ. ನ.1 ರಂದು ದೆಹಲಿಗೆ ಹೋಗೋಣ. 'ಮತವನ್ನು ಉಳಿಸಿ - ದೇಶವನ್ನು ಉಳಿಸಿ' ಎಂಬ ಘೋಷಣೆಯೊಂದಿಗೆ ನಡೆಯಲಿರುವ ಈ ಬೃಹತ್ rally ಯಲ್ಲಿ ಪಾಲ್ಗೊಳ್ಳಿ" ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ! Video

ಫ್ರಾನ್ಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳು: ಭುಗಿಲೆದ್ದ ಸಂಘರ್ಷ; 1,000 ಮಂದಿ ಬಂಧನ

ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್

3 ರಾಜ್ಯಗಳಲ್ಲಿ ದಾಳಿ, 100 ಕೋಟಿ ರೂ. ಹವಾಲಾ ವಹಿವಾಟು ಬಯಲು: 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ' : ಅಮಿತ್ ಶಾ

ನಿಮ್ಮ ದೇಶದ ಅಸಲಿ ಆಡಳಿತಗಾರರೇ ಸೇನೆ, ಮಿಲಿಟರಿ ತಾಳಕ್ಕೆ ಕುಣಿಯುವ ನಕಲಿ ಸರ್ಕಾರ ನಿಮ್ಮದು: ವಿಶ್ವಸಂಸ್ಥೆಯಲ್ಲಿ ಪಾಕ್ ಮುಖವಾಡ ಕಳಚಿದ ಭಾರತ..!